Mr Rani movie director speech. ಮಿಸ್ಟರ್ ರಾಣಿ ಚಿತ್ರದ ನಿರ್ದೇಶಕ ಮಧುಚಂದ್ರರವರ ಮನದಾಳದ ಮಾತು.
ಹಾಯ್ …
ನಾನು ಮತ್ತು ನಮ್ಮ ತಂಡ ಮಿಸ್ಟರ್ ರಾಣಿ ಎಂಬ ಸುಂದರ ಕಲಾಕೃತಿ ರಚಿಸಲು ವರ್ಷಗಟ್ಟಲೆ ದುಡಿದಿದ್ದೇವೆ ಮತ್ತು ದಣಿದಿದ್ದೇವೆ…
ಈ ಚಿತ್ರದ ಕತೆಯನ್ನು ನಾನು ಸುಮಾರು 700 ಜನಕ್ಕೆ ಹೇಳಿದ್ದೇನೆ !!! ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ಅದನ್ನು ಮತ್ತಷ್ಟು ತಿದ್ದಿ ತೀಡಿದ್ದೇನೆ !! ಈ ಕತೆಯನ್ನು ತುಂಬಾ ಜನರು ಇಷ್ಟಪಡುತ್ತಾರೆ ಎಂದು ಖಚಿತ ಪಡಿಸಿಕೊಂಡ ನಂತರ ಮುಂದಿನ ಹೆಜ್ಜೆ ಇಟ್ಟಿದ್ದೇನೆ.
ಈ ಪ್ರಾಮಾಣಿಕ ಮತ್ತು ವಿಭಿನ್ನ ಪ್ರಯತ್ನ ನೋಡಿ 150 ಜನ ಫ್ಯಾಮಿಲಿಗಳು ಸೇರಿ ಚಿತ್ರ ನಿರ್ಮಿಸಲು ಮುಂದೆ ಬಂದರು!!!
ಚಿತ್ರದ ರಿಲೀಸ್ ಮುಂಚೆಯೇ ಚಿತ್ರತಂಡದ 150 ಜನ ನಿರ್ಮಾಪಕರು ತಮ್ಮ ಫ್ಯಾಮಿಲಿ, ನೆಂಟರು, ಗೆಳೆಯರು ಎಲ್ಲರನ್ನೂ ಸೇರಿದಂತೆ ಸುಮಾರು 2 ಸಾವಿರ ಜನಕ್ಕೆ ಈಗಾಗಲೇ ಸಿನಿಮಾ ತೋರಿಸಿದ್ದೇವೆ !!

ಸುಮಾರು 200 ಜನರಂತೆ 10 ಶೋಸ್ ಗಳನ್ನು ಸಣ್ಣ ಪ್ರಮಾಣದ ಥಿಯೇಟರ್ ನಲ್ಲಿ ಮಾಡಿ ಪರೀಕ್ಷೆ ಮಾಡಿದ್ದೇವೆ..
ಸೈಂಟಿಫಿಕ್ ಅಪ್ರೋಚ್ ಮಾಡಲು ಪ್ರಯತ್ನ ಪಟ್ಟಿದ್ದೇನೆ. ಸಿನಿಮಾ ನೋಡಿದವರು ಸಖತ್ ಮಜ ಇದೆ ಎಂದು ಹೇಳಿದ ನಂತರವೇ ಪ್ರಚಾರಕ್ಕೆ ಇಳಿದ್ದಿದ್ದು…
ಇಂದು ಆ ಕಲಾಕೃತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.ಅದನ್ನು ದುಡ್ಡು ಕೊಟ್ಟು ಥಿಯೇಟರ್ ನಲ್ಲಿ ನೋಡಿ ಸಂತೋಷ ಪಡುವುದು ಕಲೆಗೆ ನೀವು ಕೊಡುವ ಗೌರವ. ಒಳ್ಳೆಯ ಸಿನಿಮಾಗಳನ್ನು ಪ್ರೀತಿಸಿ ಪ್ರೋತ್ಸಾಹಿಸುವ ಮನಸ್ಥಿತಿ ಇರುವ ಪ್ರೇಕ್ಷಕರ ಸಮೂಹ ಇನ್ನೂ ಉಳಿದಿದೆ ಎಂಬ ನಂಬಿಕೆ ಇದೆ…
ಆ ಒಂದು ನಂಬಿಕೆಯಿಂದಲೇ ನನ್ನಂತ ನೂರಾರು ನಿರ್ದೇಶಕರು,ಕಲಾವಿದರು ನಮ್ಮ ಜೀವನವನ್ನೇ ಪಣಕ್ಕಿಟ್ಟು ಸಿನಿಮಾ ಮಾಡುತ್ತಿದ್ದೇವೆ..ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ..ಏನೇ ಆದರೂ ಇಲ್ಲಿ ನಾವ್ಯಾರೂ ಬ್ರಹ್ಮರಾಗಲು ಸಾಧ್ಯವಿಲ್ಲ. ನಮ್ಮ ಗ್ರಹಿಕೆಗೆ ನಿಲುಕುವಷ್ಟನ್ನು ಪ್ರಾಮಾಣಿಕವಾಗಿ ಕಲಿತು ಮಾಡಿದ್ದೇನೆ…
ನೀವು ಮತ್ತು ಈ ಬದುಕು ನನಗೆ ಇಷ್ಟೊಂದು ಸಿನಿಮಾಗಳನ್ನು ಮಾಡುವ ಅವಕಾಶಗಳನ್ನು ಕೊಟ್ಟಿದ್ದಕ್ಕೆ ನಾನು ಧನ್ಯ…ಮಿಕ್ಕಿದ್ದು ನಿಮ್ಮ ಪ್ರೀತಿಗೆ ಬಿಟ್ಟಿದ್ದು…
ಪ್ರೀತಿಯಿಂದ
ಮಧುಚಂದ್ರ
ನಿರ್ದೇಶಕ