Not out movie release on July 19th. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿರುವ, ಅಂಬರೀಶ್ ಎಂ ನಿರ್ದೇಶನದ “ನಾಟ್ ಔಟ್” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ವಾರ ತೆರೆಗೆ “ನಾಟ್ ಔಟ್.
ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿರುವ, ಅಂಬರೀಶ್ ಎಂ ನಿರ್ದೇಶನದ “ನಾಟ್ ಔಟ್” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

“ನಾಟ್ ಔಟ್”ಚಿತ್ರವನ್ನ ನಿರ್ಮಾಪಕ ರವಿಕುಮಾರ್ ರವರು ನಿರ್ಮಾಣ ಮಾಡಿದ್ದಾರೆ. ನಾಯಕನಟನಾಗಿ ಅಜಯ್ ಪೃಥ್ವಿ ಅಭಿನಯಿಸಿದ್ದಾರೆ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಡಾರ್ಕ್ ಹ್ಯೂಮರ್ ಶೈಲಿಯ ವಿಭಿನ್ನವಾದ ಚಿತ್ರವು ಬೆಂಗಳೂರು -ಮೈಸೂರು ಮತ್ತು ಹಲವರು ಜಾಗಗಳು ಚಿತ್ರೀಕರಣ ಮಾಡಲಾಗಿದೆ.

ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. “ನಾಟ್ ಔಟ್” ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿದೆ.