Ondolle Love Story

ಹೊಸಬರ ಒಂದೊಳ್ಳೆ ಲವ್ ಸ್ಟೋರಿ

ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ದಪಡಿಸಿರುವ ’ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ನಡೆಯಿತು. ಅನಿವಾಸಿ ಭಾರತೀಯ ಮೈಸೂರಿನ ನಿರಂಜನ್‌ಬಾಬು ಪಿನಕಿನ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರು ಅಮೇರಿಕಾದಲ್ಲಿದ್ದರೂ ಕನ್ನಡ ಭಾಷೆಯ ಅಭಿಮಾನದಿಂದ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಾ, ಇಂದು ಅಮೆಜಾನ್‌ದಲ್ಲಿ ಕನ್ನಡ ಚಿತ್ರಗಳು ಪ್ರಸಾರಗೊಳ್ಳಲು ಮೂಲ ಕಾರಣಕರ್ತರಾಗಿರುತ್ತಾರೆ. ಈಗಾಗಲೇ ಶಿವರಾಜ್‌ಕುಮಾರ್, ಸುದೀಪ್, ರಮೇಶ್‌ಅರವಿಂದ್ ಚಿತ್ರದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ. ಪ್ರವೀಣ್‌ಸುತರ್ ನಿರ್ದೇಶನವಿದೆ.

ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸಿರುವುದು ಅಶ್ವಿನ್. ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿ, ಬಿಗ್‌ಬಾಸ್ ಮನೆಗೆ ಹೋಗಿ ಬಂದಿರುವ ಧನುಶ್ರೀ ನಾಯಕಿ. ಗೆಳೆಯನಾಗಿ ಕೈಲಾಸ್‌ಪಾಲ್, ಗೆಳತಿಯಾಗಿ ನಿಶಾಹೆಗಡೆ ಉಳಿದಂತೆ ಕೆಎಸ್‌ಜಿ ವೆಂಕಟೇಶ್,ವಿಂಧುಜ, ಮಲ್ಲುಜಮಖಂಡಿ, ಮಮತಾ ಮುಂತಾದವರು ಅಭಿನಯಿಸಿದ್ದಾರೆ.

ಯೌವನಕ್ಕೆ ಬಂದು ಬದುಕು ಏನು ಎಂಬುದನ್ನು ಅರಿತುಕೊಳ್ಳುವಾಗ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ನಮ್ಮ ಪಯಣ ಏನು ಬೇಕಾದರೂ ಆಗಬಹುದು. ಕೊನೆಗೆ ವಿಷಯಗಳನ್ನು ತಿಳಿದುಕೊಂಡಾಗ ಪ್ರತಿಯೊಬ್ಬರಿಗೂ ಹೌದು ಅನಿಸುತ್ತದೆ. ಹಾಗೆಯೇ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಅವನು ಪ್ರೀತಿಯಲ್ಲಿ ಮೋಸ ಹೋದರೆ, ಅವಳು ಜೀವನದಲ್ಲಿ ನಂಬಿಕೆಯನ್ನು ಕಳೆದುಕೊಂಡಿರುತ್ತಾಳೆ. ಇಬ್ಬರು ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ಇಂತಹ ಆಸಕ್ತಿಕರ ಅಂಶಗಳು ಸಿನಿಮಾದಲ್ಲಿದೆ.

ಏಳು ಹಾಡುಗಳಿಗೆ ಆಕಾಶ್‌ಜಾದವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋಧ್‌ಮಂಡ್ಯ, ಸಂಭಾಷಣೆ ವಿಜಿಯೇಂದ್ರಜೋಡಿದಾರ್, ಸಂಕಲನ ರಾಜ್‌ಶಿವು ಅವರದಾಗಿದೆ. ಚಿಕ್ಕಮಗಳೂರು, ಮಂಗಳೂರು, ಕೇರಳ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸಚಿತ್ ಫಿಲಿಂ ಮುಖಾಂತರ ಸಿನಿಮಾವು ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor