Not out movie hero Ajay Prithvi birthday celebration. ನಾಟ್ ಔಟ್” ನಾಯಕನಿಗೆ ಹುಟ್ಟುಹಬ್ಬದ ಸಂಭ್ರಮ .
“ನಾಟ್ ಔಟ್” ನಾಯಕನಿಗೆ ಹುಟ್ಟುಹಬ್ಬದ ಸಂಭ್ರಮ .
ವಿಶೇಷ ಟೀಸರ್ ಬಿಡುಗಡೆ ಮಾಡಿ ಅಜಯ್ ಪೃಥ್ವಿ ಅವರಿಗೆ ಶುಭಾಶಯ ಕೋರಿದ ಚಿತ್ರತಂಡ .
ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ರವಿಕುಮಾರ್ ಹಾಗೂ ಶಂಶುದ್ದೀನ್ ಅವರು ನಿರ್ಮಿಸಿರುವ ಹಾಗೂ ಅಂಬರೀಶ್ ಎಂ ನಿರ್ದೇಶನದ ಚಿತ್ರ “ನಾಟ್ ಔಟ್”. ಅಜಯ್ ಪೃಥ್ವಿ ಅವರು ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಜಯ್ ಪೃಥ್ವಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಂದರ್ಭದಲ್ಲಿ ವಿಶೇಷ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಜಯ್ ಪೃಥ್ವಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಇತ್ತೀಚಿನ ದಿನಗಳ ಕನ್ನಡ ಚಿತ್ರೋದ್ಯಮದ ವಿದ್ಯಮಾನಗಳನ್ನು ಗಮನಿಸಿದಾಗ “ಔಟ್” ಮತ್ತೆ “ನಾಟ್ ಔಟ್” ಆಟ ಜೋರಾಗಿ ನಡೆಯುತ್ತಿದೆ. ಈ ಆಟದ ಮಧ್ಯೆ “ನಾಟ್ ಔಟ್” ಚಿತ್ರದ ಸದ್ದು ಜೋರಾಗುತ್ತಾ ಇದೆ. “ವಾಸುಕಿ ವೈಭವ್” ಹಾಡಿರುವ “ನಾಟ್ ಔಟ್” ಹಾಡು ಇತ್ತೀಚೆಗೆ ಎಲ್ಲರ ಮೆಚ್ಚುಗೆ ಪಡೆದಿತ್ತು. ಈಗ “ನಾಟ್ ಔಟ್” ಚಿತ್ರಕ್ಕಾಗಿ ಅದಿತಿ ಸಾಗರ್ ಹಾಡಿರುವ ಮತ್ತೊಂದು ಹಾಡು ಜೂನ್ 27 ರಂದು ಬಿಡುಗಡೆಯಾಗಲಿದೆ.
ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿರುವ. ನಿರ್ದೇಶಕ ಅಂಬರೀಶ್ ಸಾಹಿತ್ಯ ಬರೆದಿರುವ. “ದುಃಖ ದುಗುಡಗಳ” ಎಂದು ಆರಂಭವಾಗುವ ಈ ಹಾಡಿನಲ್ಲಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಇನ್ನೊಬ್ಬರ ಜೀವ ಉಳಿಸುವ ಕಾಯಕ ಮಾಡುವ. ಆಂಬುಲೆನ್ಸ್ ಡ್ರೈವರ್ ಗಳ ಜರ್ನಿಯನ್ನು ಕೇಳಬಹುದು. ಸಂಗೀತಕ್ಕಿಂತ, ಧ್ವನಿ, ಧ್ವನಿಗಿಂತ ಸಾಹಿತ್ಯ ಒಂದಕ್ಕೊಂದು ಪೈಪೋಟಿ ಕೊಡುವಂತೆ ಈ ಒಂದು ಹಾಡು ಮೂಡಿ ಬಂದಿದೆ ಎನ್ನುತ್ತಾರೆ ನಿರ್ದೇಶಕರು.

ಅಜಯ ಪೃಥ್ವಿ, ರವಿಶಂಕರ್, ರಚನಾ ಇಂದರ್, ಕಾಕ್ರೋಚ್ ಸುದೀ, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ, ಸಲ್ಮಾನ್, ತಾರಗಣ ಇರುವ “ಡಾರ್ಕ್ ಹ್ಯೂಮರ್” ನಾಟ್ ಔಟ್ ಚಿತ್ರದ ಟ್ರೇಲರ್ ಜುಲೈ 4ರಂದು ಬಿಡುಗಡೆ ಆಗುತ್ತಿದೆ.