online maduve offline Shobhana movie release on this week.
ಈ ವಾರ ತೆರೆಗೆ
‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’
ಈ ವಾರ ತೆರೆಗೆ
‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’
ಅಪ್ಸರ ಮೂವೀಸ್ ಲಾಂಛನದಲ್ಲಿ ವೇಂಪಲ್ಲಿ ಬಾವಾಜಿ ನಿರ್ದೇಶನದಲ್ಲಿ ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಹಾಸ್ಯ ಪ್ರಧಾನ ಕಥಾಹಂದರದ ಚಿತ್ರ ಈ ವಾರ ಬಿಡುಗಡೆಗೆಯಾಗಲಿದೆ.

ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಬಾವಾಜಿ ಅವರೇ ಬರೆದಿದ್ದಾರೆ.
ಈಗಿನ ಟ್ರೆಂಡ್ ಗೆ ತಕ್ಕಂತೆ ಕಾಮಿಡಿ, ಫ್ಯಾಮಿಲಿ ಎಂಟರ್ ಟೈನರ್, ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಅನ್ ಲಿಮಿಟೆಡ್ ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್ ಇದರಲ್ಲಿದೆ.

ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಮುಂತಾದವರು ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಾಲು ಕ್ಯಾಮೆರಾ ವರ್ಕ್, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.