Operation London Cafe movie coming soon. ಅತೀ ಶೀಘ್ರದಲ್ಲೇ ತೆರೆಗೆ ಬರುವ ಸಿದ್ಧತೆಯಲ್ಲಿರುವ ‘ಅಪರೇಷನ್ ಲಂಡನ್ ಕೆಫೆ’!
ಅತೀ ಶೀಘ್ರದಲ್ಲೇ ತೆರೆಗೆ ಬರುವ ಸಿದ್ಧತೆಯಲ್ಲಿರುವ ‘ಅಪರೇಷನ್ ಲಂಡನ್ ಕೆಫೆ’!
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಬಹು ನಿರೀಕ್ಷೆಯ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಮಾಸ್ ಆಕ್ಷನ್ ಆಪರೇಷನ್ ಲಂಡನ್ ಕೆಫೆ ಚಿತ್ರ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇಂದು ಜೂನ್ ಐದನೇ ತಾರೀಕು ನಾಯಕ ನಟ ಕವೀಶ್ ಶೆಟ್ಟಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರತಂಡದ ಪರವಾಗಿ ವಿಶೇಷವಾಗಿ ಶುಭ ಹಾರೈಸುತ್ತಾ ಸಕಾಲದಲ್ಲಿ ಎಲ್ಲ ಕೆಲಸವನ್ನು ಮುಗಿಸಿ ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ಹೇಳಿಕೊಂಡಿದ್ದಾರೆ.

ಕವೀಶ್ ಮತ್ತು ಮೇಘಾ ಶೆಟ್ಟಿ ಜೊತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ ವಿರಾಟ್ ಮಡಕೆ ಪ್ರಸಾದ್ ಕಾಂಡೇಕರ್ ಹಾಗೂ ಕನ್ನಡದ ಅರ್ಜುನ್ ಕಾಪಿಕಾಡ್, ಬಿ ಸುರೇಶ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಯುವ ಸಂಗೀತ ನಿರ್ದೇಶಕ ಪ್ರಾನ್ಶು ಝಾ ಸಂಗೀತವಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಜೊತೆಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ ಅನುಭವವಿರುವ ಡಿ. ನಾಗಾರ್ಜುನ್ ಛಾಯಾಗ್ರಹಣವಿದೆ.

ಕಲಾ ನಿರ್ದೇಶಕ ವರದರಾಜ್ ಕಾಮತ್, ಕೆ. ಎಂ. ಪ್ರಕಾಶ್ ಸಂಕಲನದ ಜೊತೆಯಲ್ಲಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಮತ್ತು ವಿಕ್ರಂ ಮೊರ್, ಅರ್ಜುನ್ ಮತ್ತು ಮಾಸ್ ಮಾದ ವಿಶೇಷವಾಗಿ ಸಂಯೋಜಿಸಿದ ಸಾಹಸವಿದೆ.

ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂ ಲಾಂಛನದ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.