Name Hero New Kannada Movie Shooting Started. ಉಪ್ಪಿ ಅಭಿಮಾನಿ ನಟಿಸ್ತಿರೋ”ನಾನೇ ಹೀರೋ” ಚಿತ್ರಕ್ಕೆ ಚಾಲನೆ

ಉಪ್ಪಿ ಅಭಿಮಾನಿ ನಟಿಸ್ತಿರೋ
“ನಾನೇ ಹೀರೋ” ಚಿತ್ರಕ್ಕೆ ಚಾಲನೆ

ಉಪೇಂದ್ರ ಅಭಿಮಾನಿಯೊಬ್ಬ ನಟಿಸುತ್ತಿರುವ ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಚಿತ್ರ "ನಾನೇ ಹೀರೋ". ಆರ್.ಕೆ.ಗಾಂಧಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ,  ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹಗದೂರು ಅಶೋಕ್ ರೆಡ್ಡಿ, ಮುತ್ಸಂದ್ರ ವೆಂಕಟರಾಮಯ್ಯ,  ಸತ್ಯವಾನಾಗೇಶ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ  ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಲಪಲ್ಲಿ ಸಪ್ತಮಾತೃಕೆಯರ ಸನ್ನಿಧಾನದಲ್ಲಿ  ಇತ್ತೀಚೆಗೆ  ನೆರವೇರಿತು.
 ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಚಿಂತಾಮಣಿಯ ಬಿ. ಎನ್. ಎಸ್ .ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ,  ಚೌಡದೇವನಹಳ್ಳಿಯ ಲಕ್ಷ್ಮಿನಾರಾಯಣ ರೆಡ್ಡಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. 

ಉಪ್ಪಿ ಅಭಿಮಾನಿಯೊಬ್ಬ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೊರಟು, ಅದಕ್ಕಾಗಿ ಆತ ಏನೇನೆಲ್ಲಾ ಸಾಹಸ ಮಾಡುತ್ತಾನೆ ಎಂಬ  ಕಥಾಹಂದರ ಈ ಚಿತ್ರದಲ್ಲಿದೆ. ನಿಮಗೇನ್ ಪ್ರಾಬ್ಲಮ್ಮು ಅನ್ನೋ ಟ್ಯಾಗ್ ಲೈನ್ ಇದಕ್ಕಿದೆ.

ಸಿನಿಮಾ ಇಂಡಸ್ಟ್ರಿ ಅಂದರೆ ಕೆಲವರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆ ಭಯಕ್ಕೆ ಕಾರಣಗಳೇನು ಎಂಬುದನ್ನು ಈ ಚಿತ್ರದ ಮೂಲಕ
ನಿರ್ದೇಶಕ ಆರ್.ಕೆ. ಗಾಂಧಿ ಅವರು ಹೇಳುತ್ತಿದ್ದಾರೆ.


ಈ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಹಗದೂರು ಅಶೋಕ್ ರೆಡ್ಡಿ, ಶೋಭ, ಶೋಭರಾಜ್, ಶಶಿಕುಮಾರ್.ಅನ್ಸರ್ ಬಾಬು, ಮಹಾಂತೇಶ ವಿರೂಪಾಕ್ಷಿ ಸಮಯ್ ಮುಂತಾದವರು ನಟಿಸುತ್ತಿದ್ದಾರೆ.

ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಎಂ. ಎಲ್. ರಾಜ ಅವರ ಸಂಗೀತ, ರಾಜೀವ್ ಕೃಷ್ಣ ಗಾಂಧಿ ಅವರ ಸಾಹಿತ್ಯ, ವಿನಯ್ ಅವರ ಸಂಕಲನ ಈ ಚಿತ್ರಕ್ಕಿದ್ದು ಇನ್ನುಳಿದ ಕಲಾವಿದ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೊಸಕೋಟೆ, ಚಿಂತಾಮಣಿ ಮತ್ತು ಗಾಂಧಿನಗರದ ಹಲವು ಸಿನಿಮಾ ಕಛೇರಿಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor