Ondu sarala prema lathe movie Song Released by Golden Star Ganesh. ಒಂದು ಸರಳ ಪ್ರೇಮಕಥೆ’ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್..

‘ಒಂದು ಸರಳ ಪ್ರೇಮಕಥೆ’ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್….ಗುನು ಗುನುಗು ಎಂದು ಹೆಜ್ಜೆ ಹಾಕಿದ ವಿನಯ್-ಮಲ್ಲಿಕಾ

ಸಿಂಪಲ್ ಸುನಿ ನಿರ್ದೇಶಿಸಿ ವಿನಯ್ ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿರುವ ಎಂಎಂ ಲೆಗಸಿಯಲ್ಲಿ ಗುನುಗುನುಗು ಎಂಬ ಮೆಲೋಡಿ ಮಸ್ತಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ ರಿಲೀಸ್ ಮಾಡಿ ವಿನಯ್ ರಾಜ್ ಕುಮಾರ್ ಸಿನಿಮಾಗೆ ಸಾಥ್ ನೀಡಿದರು.

ನಂತರ ಗಣೇಶ್ ಹಾಡು ಬಹಳ ಚೆನ್ನಾಗಿದೆ. ಆ ಹುಕ್ ಲೈನ್ ಬಹಳ ಇಷ್ಟವಾಯಿತು. ಗುನು ಗುನುಗು ಅಂತಾ. ನನಗೆ ಈ ರೀತಿ ಸಾಂಗ್ ಕೇಳಲು ಬಹಳ ಇಷ್ಟ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ವಿನಯ್ ಹಾಗೂ ಹೀರೋಯಿನ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ಅದು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೇಡ್ ಸುನಿ. ಕಥೆ ಮಾಡುವ ವಿಚಾರದಲ್ಲಿ ಕಂಪ್ಲಿಕೇಷನ್ ಇದೆ. ಸುನಿ ಕಥೆ ಹೇಳಬೇಕಾದರೆ ಸಿಂಪಲ್ ಆಗಿ ಹೇಳ್ತಾರೆ. ಸುನಿ ಅವರ ಜೊತೆ ನನ್ನ ದೊಡ್ಡ ಜರ್ನಿ ಇದೆ. ಚಮಕ್ ಆದ್ಮೇಲೆ ಸಿಕ್ತಾ ಇದ್ದೇವು. ಯಾವುದಾದರೂ ಲೈನ್ ಬಂದರೆ ಹೇಳುವವರು. ಮೂರ್ನಾಲ್ಕು ಲೈನ್ ಹೇಳಿದಾಗ ಗೊತ್ತಾಯ್ತು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೆಡ್ ಸುನಿ. ಒಂದ್ ಒಂದು ಸಾರಿಗೆ ಒಂದೊಂದು ಐಡಿಯಾ ತರುತ್ತಾರೆ. ಅದೇ ತರ ಈ ಸಿನಿಮಾ ಕೂಡ ವಿಭಿನ್ನವಾಗಿ ಇರುತ್ತದೆ ಅಂದುಕೊಂಡಿದ್ದೇನೆ. ಸುನಿಯ ಡೈಲಾಗ್, ಬರವಣಿಗೆ ಶೈಲಿ ನಾನು ದೊಡ್ಡ ಅಭಿಮಾನಿ. ಯಾವ ನಿರ್ದೇಶಕನಿಗೆ ಬರವಣಿಗೆ, ಭಾಷೆ ಹಿಡಿತ ಇರುತ್ತದೆಯೋ ಆತನಿಗೆ ತುಂಬಾ ಚೆನ್ನಾಗಿ ಹೊಳೆಯುತ್ತದೆ ಎಲ್ಲಾ. ನಮ್ಮ ಭಾಷೆ, ಅಕ್ಷರ, ವ್ಯಾಕರಣ ಮೇಲೆ ಹಿಡಿತ ಇರುವ ನಿರ್ದೇಶಕರಲ್ಲಿ ಒಬ್ಬರು ಸುನಿ ಎಂದರು.

ನಟ ವಿಜಯ್ ರಾಜ್ ಕುಮಾರ್ ಮಾತನಾಡಿ, ಗುನು ಗುನುಗು ತುಂಬಾ ಇಷ್ಟವಾದ ಹಾಡು. ವೀರ್ ಸಮರ್ಥ್ ಅವರು ತುಂಬಾ ಚೆನ್ನಾಗಿ ಮ್ಯೂಸಿಕ್ ಮಾಡಿದ್ದಾರೆ. ಸಚಿನ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಇದೊಂದೇ ಕೊರಿಯೋಗ್ರಾಫ್ ಸಾಂಗ್ ಈ ಚಿತ್ರದಲ್ಲಿ ಇರುವುದು. ಇಡೀ ಟೀಂಗೆ ಧನ್ಯವಾದ. ಈ ಬಾರಿ ಫೈಟ್ ಇಲ್ಲ ಬರೀ ಪ್ರೀತಿ. ಒಂದು ಸರಳ ಪ್ರೇಮಕಥೆ ನೋಡಿ. ನೆಕ್ಸ್ಟ್ ಆಕ್ಷನ್ ನೋಡಿ.‌ನನ್ನದು ಅತಿಷಯ ಎಂಬ ಪಾತ್ರ. ಚಿಕ್ಕಪೇಟೆಯಲ್ಲಿ ಇಡೀ ಕುಟುಂಬ ಕಥೆ. ಈ ಕಥೆಯನ್ನು ಸುನಿ ಅವರು ತುಂಬಾ ಸರಳವಾಗಿ ಹೇಳಿದ್ದಾರೆ ಎಂದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಿರ್ಮಾಪಕರಾದ ರಮೇಶ್ ಸರ್ ಸಿನಿಮಾಗೆ ಏನೂ ಬೇಕು ಎಲ್ಲಾ ಕೊಟ್ಟಿದ್ದಾರೆ‌. ಪಾತ್ರಕ್ಕೆ ಏನೂ ಬೇಕು ಎಲ್ಲವನ್ನೂ ವಿನಯ್ ಅವರು ಕಲಿತ್ತಿದ್ದಾರೆ. ಸ್ವಾದಿಷ್ಟ, ಮಲ್ಲಿಕಾ ಇಬ್ಬರು ಅದ್ಭುತವಾಗಿ ನಟಿಸಿದ್ದಾರೆ. ಸಚಿನ್ ಅದ್ಭುತವಾಗಿ ಹಾಡು ಬರೆದಿದ್ದಾನೆ. ವೀರ ಸಮರ್ಥ್ ಸರ್ ಫರ್ಪೆಕ್ಟ್ ಟೈಮ್ ಗೆ ಡಿಲಿವರಿ ಮಾಡುವವರು. ಯಾವಾಗಲೂ ಕೀ ಬೋರ್ಡ್ ಮುಂದೆ ಕುಳಿತಿರುತ್ತಾರೆ. ಸಿನಿಮಾ ನೋಡಿದ ನಂತರ ಅವರ ಸ್ಟ್ರೇಂಥ್ ಏನೂ ಅನ್ನೋದು ಗೊತ್ತಾಗುತ್ತದೆ ಎಂದರು.

ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ಸುನಿ ಸರ್ ನನ್ನ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ರಮೇಶ್ ಸರ್ ಅಂತಾ ಪ್ರೊಡ್ಯೂಸರ್ ಎಲ್ಲಾ ಆರ್ಟಿಸ್ಟ್ ಗೆ ಸಿಗಬೇಕು. ತುಂಬಾ ಫ್ರೆಂಡ್ಲಿ. ವಿನಯ್ ಅವರ ಬಗ್ಗೆ ತುಂಬಾ ಹೇಳಬೇಕಿದೆ. ಮುಂದಿನ ಇವೆಂಟ್ ನಲ್ಲಿ ಒಂದೊಂದಾಗಿ ಹೇಳುತ್ತೇ‌ನೆ. ನನಗೆ ಒಳ್ಳೆ ಕೋ ಆರ್ಟಿಸ್ಟ್. ನಿಮ್ಮ ಜೊತೆ ನಟಿಸಲು ಮತ್ತಷ್ಟು ಅವಕಾಶಗಳು ಸಿಗಲಿ. ಟೆಕ್ನಿಷಿಯನ್ಸ್ ತುಂಬಾ ಫ್ರೆಂಡ್ಲಿಯಾಗಿ ಟ್ರೀಟ್ ಮಾಡಿದರು. ಇದು ನನ್ನ ಎರಡನೇ ಮೂವೀ. ಅನುರಾಧಾ ಪಾತ್ರ ನಿಮಗೆ ಇಷ್ಟ ಆಗುತ್ತದೆ ಎಂದರು.

ಮಲ್ಲಿಕಾ ಸಿಂಗ್ ಮಾತನಾಡಿ, ಈ ಅದ್ಭುತ ಪ್ರಾಜೆಕ್ಟ್ ಭಾಗವಾಗಿದ್ದಕ್ಕೆ ಖುಷಿ ಇದೆ. ಮೊದಲು ಈ ಪ್ರಾಜೆಕ್ಟ್ ನಲ್ಲಿ ನಟಿಸುವಾಗ ಭಯವಾಗಿತ್ತು. ಆ ನಂತರ ಎಲ್ಲಾ ಸುಲಭವಾಗಿ ಆಯ್ತು. ನಿಮಗೆ ಈ ಚಿತ್ರ ಇಷ್ಟವಾಗುತ್ತದೆ ಎಂದರು.

ಗುನುಗುನುಗು ಹಾಡಿಗೆ ಸಚಿನ್ ಸಂಘೈ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದ್ದು,
ಕೇಶವ್ ಆನಂದ್ ಧ್ವನಿಯಾಗಿದ್ದಾರೆ.


ವಿನಯ್ ರಾಜ್ ಕುಮಾರ್ ಹಾಗೂ ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಸ್ಪೆಷಲ್ ರೋಲ್ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆದವರು. ಇದೀಗ ಅವರು ‘ಒಂದು ಸರಳ ಪ್ರೇಮಕಥೆ’ ಹೇಳೋದಿಕ್ಕೆ ಬರ್ತಿದ್ದಾರೆ. ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳ 8ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor