Mukha Jeeva movie review. “ಮೂಕ ಜೀವದ ಶೋಕ ಪಯಣ” ಮೂಕ ಜೀವ ಚಿತ್ರದ ವಿಮರ್ಶೆ
ಚಿತ್ರ: ಮೂಕಜೀವ
ಚಿತ್ರ ವಿಮರ್ಶೆ
ರೇಟಿಂಗ್ – 3/5.
ನಿರ್ಮಾಪಕರು : ವೆಂಕಟೇಶ್
ನಿರ್ದೇಶಕರು : ಶ್ರೀನಾಥ್ ಕಶ್ಯಪ್
ಸಂಗೀತ : ವಿ.ಮೋಹರ್
ಛಾಯಾಗ್ರಹಣ : ವಿ. ಪವನ್ ಕುಮಾರ್
ಕಲಾವಿದರು – ಶ್ರೀ ಹರ್ಷ, ಅಪೂರ್ವಶ್ರೀ, ಕಾರ್ತಿಕ್ ಮಹೇಶ್, ರಮೇಶ್ ಪಂಡಿತ್, ಅನಂತ್ ವೇಲು ಕೆಂಪೇಗೌಡ, ಮೇಘಶ್ರೀ, ಮುಂತಾದವರು.
ಮೂಕಜೀವದ ಶೋಕ ಪಯಣ
ಕಿವಿ, ಕಣ್ಣು, ಮೂಗು, ಬಾಯಿ, ಮಾತು ಎಲ್ಲವೂ ಚನ್ನಾಗಿದ್ದವರೇ ಬದುಕುವುದು ಕಷ್ಟವಾಗಿರುವ ಈ ಕಾಲದಲ್ಲಿ. ಮಾತುಬಾರದ ಕಿವಿ ಕೇಳದ ಅನಾಥ ಹುಡುಗನ ಕಥೆ ಏನಾಗಬೇಕು ಇದು ಮೂಕಜೀವದ ಕಥೆ, ವ್ಯಥೆ.
ಕಿರುತೆರೆ, ಬೆಳ್ಳಿತೆರೆಯಲ್ಲಿ ನಟನಾಗಿರುವ ಶ್ರೀನಾಥ್ ಕಶ್ಯಪ್ ಮೂಕಜೀವ ಚಿತ್ರದ ನಿರ್ದೇಶನದ ಜವಾಬ್ದಾರಿ ಹೆಗಲಿಗೆ ಹೊತ್ತಿದ್ದಾರೆ. ಹಾಗೆಯೇ ಅದನ್ನು ಅರ್ಥಪೂರ್ಣವಾಗಿ ನಿಭಾಯಿಸಿದ್ದಾರೆ. ಸಮಾಜದ ಹಲವು ಮಜಲುಗಳಲ್ಲಿ ನಡೆಯಬಹುದಾದ ಹಾಗೂ ನಡೆಯಬಾದಂತ ಮೂಕಜೀವದ ಕಥೆಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ.

ಕಥಾಸಾರಂಶ – ಅದೊಂದು ಪುಟ್ಟ ಹಳ್ಳಿ, ಆ ಪುಟ್ಟ ಹಳ್ಳಿಯಲ್ಲಿ ಒಬ್ಬ ಅನಾರೋಗ್ಯದ ತಾಯಿ ಅವಳಿಗೊಬ್ಬ ಮಾತು ಬಾರದ, ಕಿವಿ ಕೇಳದ ಅಮಾಯಕ ಮಗ. ಊರ ಯಜಮಾನನ ಕಾಮಕ್ಕೆ ಹೆದರಿ ಪ್ರೀತಿಸಿದವನ ಹಿಂದೆ ಓಡಿ ಹೋದ ಮಗಳು.
ಊರ ಜನರ ಕಳ್ಳಾಟ ಮೋಸಗಳಿಗೆ ಸಾಕ್ಷಿಯಾಗುವ ಈ ಬಾಲಕ (ಶ್ರೀ ಹರ್ಷ) ಅದನ್ನು ವ್ಯಕ್ತಪಡಿಸಲು ಮಾತು ಬರುವುದಿಲ್ಲ. ತಾಯಿ ಕಾಯಿಲೆಗೆ ಬಲಿಯಾದರೆ ಹುಡುಗ ಊರ ಜನರ ಕೆಂಗಣ್ಣಿಗೆ ಗುರಿಯಾಗುತ್ತಾನೆ, ಕಾಣದ ಊರಿನಲ್ಲಿ ಅಕ್ಕನಿಗಾಗಿ ಅಲೆದಾಡುತ್ತಾನೆ, ಅಕ್ಕನ ಗಂಡನ ಕಳ್ಳಾಟದಿಂದ ಈ ಹುಡುಗ ಗುರಿ ತಲುಪಲು ಹರ ಸಾಹಸ ಪಡಬೇಕಾಗುತ್ತದೆ. ಕೊನೆಗೆ ನಿರ್ದೇಶಕರು ಆ ಹುಡುಗನ ಕಣ್ಣೀರಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ.
ಈ ವಿಕಲಚೇತನದ ಹುಡುಗ ಎಲ್ಲರಿಗೂ ಚೇತನ ನೀಡುವಂತ ಕಾರ್ಯ ಮಾಡುತ್ತಾನೆ.

ನಿರ್ದೇಶಕ ಶ್ರೀನಾಥ್ ಕಶ್ಯಪ್ ಒಂದು ಒಳ್ಳೆಯ ಮನ ಮಿಡಿಯುವಂತ ಕಥೆಯನ್ನು ಪ್ರೇಕ್ಷಕರ ಮುಂದೆ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.
ಆ ಹುಡುಗನ ಕಷ್ಟ, ಗೋಳಾಟ ಪ್ರೇಕ್ಷಕನ ಕಣ್ಷಲ್ಲಿ ನೀರು ತರಿಸುತ್ತದೆ. ಚಿತ್ರದ ಹಿನ್ನೆಲೆ ಸಂಗೀತ ಚನ್ನಾಗಿ ಮೂಡಿ ಬಂದಿದೆ, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ರವರು ಚಿತ್ರದ ಎಡರು ತೊಡರುಗಳನ್ನು ಸಂಗೀತದ ಮೂಲಕ ಸರಿದೂಗಿಸಿದ್ದಾರೆ.

ಹಾಗೆಯೇ ವಿ. ಪವನ್ ಕುಮಾರ್ ಛಾಯಾಗ್ರಹಣದ ಕಾರ್ಯ ಸಿನಿಮಾಗೆ ಒಳ್ಳೆಯ ಫ್ರೇಮ್ ಹಾಕಿದಂತಿದೆ.
ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರೇ ಅಭಿನಯಿಸಿದ್ದಾರೆ. ಹಾಗೆಯೇ ಪಾತ್ರಕ್ಕೆ ನ್ಯಾಯ ಒದಗಿಸುವುದಲ್ಲಿ ಸಫಲರಾಗಿದ್ದಾರೆ.
ಕಾರ್ತಿಕ್ ಮಹೇಶ್ ಈ ಚಿತ್ರದಲ್ಲಿ ಮೂಕ ಹುಡುಗನ ಭಾವನಾಗಿ ಅಭಿನಯಿಸಿದ್ದಾರೆ.

ಚಿತ್ರದ ಕಥಾನಾಯಕ ಶ್ರೀಹರ್ಷ ಮೊದಲಬಾರಿಗೆ ಬಣ್ಣ ಹಚ್ಚಿದ್ದರು ನುರಿತ ಕಲಾವಿದನಂತೆ ಪ್ರೇಕ್ಷಕರ ಕಣ್ಣಲ್ಲಿ ನೀರು ಬರುವಂತೆ ತಮ್ಮ ಅಭಿನಯ ಕೌಶಲ್ಯವನ್ನು ತೆರೆದಿಟ್ಟಿದ್ದಾನೆ
ಜೆ ಎಂ ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಲನಚಿತ್ರ “ಇದಾಗಿದೆ. ಹಳ್ಳಿಯ ಬಡ ಕುಟುಂಬದಲ್ಲಿ ಪ್ರಾರಂಭವಾಗುವ ಈ ಕಥೆ ಪಟ್ಟಣದಲ್ಲಿ ಅಂತ್ಯವಾಗುತ್ತದೆ. ಯಾವುದೇ ವ್ಯಕ್ತಿ ತಾನು ಸ್ವಾವಲಂಬಿಯಾಗಿ ಹೇಗೆ ಬದುಕಬಹುದು ಎಂಬುದನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ಅಂಗವಿಕಲ ವ್ಯಕ್ತಿಗಳಿಗೆ ತಮ್ಮ ಅಂಗವಿಕಲತೆಯೇ ನ್ಯೂನತೆ ಎಂದು ಭಾವಿಸದೆ ಅದರ ಜೊತೆಗೆ ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬ ಆತ್ಮಸ್ಥೈರ್ಯವನ್ನು ತುಂಬುವ ಕಥಾಹಂದರವನ್ನು ಹೇಳುವ ಚಲನಚಿತ್ರವೇ ಮೂಕ ಜೀವ.
ನಿರ್ಮಾಪಕರಾದ ಶ್ರೀ ಎಂ ವೆಂಕಟೇಶ ಮತ್ತು ಶ್ರೀಮತಿ ಮಂಜುಳಾ ಅವರು ಈ ಚಲನಚಿತ್ರವನ್ನು ಎ.ವಿ.ಎವ್ ಎಂಟರ್ ಟೈನರ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದಾರೆ.
ಕಾರ್ತಿಕ್ ಮಹೇಶ್ (ಬಿಗ್ ಬಾಸ್ ಖ್ಯಾತಿ), ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಒಟ್ಟಿನಲ್ಲಿ ಪ್ರೇಕ್ಷಕರು ಒಂದು ಮನ ಮಿಡಿಯುವಂತ, ಅರ್ಥಪೂರ್ಣ ಕೌಟುಂಬಿಕ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.