Mr. Rani movie review. ಮಿ. ರಾಣಿ ಚಿತ್ರ ವಿಮರ್ಶೆ. “ಅವನು ಅವಳಾದಾಗ”. Rating – 3/5.
ಚಿತ್ರ: ಮಿ. ರಾಣಿ
ನಿರ್ಮಾಣ: ಎಕ್ಸಲ್ ಆರ್ಬಿಟ್ ಕ್ರಿಯೇಷನ್ಸ್
ನಿರ್ದೇಶನ: ಮಧುಚಂದ್ರ
ಸಂಗೀತ : ಜೂಡಾ ಸ್ಯಾಂಡಿ, ರಿತ್ವಿಕ್ ಮುರುಳಿಧರ್
ಛಾಯಾಗ್ರಹಣ : ರವೀಂದ್ರನಾಥ್ T.
ಸಂಕಲನ : ಮಧು ತುಂಬೇಕೆರೆ
ತಾರಾಗಣ : ದೀಪಕ್ ಸುಭ್ರಮಣ್ಯ, ಪಾರ್ವತಿ ನಾಯರ್, ಮಧು ಚಂದ್ರ, ಆನಂದ್ ನೀನಾಸಮ್, ಶ್ರೀ ವತ್ಸ ಶ್ಯಾಮ್, ಲಕ್ಷ್ಮಿ ಕಾರಂತ್, ಮುಂತಾದವರು.
ಎಕ್ಸಲ್ ಆರ್ಬಿಟ್ ಕ್ರಿಯೇಷನ್ಸ್ ಲಾಂಛನದಲ್ಲಿ
ನೂರಕ್ಕೂ ಹೆಚ್ಚು ಜನ ಹಣ ಹೂಡಿ ನಿರ್ಮಾಣ ಮಾಡಿರುವ ಚಿತ್ರ ಮಿ. ರಾಣಿ

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ನಿರ್ದೇಶಕ ಮಧು ಚಂದ್ರ ನಿರ್ದೇಶನದಲ್ಲಿ ಈಗ ಮತ್ತೊಂದು ನವಿರಾದ ಹಾಸ್ಯ ಚಿತ್ರ ಮಿ. ರಾಣಿ ಈ ವಾರ ತೆರೆ ಕಂಡಿದೆ.
ಮಧುಚಂದ್ರ ತಮ್ಮ ಚಿತ್ರಗಳಲ್ಲಿ ಸಮಾಜಕ್ಕೆ ಕಾಮಿಡಿ ಜೊತೆಗೆ ಒಂದೊಳ್ಳೆ ಸಂದೇಶ ನೀಡುತ್ತಾ ಬಂದಿದ್ದಾರೆ. ‘ಮಿ.ರಾಣಿ’ (Mr.Rani) ಎಂಬ ವಿಭಿನ್ನ ಕಾಮಿಡಿ ಜಾನರ್ ನ ಚಿತ್ರ ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಚಿತ್ರ ಕಥೆಯ ನಿರೂಪಣೆಯನ್ನು ಎಲ್ಲೂ ಎಡವದಂತೆ ನಾಜೂಕಾಗಿ ನಿರ್ವಹಿಸಿದ್ದಾರೆ.
ಚಿತ್ರದ ಪೋಸ್ಟರ್ ವಿಭಿನ್ನವಾಗಿದೆ. ಮೇಲೆ ಮಾರ್ಡನ್ ಡ್ರಸ್ ಹಾಕಿರೋ ಹುಡುಗಿ ಒಳಗೆ ಹಳ್ಳಿಯ ಪಟ್ಟಾಪಟ್ಟಿ ನಿಕ್ಕರ್. ಚಿತ್ರ ಬಿಡುಗಡೆಗೂ ಮುಂಚೆ ಗಮನ ಸೆಳೆದಿದ್ದೆ ಈ ಪೋಸ್ಟರ್ ಎನ್ನಬಹುದು.

ಸಿನಿಮಾ ನೋಡಲು ಬರುವ ಪ್ರೇಕ್ಷಕನಿಗೆ ಬೇಕಾಗಿರೋದು ಮನರಂಜನೆ. ಇಲ್ಲಿ ಮನರಂಜನೆ ಚಿತ್ರದುದ್ದಕ್ಕೂ ಕಟ್ಟಿಕೊಟ್ಟಿದ್ದಾರೆ.
“ಲಕ್ಷ್ಮಿನಿವಾಸ” ಧಾರವಾಹಿ ಖ್ಯಾತಿಯ ನಟ ದೀಪಕ್ ಸುಭ್ರಮಣ್ಯ ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕಥಾನಾಯಕ ರಾಜನ ಅಪ್ಪನಿಗೆ ಮಗ ಇಂಜಿನಿಯರ್ ಆಗಿ ದೂರದ ಅಮೇರಿಕಾಗೆ ಹೋಗಬೇಕು ಎನ್ನುವ ಆಸೆ. ಆದರೆ ತನಗಿಷ್ಟವಿಲ್ಲದ ಇಂಜಿನಿಯರ್ ಕೆಲಸ, ಅಮೇರಿಕಾ ಎಲ್ಲವನ್ನು ತೊರೆದು
ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ರಾಜ ಆಕಸ್ಮಿಕವಾಗಿ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತದೆ. ತನ್ನ ಬಾಲ್ಯದ ಕನಸ್ಸಿಗೆ ನೀರೆರೆದಂತಾಗುತ್ತದೆ. ಅಲ್ಲಿಂದ ಶುರುವಾಗುವುದೆ ಮಿ.ರಾಣಿಯ ಕಥೆಯೊಂದಿಗೆ ರಾಜನ ಪಯಣ.

ನಟ ದೀಪಕ್ ಸುಭ್ರಮಣ್ಯ ತಮ್ಮ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಆದರೆ ಇಲ್ಲಿ ಮೈನಸ್ ಅಂದರೆ ಅವರ ಧ್ವನಿ. ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದರೆ ನಿಜಕ್ಕೂ ಚನ್ನಾಗಿರುತಿತ್ತು. ರಾಜನ ಆ ಹಳ್ಳಿಯ ಸೊಗಡಿನ ಭಾಷೆಯಲ್ಲಿ ಅವರ ಧ್ವನಿ ಕಿರಿಕಿರಿ ಎನ್ನಿಸುತ್ತದೆ.
ಇಲ್ಲಿ ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಗಾಸಿಪ್, ಪ್ರೀತಿ, ಪ್ರಣಯ, ಆಸೆ, ಆಕಾಂಕ್ಷೆ ಗಳನ್ನು ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಕಥೆಯೊಳಗಿನ ನಿರ್ದೇಶಕ ನಟಿ ರಾಣಿಯ ಪ್ರೇಮ ಪಾಶಕ್ಕೆ ಬೀಳುತ್ತಾನೆ. ಈ ಪಾತ್ರವನ್ನು ನಿರ್ದೇಶಕ ಮಧುಚಂದ್ರ ನಿಭಾಯಿಸಿದ್ದಾರೆ ಸಿನಿಮಾ ಒಳಗೂ, ಹೊರಗೂ ಎರಡೂ ಕಡೆ ನಿರ್ದೇಶಕನಾಗಿ ಮಿಂಚಿದ್ದಾರೆ.
ಗೆಳೆಯನ ಪಾತ್ರದಲ್ಲಿ ಶ್ರೀವತ್ಸ ಶ್ಯಾಂ ಚಿತ್ರದುದ್ದಕ್ಕೂ ನಾಯಕನಿಗೆ ಸಾಥ್ ನೀಡಿದ್ದಾರೆ.
ಕಥೆಯ ಒಳಗಿನ ಹೀರೋಯಿನ್ ಆಗಿ ಹಾಗೂ ಕಥಾ ನಾಯಕನಿಗೆ ಜೋಡಿಯಾಗಿ ಪಾರ್ವತಿ ನಾಯರ್ ಸಹಜ ನಟನೆಯೊಂದಿಗೆ ಗಮನ ಸೆಳೆಯುತ್ತಾರೆ.
ಋತ್ವಿಕ್ ಮುರುಳೀಧರ್ ಹಿನ್ನೆಲೆ ಸಂಗೀತದ ಜೊತೆಗೆ ಜೂಡಾ ಸ್ಯಾಂಡಿ ಸಂಗೀತ ಮಿ.ರಾಣಿಯನ್ನು ಮೆರೆಸಿದೆ.
ರವೀಂದ್ರನಾಥ್ ರವರು ತಮ್ಮ ಕ್ಯಾಮರಾ ಕಣ್ಣಿಂದ ಚಿತ್ರಕ್ಕೆ ಅಂದವಾದ ಫ್ರೇಮ್ ಕಟ್ಟಿಕೊಟ್ಟಿದ್ದಾರೆ.
ದೀಪಕ್ ಸುಭ್ರಮಣ್ಯ, ಪಾರ್ವತಿ ನಾಯರ್, ಮಧು ಚಂದ್ರ, ಆನಂದ್ ನೀನಾಸಮ್, ಶ್ರೀ ವತ್ಸ ಶ್ಯಾಮ್, ಲಕ್ಷ್ಮಿ ಕಾರಂತ್, ಮುಂತಾದವರು. ಚಿತ್ರದಲ್ಲಿ ತಮ್ಮ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಇಲ್ಲಿ ಚಿತ್ರ ರಂಗದಲ್ಲಿ ನಡೆಯುವ ಒಂದಷ್ಟು ಗಾಸಿಫ್, ಪ್ರೀತಿ, ಪ್ರಣಯ, ಆಸೆ, ಆಕಾಂಕ್ಷೆ ಗಳನ್ನು ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ನಟ ದೀಪಕ್ ಸುಬ್ರಹ್ಮಣ್ಯ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಅದರಲ್ಲಿ 108 ಜನ ಅಭಿಮಾನಿಗಳ ಮನೆಗೆ ʻಮಿ.ರಾಣಿ’ ಚಿತ್ರತಂಡ ಕಳೆದ ವರ್ಷ ಗಣಪತಿ ಹಬ್ಬಕ್ಕೆ ಭೇಟಿ ನೀಡಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದ್ದರು. ಈ ವಿಭಿನ್ನ ಪ್ರಚಾರಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕಿತ್ತು. ಆದರೆ ನಂತರ ಬಿಡುಗಡೆಯ ಸಮಯಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತ್ತದೆ. ಒಂದು ಚಿತ್ರ ಪ್ರೇಕ್ಷಕರನ್ನು ತಲುಪಲು ಪ್ರಚಾರ ತುಂಬಾ ಮುಖ್ಯವಾಗುತ್ತದೆ.
ಕಥೆಯೊಳಗಿನ ನಿರ್ದೇಶಕ, ನಟಿ ರಾಣಿಯ ಪ್ರೇಮ ಪಾಶಕ್ಕೆ ಬೀಳುತ್ತಾನೆ. ಈ ಪಾತ್ರವನ್ನು ನಿರ್ದೇಶಕ ಮಧುಚಂದ್ರ ನಿಭಾಯಿಸಿದ್ದಾರೆ ಸಿನಿಮಾ ಒಳಗೂ, ಹೊರಗೂ ಎರಡೂ ಕಡೆ ನಿರ್ದೇಶಕನಾಗಿ ಮಿಂಚಿದ್ದಾರೆ. ನಟನೆಯಲ್ಲಿ ರಾಜ, ರಾಣಿಯಾಗಿ ದೀಪಕ್ ಸುಭ್ರಮಣ್ಯ ಅದ್ಭುತ ವಾಗಿ ನಿಭಾಯಿಸಿದ್ದಾರೆ. ಈ ರಾಜ, ರಾಣಿಯ ಮಧ್ಯೆ ಏನೆಲ್ಲಾ ನಡೆಯುತ್ತೆ, ಇವರಿಬ್ಬರೂ ಯಾರು, ಕೊನೆಗೆ ರಾಣಿಯ ಅಂತ್ಯ ಹೇಗಾಗುತ್ತದೆ, ರಾಣಿಯ ಸಾವಿನಿಂದ ರಾಜನಿಗೇನು ಲಾಭ, ನಿರ್ದೇಶಕನ ಪ್ರೀತಿಯನ್ನು ರಾಣಿ ಒಪ್ಪುತ್ತಾಳಾ, ಸಿನಿಮಾ ನಟ ರಾಜನಿಗೂ ಸಿನಿಮಾ ನಟಿಗೂ ಪ್ರೇಮ ಆಗುತ್ತದೆಯಾ ಎನ್ನುವ ಎಲ್ಲಾ ಗೊಂದಲಕ್ಕೆ ಪ್ರೇಕ್ಷಕರು ತಪ್ಪದೇ ಮಿ.ರಾಣಿ ನೋಡಬೇಕು, ಮತ್ತು ನೋಡಬಹುದಾದಂತ ಚಿತ್ರ ಇದಾಗಿದೆ.
ಮೊದಲೇ ಹೇಳಿದಂತೆ ಮನರಂಜನೆಗೆ ಕೊರತೆ ಇಲ್ಲದಂತೆ ಚಿತ್ರವನ್ನು ನೋಡಬಹುದು.