Ondu sarala Prema Lathe Review. “ಒಂದು ಸರಳ ಪ್ರೇಮ ಕಥೆ ಮಧುರ ಮನಮೋಹಕ”. RATING – 3.5/5

ಒಂದು ಸರಳ ಪ್ರೇಮ ಕಥೆ ಮಧುರ ಮನಮೋಹಕವಾಗಿದೆ ಸಿನಿಮಾ ಪ್ರಾರಂಭದಿಂದ ಕೊನೆವರೆಗೂ ಯಾವುದೇ ಅನಾವಶ್ಯಕ ದೃಶ್ಯಗಳಿಲ್ಲದ, ಬೋರ್ ಹೊಡೆಸದ ನಿಜಕ್ಕೂ ಒಂದು ಸರಳ ಕಥೆಯ ವಿರಳ ಪ್ರೇಮ ಕಥೆ ಯಾಗಿ ಪ್ರೇಕ್ಷಕನ ಹೃದಯಕ್ಕೆ ಹತ್ತಿರವಾಗುವಂತ ಚಿತ್ರ ಇದಾಗಿದೆ.

ಸಿಂಪಲ್ ಸುನಿಯ ಸರಳ ಸೂತ್ರಗಳು ಚಿತ್ರದಲ್ಲಿ ತುಂಬಾ ಚನ್ನಾಗಿ ಪ್ರೇಕ್ಷಕರನ್ನು ಕಟ್ಟಿ ಕೂರಿಸುತ್ತದೆ. ನಿರ್ದೇಶಕರು ಯಾವುದೇ ಪೈ ಪೋಟಿಗೆ ಬೀಳದೇ, ಯಾವುದೇ ಪಾತ್ರವಾಗಲಿ ವಿಷಯವಾಗಲಿ ರುಚಿಗೆ ತಕ್ಕಷ್ಟು ವಚನ ಭ್ರಷ್ಟರಾಗದೇ ರಚನದಲ್ಲಿ ಸೈ ಎನಿಸಿಕೊಂಡಿದ್ದಾರೆ. ಪ್ರಸನ್ನ ರವರ ಕಥೆಗೆ ಜೀವ ಕೊಟ್ಟು ಸೈ ಎನಿಸಿಕೊಂಡಿದ್ದಾರೆ, ನಿರ್ದೇಶಕ ಸಿಂಪಲ್ ಸುನಿ

ವಿನಯ್ ರಾಜ್ಕುಮಾರ್ ಸಿನಿ ಪಯಣದಲ್ಲಿ ಒಂದು ಒಳ್ಳೆಯ ಪ್ರೇಮ ಮತ್ತು ಭಾವನಾತ್ಮಕ ಚಿತ್ರ ಎನ್ನಬಹುದು. ಈ ಹಿಂದೆ ವಿನಯ್ ರಾಜಕುಮಾರ್ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು ಆದರೆ ಅಷ್ಟೊಂದು ಅವರ ಸಿನಿ ಪಯಣಕ್ಕೆ ಪುಷ್ಠಿ ನೀಡುವಂತ ಚಿತ್ರ ಬಂದಿರಲಿಲ್ಲ ಈ ಚಿತ್ರ ಅವರ ಅಭಿನಯಕ್ಕೆ ಸಾಣೆ ಹಿಡಿದಂತಿದೆ. ವಿನಯ್ ಲೀಲಾ ಜಾಲವಾಗಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತ ನಿರ್ದೇಶಕನಾಗುವ ನಾಯಕನ ಕನಸ್ಸಿನಲ್ಲಿ ಇಬ್ಬರು ನಾಯಕಿಯರು ಪ್ರೇಮದ ಸರಿಗಮದ ರಿದಂ ಬಾರಿಸಿದ್ದಾರೆ.

ಒಂದರ ಹಿಂದೆ ಒಂದು ಟ್ವಿಷ್ಟ್ ಗಳ ಜೊತೆಗೆ ಹಾಸ್ಯಮಯವಾಗಿ ಚಿತ್ರ ಪ್ರಾರಂಭದಿಂದ ಕೊನೆಯ ವರೆಗೆ ಕಥೆ ಸಾಗುವುದೇ ಗೊತ್ತಾಗುವುದಿಲ್ಲ.
ಚಿತ್ರದ ಹಿನ್ನೆಲೆ ಸಂಗೀತ ಸಿನಿಮಾ ಪಯಣದ ಹೆಜ್ಜೆ ಹೆಜ್ಜೆಗೆ ಸಾಥ್ ನೀಡಿದೆ. ವೀರ್ ಸಮರ್ಥ್ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಒಳ್ಳೆಯ ಗೀತೆಗಳನ್ಬು ನೀಡಿದ್ದಾರೆ.

ಆದರೆ ಈ ಚಿತ್ರ ಅವರಿಗೆ ಬೇರೆಯದೇ ರೀತಿಯಲ್ಲಿ ಕೀರ್ತೀಯನ್ನು ತಂದುಕೊಡುವುದರಲ್ಲಿ ಎರಡು ಮಾತಿಲ್ಲ.

ಇನ್ನು ಚಿತ್ರಕ್ಕೆ ಕಾರ್ತಿಕ್ ಶರ್ಮಾ ಹಾಗೂ ಸಭಾಕುಮಾರ್ ರವರು ಕ್ಯಾಮೆರಾ ಕೈ ಚಳಕದಲ್ಲಿ ಯಾವುದೇ ಅಡೆ ತಡೆಯಿಲ್ಲದೇ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ

ರಾಮ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಮೊದಲ ಪ್ರಯತ್ನ ದಲ್ಲೇ ಒಂದು ಒಳ್ಳೆಯ ಚಿತ್ರಕ್ಕೆ ನಿರ್ಮಾಪಕರಾದ ಹೆಗ್ಗಳಿಕೆ ಮೈಸೂರು ರಮೇಶ್ ರವರಿಗೆ ಈ ಚಿತ್ರದಿಂದ ಸಿಕ್ಕಿದೆ.

ಅಷ್ಟೇ ಅಲ್ಲ ಚಿತ್ರದ ಪ್ರತೀಯೊಂದು ಪಾತ್ರ ಸಹಜವಾಗಿ ನೈಜವಾಗಿದೆ. ರಾಘವೇಂದ್ರ ರಾಜಕುಮಾರ್ ಸಾಧು ಕೋಕಿಲ ಚಿತ್ರದಲ್ಲಿ ಅಭಿನಯಿಸಿದ್ದಾರೆ, ಮಲ್ಲಿಕಾ ಸಿಂಗ್ ಮಲ್ಲಿಗೆಯಂತೆ ಘಮಿಸಿದರೆ ಸ್ವಾತಿಷ್ಟ ಸೇವಂತಿಗೆ ಯಂತೆ ಸಂಭ್ರಮಿಸಿದ್ದಾಳೆ.

ಜನಪ್ರಿಯ ಕೃಷ್ಣ ಸೀರಿಯಲ್ ನ ನಾಯಕಿ ರಾಧೆ ಮಲ್ಲಿಕಾಸಿಂಗ್ ಮೊದಲ ಬಾರಿಗೆ ಹಾಡುಗಾರ್ತಿಯ ಪಾತ್ರದಲ್ಲಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಹಾಗೆ ಮತ್ತೊಬ್ಬ ನಾಯಕಿಯಾಗಿ ಒಬ್ಬ ಟಿವಿ ಪತ್ರಕರ್ತೆಯಾಗಿ ಸ್ವಾತಿಷ್ಟ ಕೂಡ ಚನ್ನಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ರಾಜೇಶ್ ನಟರಂಗ ಮೊದಲ ಬಾರಿಗೆ ತಂದೆಯ ಪಾತ್ರವನ್ನು ನಿಭಾಯಿಸುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಹಾಗೆ ಇನ್ನು ಮುಂದೆ ತಂದೆಯ ಪಾತ್ರಗಳು ಅವರನ್ನು ಹುಡುಕಿಕೊಂಡು ಬರಬಹುದು.

ಹಾಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಒಟ್ಟಾರೆ ಸುನಿ ಮತ್ತು ವಿನಿ ಗೆ ಒಂದು ಒಳ್ಳೆಯ ಬ್ರೇಕ್ ಈ ಒಂದು ಸರಳ ಪ್ರೇಮ ಕಥೆ.

ಸುಮಧುರ ಪ್ರೇಮ ಕಾವ್ಯದೊಳಗೆ ಹಲವಾರು ಟ್ವಿಷ್ಟ್ ಗಳು ಪ್ರೇಕ್ಷಕರ ಹುಬ್ಬೇರಿಸುವಂತಿದೆ. ಇದು ಪಕ್ಕಾ ಪೈಸಾ ವಸೂಲ್ ಹಾಗೂ ಸಿನಿಮಾ ಪ್ರಿಯರು ಖುಷಿಯಿಂದ ಚಿತ್ರತಂಡದ ಬೆನ್ತಟ್ಟುವಂತ ಚಿತ್ರ ಇದಾಗಿದೆ.. ಚಿತ್ರ ತಂಡದ ಪ್ರಯತ್ನಕ್ಕೆ ಶುಭವಾಗಲಿ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor