100 ಸಿನಿಮಾ 100% ಪರಿಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ, ಪಕ್ಕಾ ಪೈಸಾ ವಸೂಲ್
ರಮೇಶ್ ಅರವಿಂದ್ ರವರನ್ನ ತೆರೆ ಮೇಲೆ ಹಿಗೆಲ್ಲಾ ನೋಡಬಹುದಾ ಅಂತ ಪ್ರೇಕ್ಷಕರು ಆಶ್ಚರ್ಯ ಪಡಬಹುದಾದಂತ ಹಾಗೂ ಖುಷಿ ಪಡಬಹುದಾದಂದ ಚಿತ್ರ 100.
ಇವತ್ತಿನ ಜಾಗತಿಕ ಮಟ್ಟದಲ್ಲಿ ಮನುಷ್ನ ಬದುಕನ್ನ ಹಿಂಡುತ್ತಿರುವ , ಮನಸಿಕ ಜಿಗುಪ್ಸೆಗೆ ತಳ್ಳುತ್ತಿರುವ ಸೋಷಿಯಲ್ ಮೀಡಿಯಾಗಳ ಅವಾಂತರ ಹಾಗೂ ಅವಗಡಗಳ ಬಗ್ಗೆ 100 ಚಿತ್ರ ಎಚ್ಚರಿಕೆ ನೀಡುತ್ತದೆ.
ಎಲ್ಲೋ ಕೂತು ಹೆಣ್ಣು ಮಕ್ಕಳ ಬದುಕಿನಲ್ಲಿ ಆಟ ಆಡುವ ಹೆಣ್ಣು ಬಾಕ ದುರುಳರಿದ್ದಾರೆ ಎಚ್ಚರಿಕೆ ಎನ್ನುವ ಘಂಟೆಯನ್ನು ಪ್ರೇಕ್ಷಕರಿಗೆ ಬಾರಿಸಿದ್ದಾರೆ ರಮೇಶ್ ಅರವಿಂದ್.
ಅದಷ್ಟೆ ಅಲ್ಲದೇ ಎಲ್ಲರ ಅಂತರಂಗದ ಪಿಸುಮಾತು ಹಾಗೂ ಬ್ಯಾಂಕ್ ಅಕೌಂಟ್ ಗಳ ಹಣ ಸದ್ದಿಲ್ಲದೇ ಸೈಬರ್ ಕಳ್ಳರು ಕದಿಯುತ್ತಿದ್ದಾರೆ ಎನ್ನುವುದನ್ನು 100 ಸಿನಿಮಾ ಸಾಬೀತು ಮಾಡಿದೆ.

ರಮೇಶ್ ಒಬ್ಬ ಪೋಲೀಸ್ ಅಧಿಕಾರಿಯಾಗಿ ಸಮಾಜಘಾತುಕರ ಹಾಗೂ ಖಾಕಿ ತೊಟ್ಟು ಸಮಾಜಕ್ಕೆ ಕಂಟಕರಾದವರ ಬಣ್ಣ ಬಯಲು ಮಾಡುವ ಪಾತ್ರದಲ್ಲಿ ಚಾಣಾಕ್ಷತನ ಮೆರೆದಿದ್ದಾರೆ.
ಸಮಾಜಕ್ಕೆ ಆಸರೆಯಾಗಿ ಒಳಿತು ಮಾಡಬೇಕಾದವರು ಒಳಗೊಳಗೆ ಮಾಡುವ ದರುಳತನವನ್ನು ಅದೇ ತಂತ್ರಜ್ಞಾನ ಬಳಸಿ ಸಮಾಜದ ಮುಂದೆ ಬೆತ್ತಲೆಗೊಳಿಸುವ ತಂತ್ರ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ.
ಎರಡು ಘಂಟೆ ಸಿನಿಮಾ ಮುಗಿಯುವುದೇ ಗೊತ್ತಾಗುವುದಿಲ್ಲ ಆ ರೀತಿಯಲ್ಲಿ ಕಥೆ ಸಾಗಿಸುವಲ್ಲಿ ಒಬ್ಬ ನಿರ್ದೇಶಕನ ಜವಾಬ್ದಾರಿಯನ್ನು ರಮೇಶ್ ನಿಭಾಯಿಸಿದ್ದಾರೆ.