One and half movie shooting completed. ಶೂಟಿಂಗ್ ಮುಗಿಸಿದ ‘ಒನ್ ಅಂಡ್ ಹಾಫ್’…ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಉಡುಗೊರೆ

ಶೂಟಿಂಗ್ ಮುಗಿಸಿದ ‘ಒನ್ ಅಂಡ್ ಹಾಫ್’…ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಉಡುಗೊರೆ

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ R. ಚರಣ್ ‘ಒನ್ ಅಂಡ್ ಹಾಫ್’ ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರತಿಕಾಗೋಷ್ಠಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.

ನಟಿ ಮಾನ್ವಿತಾ, ನನಗೆ ಇದು ಸ್ಪೆಷಲ್ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್ ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಗೆ ಕುಂತ್ರೆ ಮಣಿ ಅಣ್ಣ ಸೂಪರ್. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್ ಇತ್ತು. ಶ್ರೇಯಸ್ ಡೈರೆಕ್ಟರ್ ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.

ನಿರ್ದೇಶಕ ಕಂ ನಾಯಕ ಶ್ರೇಯಸ್ ಚಿಂಗಾ ಮಾತನಾಡಿ, ಇದು ತಂತ್ರಜ್ಞನರ ಸಿನಿಮಾ..ಪ್ರತಿಯೊಬ್ಬ ತಂತ್ರಜ್ಞರು ಕೂಡ ಫ್ಯಾಮಿಲಿ ತರ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಈ ಸಮಯದಲ್ಲಿ ಜನ ಥಿಯೇಟರ್ ಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗೆ ಇರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ ಎಂದು ಅಭಿಪ್ರಾಯಪಟ್ಟರು.

ನಿರ್ಮಾಪಕ ಆರ್.ಚರಣ್ ಸುಬ್ಬಯ್ಯ ಮಾತನಾಡಿ, ನಾನು ಗಾಂಧಿನಗರದ ಹುಡ್ಗ. ಶ್ರೇಯಸ್ ಮಾಡಿದ ಡೆವಿಡ್ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಈ ರೀತಿ ಸಿನಿಮಾ ಮಾಡಿದ್ದಾನೆ ಎಂದು. ಯಾವುದಾದರೂ ಕನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವನು ಹೇಳಿದ ಕೇಳಿದ ಕಥೆ ನನಗೆ ಇಷ್ಟವಾಗಿ ಅಡ್ವಾನ್ಸ್ ಕೊಟ್ಟಿದ್ದೆ. ಒಂದೊಳ್ಳೆ ಬ್ಯೂಟಿಫುಲ್ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದರು.

ಈ ಹಿಂದೆ ‘ರಂಗ್‌ಬಿರಂಗಿ’, ‘ಡೆವಿಡ್’, ‘ದಿ ವೆಕೆಂಟ್ ಹೌಸ್’ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದ ನಟ ಶ್ರೇಯಸ್ ಚಿಂಗಾ, ಇದೀಗ ‘ಒನ್ ಅಂಡ್ ಹಾಫ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದು ಇವರ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ‘ಒನ್ ಅಂಡ್ ಹಾಫ್’ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮನರಂಜನೆ ಪಕ್ಕ ಅನ್ನೋದು ಚಿತ್ರತಂಡದ ಭರವಸೆ.ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಹೀರೋ ಹೆಸರು ಕನ್ನಡ ಅಂತಾ ಇಡಲಾಗಿದೆ.

ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, ‘ಸ್ಪರ್ಶ’ ರೇಖಾ, ಅನಂತು, ಸುಂದರಶ್ರೀ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

‘ಒನ್ ಅಂಡ್ ಹಾಫ್’ ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾಗೆ ಸುಲಕ್ಷ್ಮೀ ಫಿಲ್ಮ್ಸ್‌ ಬ್ಯಾನರ್‌ನಡಿ ಆರ್.ಚರಣ್ ಹಣ ಹಾಕುತ್ತಿದ್ದಾರೆ. ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor