Not out movie review. ನಾಟ್ ಔಟ್ ಚಿತ್ರದ ವಿಮರ್ಶೆ
ನಾಟ್ ಔಟ್..!
ಇದು ಡಾರ್ಕ್ ಹ್ಯೂಮರ್ ಜೊತೆಗೆ ಒಂದಷ್ಟು ಚಿಂತನೆಗಳಗೆ ತೆರೆದು ಕೊಳ್ಳುವ ವಿಭಿನ್ನ ಕಥೆಯ ಚಿತ್ರ.. ನಾಟ್ ಔಟ್.
ರವಿಕುಮಾರ್ ಹಾಗೂ ಶಂಶುದ್ದೀನ್ ನಿರ್ಮಾಣದಲ್ಲಿ
ರಾಷ್ಟ್ರಕೂಡ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬಂದಿದೆ.
ಅಂಬರೀಶ್ ನಿರ್ದೇಶನದಲ್ಲಿ ರವಿ ಶಂಕರ್ , ಅಜಯ್ ಪೃತ್ವಿ, ಕಾಕ್ರೋಚ್ ಸುದಿ, ಗೋಪಾಲಕೃಷ್ಣ ದೇಶ ಪಾಂಡೆ ರಚನಾ ಇಂದರ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ, ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.
ನಟ ಅಜಯ್ ಪೃಥ್ವಿಯ ಆರಂಭಿಕ ಸಿನಿಮಾ ಪಯಣದಲ್ಲಿ ಪ್ರಮುಖ ಪಾತ್ರದಲ್ಲಿ ಇದು ಎರಡನೇ ಚಿತ್ರ.
ಈಗಾಗಲೇ ಪುರುಷೋತ್ತಮನ ಪ್ರಸಂಗ ಚಿತ್ರದಲ್ಲಿ ಮೊದಲಿಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಈ ನಟ ಮೊದಲ ಚಿತ್ರದಲ್ಲೇ ನೋಡಿದವರ ಮೆಚ್ಚುಗೆಯನ್ನು ಪಡೆದಿದ್ದ ಈತ
ಈಗ ನಾಟ್ ಔಟ್ ನಲ್ಲಿ ಎರಡನೇ ಬಾರಿಗೆ ರಾಷ್ಟ್ರಕೂಟ ಸಂಸ್ಥೆ ನಿರ್ಮಿತ ಚಿತ್ರಕ್ಕೆ ಬಣ್ಣ ಹಚ್ಚಿ ಪ್ರೇಕ್ಷಕರ ಮುಂದೆ ಬಂದಿದ್ದಾನೆ.
ಇಲ್ಲಿ ಒಬ್ಬ ಅಂಬುಲೆನ್ಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ಯಾವುದೇ ಬಿಲ್ಡಪ್ ಗಳಲ್ಲದೇ ಸಾದಾ ಸೀದಾ ನಟಿಸುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲು ಪ್ರಯತ್ನಿಸಿದ್ದಾರೆ.

ಈತನ ಜೊತೆಗೆ ನರ್ಸ್ ಪಾತ್ರದಲ್ಲಿ ರಚನಾ ಇಂದರ್ ಸಾಥ್ ನೀಡುವುದರೆ, ಕಾಕ್ರೋಚ್ ಸುದಿ ನಾಯಕನ ಗೆಳೆಯನಾಗಿ, ಕಾಮಿಡಿ ರೌಡಿಯಾಗಿ ಹಾವು ಹಿಡಿಯುವ ಸ್ನೇಕ್ ಸೀನನಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಹಾಗೇ ಸಲ್ಮಾನ್, ಗೋವಿಂದೇಗೌಡ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಈ ಎಲ್ಲರಿಗಿಂದ ಚಿತ್ರದ ಪ್ರಮುಖ ಪಾತ್ರವೆಂದರೆ.
ರವಿಶಂಕರ್, ಒಂಟಿಕೊಪ್ಪಲ್ ದೇವರಾಜನಾಗಿ
ಈತ ಬಡ್ಡಿ ವ್ಯವಹಾರದ ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲ ರೌಡಿ ಕಂಡವರ ಆಸ್ತಿ ಕಬಳಿಸುವ, ಕಂಡವರ ಹೆಂಗಸರ ಪರ್ಸಿಗೂ ಕೈ ಹಾಕಿ ಕಿತ್ತುಕೊಳ್ಳುವ
ನಿರ್ದಯಿ, ಬಡ್ಡಿ ಹಣಕ್ಕಾಗಿ ಜನರ ರಕ್ತ ಹರಿಸುವಂತ ಕ್ರೂರಿ
ಹಾಗೇ ಹೊರದೇಶದಲ್ಲಿ ನೆಲೆಸಿರುವ ಹಾಗೂ ತಂದೆಯ ಆಸ್ತಿಯನ್ನು ಪಡೆಯಲು ಬರುವ ಗೋಪಾಲ ಕೃಷ್ಣ ದೇಶಪಾಂಡೆ
ಅದಕ್ಕೆ ಅಡ್ಡಪಡಿಸುವ ಖಳನಟ ವಂಚಕ ಒಂಟಿಕೊಪ್ಪಲ್ ದೇವರಾಜ.
ರವಿಶಂಕರ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಇಬ್ಬರ ಅಭಿನಯ ಚಿತ್ರದಲ್ಲಿ ಅದ್ಬುತವಾಗಿದೆ ಎನ್ನಬಹುದು.

ಇಲ್ಲಿ ಹುಲಿ ಕುರಿ ಆಟವನ್ನು ಅಮಾಯಕ ಜನರ ಹಾಗೂ ದೇವರಾಜನೆಂಬ ದುಷ್ಟನ ನಡುವೆ ನಿರ್ದೇಶಕರು ಚನ್ನಾಗಿ ಆಡಿಸಿದ್ದಾರೆ.
ರೋಗಿಗಳನ್ನು ತನ್ನ ಆ್ಯಂಬುಲೆನ್ಸ್ ನಲ್ಲಿ ಕರೆದು ಕೊಂಡು ಆಸ್ಪತ್ರೆಗಳಿಗೆ ಮುಟ್ಟಿಸುವ ಪ್ರಾಮಾಣಿಕ.
ಈತನ ಪ್ರೇಯಸಿ ನರ್ಸಮ್ಮ ಮತ್ತು ಈತ ಇಬ್ಬರು ಹೊರದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಹರ ಸಾಹಸ ಮಾಡುತ್ತಿರುತ್ತಾರೆ.
ಜನರ ಪ್ರಾಣ ಉಳಿಸಲು ಪ್ರಾಮಾಣಿಕವಾಗಿ ದುಡಿಯುವ ಇವರು ಒಂದು ಕ್ರೈಮ್ ಮಾಡುತ್ತಾರ ಎನ್ನುವುದೇ ಪ್ರಶ್ನೆ.
ನಿರ್ದೇಶಕ ಅಂಬರೀಶ್ ಕಥೆಯನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಸಿನಿಮಾ ಆಗಾಗ ಒಂದಷ್ಟು ತಿರುವುಗಳನ್ನು ಪಡೆಯುತ್ತಾ ಕುತುಹಲದ ಝಲಕ್ಕುಗಳನ್ನು ನಿರ್ದೇಶಕರು ಚನ್ನಾಗಿ ಕಟ್ಟಿ ಕಟ್ಟಿ ಕೊಟ್ಟಿದ್ದಾರೆ.

ಚಿತ್ರದಲ್ಲಿ ಸಂಗೀತ ತುಂಬಾ ಚನ್ನಾಗಿದೆ.
ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತಷ್ಟು ಗಟ್ಟಿಕೊಳಿಸಿದೆ.
ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರದ ಓಟಕ್ಕೆ ಮೆರಗು ತಂದಿದೆ.
ಥ್ರಿಲ್ಲಿಂಗ್ ಡಾರ್ಕ್ ಹ್ಯೂಮರ್ ನಲ್ಲಿ ಸಾಗುವ ಚಿತ್ರದ ಕಥೆ ಕ್ಲೇ ಮ್ಯಾಕ್ಸ್ ನಲ್ಲಿ ಯಾರು ಊಹಿಸದ ರೀತಿಯಲ್ಲಿ ಕೊನೆಗೊಳ್ಳುತ್ತದೆ.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಯಲ್ಲಿ ನಡೆಯುವ ಒಂದಿಷ್ಟು ಘಟನೆ ಗಳನ್ನು ನಿರ್ದೇಶಕರು ಚೆನ್ನಾಗಿ ಬಳಸಿ ಕೊಂಡಿದ್ದಾರೆ.

ಕೊರೋನಾ ಸಮಯದಲ್ಲಿ ಒಬ್ಬ ವ್ಯಕ್ತಿ ಹೇಗೆ ಮಾನವೀಯತೆಯ ಮೌಲ್ಯಗಳಿಗೆ ತಲೆ ಬಾಗುತ್ತಾನೆ ಎನ್ನುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಕೊನೆಯದಾಗಿ
ದೇವರಾಜನ ಕ್ರೌರ್ಯಕ್ಕೆ ಸಿಲುಕಿದವರ ಪಾಡೇನು,
ಹೊರ ದೇಶಕ್ಕೆ ಹೊರಟ ಪ್ರೇಮಿಗಳ ಕಥೆ ಏನು.?
ತಂದೆಯ ಆಸ್ತಿಗಾಗಿ ಅನಿವಾಸಿ ಭಾರತೀಯನ ಹೋರಾಟವೇನು ದೇವರಾಜನ ತೋಟಕ್ಕೆ ಹಾವು ಹಿಡಿಯಲು ಬರುವ ಸ್ನೇಕ್ ಸೀನ ಏನಾಗುತ್ತಾನೆ.
ಈ ಎಲ್ಲ ಕುತೂಹಲಕ್ಕೆ ತೆರೆ ಎಳೆಯಲು ಪ್ರೇಕ್ಷಕರು ಚಿತ್ರವನ್ನು ನೋಡಬೇಕು.
ಯಾವುದೇ ಮುಜುಗರ ಪಡದೇ, ಅಸಹ್ಯ ಪಡದೇ, ಮನೆ ಮಂದಿಯಲ್ಲಾ ಕೂತು ನಿರಾತಂಕವಾಗಿ ಚಿತ್ರ ನೋಡಬಹುದು.