Olave Mandata 2 movie Review. ಒಲವೇ ಮಂದಾರದಲ್ಲಿ ಪ್ರೇಮ ಅಮರವಿಲ್ಲಿ
ಒಲವೇ ಮಂದಾರದಲ್ಲಿ ಪ್ರೇಮ ಅಮರವಿಲ್ಲಿ
ನಿರ್ಮಾಣ : ರಮೇಶ್ ಮಾರ್ಗೋಲ್,
ಟಿ.ಎಂ.ಸತೀಶ್
ನಿರ್ದೇಶನ : ಎಸ್.ಆರ್.ಪಾಟೀಲ
ಕಲಾವಿದರು :- ಡಿಂಗ್ರಿ ನಾಗರಾಜ್, ಭವ್ಯ, ಸನತ್, ಪ್ರಜ್ಞಾಭಟ್ ಮುಂತಾದವರು.
ಪ್ರೇಮದ ಪವಿತ್ರತೆಯನ್ನು ಆಗಾಗ ಚಿತ್ರದಲ್ಲಿ ಪರೀಕ್ಷಿಸಿದ್ದಾರೆ ನಿರ್ದೇಶಕರು ಹಾಗೆ ಪ್ರೇಕ್ಷಕನ ತಾಳ್ಮೆಯನ್ನು ಕೂಡ.
ಸಿಲಿಕಾನ್ ಸಿಟಿ ಎಂಬ ಬೆಂಗಳೂರಿನಲ್ಲಿ ಪ್ರೀತಿ, ಪ್ರೇಮ ಅನ್ನೋದು ಕಾಸಿಗೊಂದು ಕೊಸರಿಗೊಂದು ಎಂಬಂತೆ ಸಿಕ್ಕ ಸಿಕ್ಕಲ್ಲಿ ಅದು ತನ್ನ ಶೀಲವನ್ನು ರಸ್ತೆಯಲ್ಲಿ ಹರಾಜಿಗಿಟ್ಟ ಸ್ಥಿತಿಯಲ್ಲಿದೆ.

ಆದರೆ ಈ ಚಿತ್ರದ ನಾಯಕ ತನ್ನ ಪ್ರೀತಿಯ ನೈಜತೆ ಮತ್ತು ಪ್ರಾಮಾಣಿಕತೆಯನ್ನು ನಿಷ್ಕಲ್ಮಶವಾದ ಮನಸ್ಸಿನಿಂದ ಅದನ್ನು ಕಲ್ಮಶಗೊಳಿಸದೇ ಪವಿತ್ರತೆಯನ್ನು ಕೊನೆಯವರೆಗೂ ಕಾಪಾಡಿಕೊಂಡು ಬರುತ್ತಾನೆ ನಾಯಕಿ ಎಷ್ಟೇ ಪೀಡಿಸಿದರು ಮದುವೆ ಆಗೋವರೆಗೆ ಒಂದು ಮುತ್ತನ್ನು ಕೊಡುವುದಿಲ್ಲ
ಇದೇ ಚಿತ್ರದ ಹೈಲೈಟ್.

ಒಲವೇ ಮಂದಾರ 2 ಹೌದು ಚಿತ್ರದ ಶೀರ್ಷಿಕೆ ಹೇಳುವಂತೆ ಇಲ್ಲಿ ಇಬ್ಬರು ನಾಯಕಿಯರು.
ಎಲ್ಲಾ ಪ್ರೇಮಕಥೆಯಂತೆ ಇದು ಕೂಡ ಒಂದು. ಬೆಂಗಳೂರಿನ ಕಚೇರಿಯೊಂದರಲ್ಲಿ ಕೆಲಸ ಮಾಡುವ ನಾಯಕ ಆರ್ಯ ಮತ್ತು ನಾಯಕಿಯ ಧೃತಿಯರ ಮಧ್ಯೆ ಅರಳುವ ಒನ್ ವೇ ಲವ್ ಸ್ಟೋರಿ.
ನಾಯಕನಿಗೆ ಬೇಡದ ಪ್ರೀತಿ ನಾಯಕಿಗೆ ಅವನೇ ಬೇಕು.
ಈ ಒಂದು ತಿಕ್ಕಾಟದಲ್ಲಿ ಬಿಚ್ಚಿಕೊಳ್ಳುವುದೇ
ಆರ್ಯ ಮತ್ತು ಭೂಮಿಯರ ಟ್ರ್ಯಾಜಿಡಿ ಪ್ರೇಮ ಕಥೆ.
ಈ ಕಥೆಯ ಅಸಲಿ ಕಥೆ ಏನು..?
ಹಳ್ಳಿಯಲ್ಲಿ ಭೂಮಿಯನ್ನು ಅಷ್ಟೊಂದು ಪ್ರೀತಿ ಮಾಡುತ್ತಿದ್ದ ಆರ್ಯ ಅವಳನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದಾದರು ಯಾಕೆ..?
ಬೆಂಗಳೂರಿನಲ್ಲಿ ಧೃತಿಯನ್ನು ತಿರಸ್ಕರಿಸಿದ್ದು ಯಾಕೆ..?
ಒಂದು ಪರಿಶುದ್ಧವಾದ ಪ್ರೇಮದ ತಿಳಿನೀರಿಗೆ ಕಲ್ಲೆಸೆದು ಕೆಡಿಸಿದವರು ಯಾರು..? ಕೊನೆಗೆ ಆರ್ಯ ಯಾರೊಂದಿಗೆ ಪ್ರೇಮ ಪಯಣ ಮಾಡುತ್ತಾನೆ ಅನ್ನೋದು ಚಿತ್ರದ ಸಸ್ಪೆನ್ಸ್.

ಇದು ಹೊಸಬರ ಚಿತ್ರ ನಾಯಕ ಸನತ್ ಈಗಾಗಲೇ ನಾಲ್ಕಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದಲ್ಲಿ ಸನತ್ ಪರಿಶ್ರಮ ಕಾಣುತ್ತದೆ. ಸರಿಯಾದ ನಿರ್ದೇಶಕರ ಕೈಗೆ ಸಿಕ್ಕರೆ ಸನತ್ ಒಬ್ಬ ಒಳ್ಳೆಯ ನಟ ಆಗುವುದರಲ್ಲಿ ಎರಡು ಮಾತಿಲ್ಲ.
ಇಲ್ಲೂ ಕೂಡ ತನ್ನ ಪಾತ್ರಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟು ನ್ಯಾಯ ಒದಗಿಸಿದ್ದಾರೆ.
ನಟ ಸನತ್ ಎರಡು ಶೆಡ್ ಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಹಿರಿಯ ನಟ ಡಿಂಗ್ರಿ ನಾಗರಾಜ್, ಹಿರಿಯ ನಟಿ ಭವ್ಯ, ಪ್ರಜ್ಞಾ ಭಟ್ . ಹಾಗೂ ಇತರರು ಪಾತ್ರಗಳಿಗೆ ನ್ಯಾಯವನ್ನು ಸಲ್ಲಿಸಿದ್ದಾರೆ.
ಡಾ.ಕಿರಣ್ ತೊಟಂಬೈಲು ಸಂಗೀತ .ಚಿತ್ರದಲ್ಲಿ ಗಮನ ಸೆಳೆಯುತ್ತದೆ.
ಹಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆಯುವ ಕಥೆಗೆ ಛಾಯಗ್ರಹಣದ ಕೆಲಸ ಚನ್ನಾಗಿ ಬಂದಿದೆ.

ನಿರ್ದೇಶಕರು ಇನ್ನೂ ಸ್ವಲ್ಪ ಚನ್ನಾಗಿ ಕಥೆ ಎಣೆಯ ಬಹುದಿತ್ತು ಎನ್ನಿಸುತ್ತದೆ. ಆದರೂ ಚಿತ್ರ ಒಮ್ಮೆ ಕುಳಿತು ಯಾವುದೇ ಮುಜುಗರವಿಲ್ಲದಂತೆ ನೋಡಬಹುದು.