Oo..manase director another one new movie started. ಓ ಮನಸೇ ನಿರ್ದೇಶಕರ ಹೊಸ ಚಿತ್ರ ಪ್ರೊಡಕ್ಷನ್ ನಂ.1

ಓ ಮನಸೇ ನಿರ್ದೇಶಕರ
ಹೊಸ ಚಿತ್ರ ಪ್ರೊಡಕ್ಷನ್ ನಂ.1

ಈ ಹಿಂದೆ ನವರಂಗಿ, ಹಳ್ಳಿ ಪಂಚಾಯ್ತಿ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅಭಿನಯದ ಓ ಮನಸೇ ಸೇರಿದಂತೆ ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿದ್ದ ಡಿ.ಜಿ. ಉಮೇಶ್ ಗೌಡ ಅವರೀಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.

ಇದು ಅವರ ನಿರ್ದೇಶನದ ನಾಲ್ಕನೇ ಚಿತ್ರವಾಗಿದ್ದು, ಲವ್, ಆಕ್ಷನ್ ಜೊತೆಗೆ ಸೆಂಟಿಮೆಂಟ್ ಡ್ರಾಮಾ ಕಥಾಹಂದರ ಒಳಗೊಂಡಿದೆ.
ಆಗಸ್ಟ್ 9 ರಿಂದ ಬೆಳಗಾವಿಯಲ್ಲಿ ಮುಹೂರ್ತ ನಡೆಸಿ, ಬೆಳಗಾವಿ, ಬೆಂಗಳೂರು ಸುತ್ತಮುತ್ತ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಕೇರಳ, ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ‌.


ಈ ಚಿತ್ರವನ್ನು ಶ್ರೀ ಸ್ನೇಹ ಕಂಬೈನ್ಸ ಬ್ಯಾನರ್ ಅಡಿ ಪ್ರೊಡಕ್ಷನ್ ನಂಬರ್ 1 ಶೀರ್ಷಿಕೆಯಡಿ ಶೇಖರ್ ನಾ ಕಾಲೇರಿ ಅವರು ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕನಾಗಿ ಸಂತೋಷ್, ನಾಯಕಿಯಾಗಿ ಅನುಷಾ ರೈ, ಉಳಿದ ಪಾತ್ರಗಳಲ್ಲಿ ಶೋಭರಾಜ್, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಅಭಿಜಿತ್, ಶಂಕರ್ ಅಶ್ವಥ್, ದಿವ್ಯಾ ಗೌಡ ಮುಂತಾದವರು ನಟಿಸುತ್ತಿದ್ದಾರೆ.


ಈ ಚಿತ್ರಕ್ಕೆ ಡಿ.ಜಿ.ಉಮೇಶ್ ಗೌಡ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಹ ನಿರ್ಮಾಪಕರಾಗಿ ಉದಯ್ ಪದ್ಮಣ್ಣನವರ್, ಸಂತೋಷ್ ಬೆಳಗಾವಿ, ರಮೇಶ್ ಬಸರಿಮರದ, ಬಸವನಾಯ್ಕ್ ಕಾಲೇರಿ ಕಾರ್ಯನಿರ್ವಹಿಸಿದ್ದಾರೆ. ಬಾಬುರಾಜ್ ಅವರ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ, ಬಾಬು ಅವರ ಸಹ ನಿರ್ದೇಶನ, ಸೂರಜ್ ಅವರ ಸಂಗೀತ, ಡಾ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಗೂ ಶ್ರೀನಿವಾಸ್ ಪಿ. ಬಾಬು ಅವರ ಸಂಕಲನವಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor