24 ಘಂಟೆಗಳ ಒಳಗೆ ರೈಡರ್ ಟ್ರೇಲರ್ 4 ಮಿಲಿಯನ್ ವೀಕ್ಷಣೆ
ನೆನ್ನೆ ಸಂಜೆ 6.54ರಲ್ಲಿ ಬಿಡುಗಡೆಯಾದ ಟ್ರೇಲರ್ ಬಾರಿ ಪ್ರಶಂಸೆಗೆ ಒಳಪಟ್ಟಿದೆ. ಅಷ್ಟೇ ಅಲ್ಲದೇ ಟ್ರೇಲರ್ ಅದ್ಬುತವಾಗಿದೆ, ಆಕ್ಷನ್, ಗ್ಲಾಮರ್ ಜೊತೆ ಜೊತೆಗೆ ಒಂದಷ್ಟು ಸೆಂಟಿಮೆಂಟ್ ದೃಶ್ಯಗಳು ಗಮನ ಸೆಳೆಯುತ್ತದೆ ಹಾಗೆ ಇದೆಲ್ಲದರೊಂದಿಗೆ ಒಂದು ಪ್ರೇಮ ಕಾವ್ಯ ಟ್ರೇಲರ್ ನಲ್ಲಿ ಹೈಲೇಟ್ ಆಗಿ ವಿಜ್ರಂಭಿಸಿದೆ. ನಟ ನಿಕಿಲ್ ಬಹಳ ಲವ ಲವಿಕೆಯಿಂದ ಪ್ರತೀ ದೃಶ್ಯದಲ್ಲೂ ಕಾಣಿಸಿದ್ದಾರೆ. ಇನ್ನು ನಟಿ ಕಾಶ್ಮೀರ ಕನ್ನಡಕ್ಕೆ ಹೊಸ ಪ್ರತಿಭೆ ಅಭಿನಯದಷ್ಟೇ ಮುದ್ದು ಮದ್ದಾಗಿ ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.
ನಿರ್ದೇಶಕ ವಿಜಯಕುಮಾರ್ ಕೊಂಡ ಕನ್ನಡದಲ್ಲಿ ಮೊದಲಬಾರಿಗೆ ನಿರ್ದೇಶನ ಮಾಡಿದ್ದಾರೆ, ಮೊದಲ ಪ್ರಯತ್ನದಲ್ಲೇ ಸೈ ಎನಿಸಿ ಕೊಂಡಿದ್ದಾರೆ.

ನಿಕಿಲ್ ಆಕ್ಷನ್ ಜೊತೆಗೆ ಅಭಿನಯದಲ್ಲೂ ಪರಿ ಪಕ್ವವಾಗಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಚಿತ್ರದ ಟ್ರೇಲರ್ ನೋಡುತ್ತಿದ್ದರೆ ಸಿನಿಮಾ ಗೆಲ್ಲುವ ಎಲ್ಲಾ ಲಕ್ಷಣಗಳು ಪ್ರಬುದ್ದವಾಗಿವೆ ಹಾಗೂ ಪ್ರೇಕ್ಷಕರಲ್ಲಿ ಸಿನಿಮಾ ನೋಡಬೇಕೆಂಬ ಕುತೂಹಲ ಮೂಡಿಸಿದೆ.
ಚಿಕ್ಕಣ್ಣ ಹಾಗೂ ಕೆ ಆರ್ ಪೇಟೆ ಯವರ ಕಾಮಿಡಿಯ ಝಲಕ್ ಗಳು ಟ್ರೇಲರ್ ನಲ್ಲಿ ಚನ್ನಾಗಿ ಮೂಡಿ ಬಂದಿದೆ.
ನಿರ್ಮಾಪಕರಾದ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಶಿವನಂದಿಯ ಸುನೀಲ್ ಕುಮಾರ್ ರವರು ಈಗಾಗಲೆ ಗೆಲುವಿನ ಖುಷಿಯಲ್ಲಿದ್ದಾರೆ.
ಇದೇ ಡಿಸೆಂಬರ್ 24ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ಯಶಸ್ವಿಯಾಗಲಿ, ಚಿತ್ರ ತಂಡಕ್ಕೆ ಶುಭವಾಗಲಿ ಎಂಬುದು ನಮ್ಮ ಆಶಯ.