Nirbhaya 2 teaser release. ರಾಕ್ ಲೈನ್ ವೆಂಕಟೇಶ್ ಹಾಗೂ ಸಾಯಿಪ್ರಕಾಶ್ ಅವರಿಂದ “ನಿರ್ಭಯ 2” ಚಿತ್ರದ ಟೀಸರ್ ಅನಾವರಣ .
ರಾಕ್ ಲೈನ್ ವೆಂಕಟೇಶ್ ಹಾಗೂ ಸಾಯಿಪ್ರಕಾಶ್ ಅವರಿಂದ “ನಿರ್ಭಯ 2” ಚಿತ್ರದ ಟೀಸರ್ ಅನಾವರಣ .
ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ “ನಿರ್ಭಯ 2” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಹೆಣ್ಣಿನ ಮೇಲಿನ ಶೋಷಣೆಗಳನ್ನು ತಡೆಯುವಂತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.
ಶ್ರಾವ್ಯ ರಾವ್ (ಸಾತ್ವಿಕ), ಅರ್ಜುನ್ ಕೃಷ್ಣ, ಹರೀಶ್ ಜಲೀಲ ಮುಂತಾದವರು ಚಿತ್ರದ ತಾರಬಳಗದಲ್ಲಿದ್ದಾರೆ