Na Ninna bidalaare movie review. ನಾ ನಿನ್ನ ಬಿಡಲಾರೆ ಬೆಂಬಿಡದ ದುರಾತ್ಮ.
ಚಿತ್ರ ವಿಮರ್ಶೆ ರೇಟಿಂಗ್ 3/5
ಚಿತ್ರ – ನಾ ನಿನ್ನ ಬಿಡಲಾರೆ
ನಿರ್ಮಾಣ ಸಂಸ್ಥೆ- ಕಮಲ ಉಮಾ ಭಾರತಿ
ನಿರ್ಮಾಪಕರು – ಭಾರತಿ ಬಾಲಿ
ನಿರ್ದೇಶನ – ನವೀನ್ GS.
ಛಾಯಾಗ್ರಹಣ – ವೀರೇಶ್ S.
ಸಂಗೀತ – M.S. ತ್ಯಾಗರಾಜ
ಸಂಕಲನ – ದೀಪಕ್ C.S.
ಕಲಾವಿದರು – ಅಂಬಾಲಿ ಭಾರತಿ, ಪಚ್ಚಿ S. , K.S.ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಮಹಂತೇಶ್ ಹೀರೆಮಟ್, ಸೀರುಂಡೆ ರಘು, ಮುಂತಾದವರು.

ಬೆಂಬಿಡದ ವಿಕೃತ ಆತ್ಮ
45 ವರ್ಷಗಳ ಹಿಂದೆ ಕನ್ನಡ ಪ್ರೇಕ್ಷಕರ ಎದೆ ಜೆಲ್ಲೆನ್ನಿಸಿದ ಅನಂತ್ ನಾಗ್, ಲಕ್ಷ್ಮಿ ಅಭಿನಯದ ನಾ ನಿನ್ನ ಬಿಡಲಾರೆ ಕನ್ನಡದ ಹಾರರ್ ಚಿತ್ರಗಳ ತಾಯಿ ಬೇರು ಎನ್ನಬಹುದು.
ಹಾರರ್ ಚಿತ್ರಗಳಿಗೆ ಅದರದೇ ಆದ ನೋಡುಗರಿದ್ದಾರೆ. ಥ್ರಿಲ್ಲರ್, ಸಸ್ಪೆನ್ಸ್, ಮರ್ಡರ್ ಮಿಸ್ಟ್ರಿ, ಹಾರರ್ ಚಿತ್ರಗಳು ಅಂದಿನಿಂದ ಇಂದಿನವರೆಗೂ ಬೆಂಬಿಡದೆ ಕಾಡುತ್ತಲೇ ಇವೆ. ಈ ದೆವ್ವಗಳ ಸುತ್ತಾ ಹಲವಾರು ಕಥೆಗಳು ಹುಟ್ಟಿಕೊಂಡಿವೆ, ತೆರೆಯ ಮೇಲೆ ಅಬ್ಬರಿಸಿವೆ ಕೂಡ.
ಈಗ ಅದೇ ನಿಟ್ಟಿನಲ್ಲಿ 45 ವರ್ಷಗಳ ಹಿಂದಿನ ನೆನಪನ್ನುಮರುಕಳಿಸಲು ಅದೇ ಶೀರ್ಷಿಕೆಯಲ್ಲಿ ಮತ್ತೆ ನಾ ನಿನ್ನ ಬಿಡಲಾರೆ ಚಿತ್ರದ ತೆರೆ ಕಂಡಿದೆ.

ಆದರೆ ಆ ಕಥೆಗೂ ಈ ಕಥೆಗೂ ಯಾವುದೇ ಹೋಲಿಕೆ ಇಲ್ಲ. ಮೇಕಿಂಗ್, ಕಥೆ, ನಟನೆ ವಿಷಯ ಯಾವ ಹೋಲಿಕೆಯೂ ಈ ಚಿತ್ರಕ್ಕಿಲ್ಲ.
ಕಮಲ ಉಮಾ ಭಾರತಿ ನಿರ್ಮಾಣದಲ್ಲಿ ಚಿತ್ರ ಬೆಳ್ಳಿತೆರೆಯ ಮೇಲೆ ಮೂಡಿ ಬಂದಿದೆ.
ನವೀನ್ ಜಿ.ಎಸ್. ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ನವೀನ್ ಕಥೆ ಹೇಳುವಲ್ಲಿ ಎಲ್ಲೂ ಎಡವದೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ದೆವ್ವಗಳ ಚಿತ್ರವೆಂದರೆ ಅದೊಂದು ಹಳೆಯ ಪಾಳು ಮನೆ, ಅಥವಾ ದೊಡ್ಡ ಬಂಗಲೆ ಅದರೊಳಗೆ ಎಂಟ್ರಿ ಕೊಡುವ ನಾಯಕ, ನಾಯಕಿ, ಒಂದಷ್ಟು ಜನ ಸ್ನೇಹಿತರು ನಂತರ ದೆವ್ವಗಳ ಚಮಕ್ ಚಮೇಲಿಯಂತ ಮಾಮೂಲಿ ಕಥೆಗೆ ಜೋತು ಬೀಳದೆ ನವೀನ್ ಬೇರೆ ರೀತಿಯಲ್ಲಿ ಹೇಳಿದ್ದಾರೆ.
ದೆವ್ವ ಹಳೆಯದಾದರೂ ವಿಷಯ ಹೊಸದಾಗಿದೆ, ಕಥೆಯ ನಿರೂಪಣೆಯಲ್ಲಿ ಒಂದಷ್ಟು ನಿಗೂಡತೆಯ ಜೊತೆಗೆ ಕೌತುಕವನ್ನು ಕಾಪಾಡಿಕೊಂಡಿದ್ದಾರೆ.

ಆದೊಂದು ಬಾಲ್ಯದಲ್ಲಿ ಶಾಲೆಯಲ್ಲಿ ಅರಳಿದ ಪ್ರೇಮ, ಅದು ದೊಡ್ಡದಾಗಿ ಟಿಸಿಲೊಡೆದು ಹೂ ಬಿಟ್ಟು ಘಮ ಸೂ ಸುವ ಮುಂಚೆಯೇ ಮುದುಡಿ ಹೋದಾಗ ಆಗುವ ಅನಾಹುತವೇ ಈ ಚಿತ್ರದ ಕಥೆ.
ಇದು ಸ್ವಲ್ಪ ವಿಭಿನ್ನವಾದ ದೆವ್ವದ ಕಥೆ.
ಮೊದಲ ಬಾರಿಗೆ ನಾಯಕಿಯಾಗಿ ತೆರೆಯ ಮೇಲೆ ಅಂಬಾಲಿ ಭಾರತಿ ಅಬ್ಬರಿಸಿದ್ದಾರೆ. ಲವ್, ಸೆಂಟಿಮೆಂಟ್, ಆಕ್ಷನ್ ಎಲ್ಲದರಲ್ಲೂ ನ್ಯಾಯ ಒದಗಿಸಿದ್ದಾರೆ.
ಮೊದಲ ಬಾರಿಗೆ ಬಣ್ಣ ಹಚ್ಚಿದ್ದರೂ ಆಕ್ಷನ್ ದೃಶ್ಯಗಳಲ್ಲಿ ಲೀಲಾ ಜಾಲವಾಗಿ ಅಭಿನಯಿಸಿದ್ದಾರೆ
ಅವರ ತಾಯಿಯೇ ಚಿತ್ರದ ನಿರ್ಮಾಪಕಿಯಾಗಿರುವುದು ಮತ್ತೊಂದು ವಿಶೇಷ.
ಚಿತ್ರದಲ್ಲಿ ನಾಯಕನಾಗಿ ಪಚ್ಚಿ ಅಭಿನಯಿಸಿದ್ದಾರೆ.
ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನು K.S.ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಮಹಂತೇಶ್ ಹೀರೆಮಟ್, ಸೀರುಂಡೆ ರಘು, ಮುಂತಾದವರು ಚಿತ್ರದ ಭಾಗವಾಗಿದ್ದಾರೆ
M.S. ತ್ಯಾಗರಾಜು ರವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚನ್ನಾಗಿ ಮೂಡಿಬಂದಿದೆ.
ರೀ ರೆಕಾರ್ಡಿಂಗ್ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ.
ವೀರೇಶ್ S. ರವರ ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ.
ಒಟ್ಟಿನಲ್ಲಿ ನಾ ನಿನ್ನ ಬಿಡಲಾರೆ ಚಿತ್ರ ಒಮ್ಮೆ ನೋಡಬಹುದು.