Moda Kavida Manju movie song released. ನಟ ರಘುವೀರ್ ಸಂಗೀತ ಸಂಯೋಜಿಸಿದ್ದ “ಮೋಡ ಕವಿದ ಮಂಜು” ಚಲನಚಿತ್ರದ ಹಾಡುಗಳ ಬಿಡುಗಡೆ
ನಟ ರಘುವೀರ್ ಸಂಗೀತ ಸಂಯೋಜಿಸಿದ್ದ “ಮೋಡ ಕವಿದ ಮಂಜು” ಚಲನಚಿತ್ರದ ಹಾಡುಗಳ ಬಿಡುಗಡೆ
ನಾಯಕ ನಟರಾಗಿ
ಚಲನಚಿತ್ರ ನಿರ್ಮಾಪಕರಾಗಿ ಚಿತ್ರೋದ್ಯಮ ಮತ್ತು ಪ್ರೇಕ್ಷಕರಿಗೆ ಪರಿಚಯವಿದ್ದ ರಘುವೀರ್ ರವರು
ತಮ್ಮ ಸಂಗೀತ ಪ್ರತಿಭೆ ಅನಾವರಣಕ್ಕೆ ಆಯ್ಕೆ ಮಾಡಿಕೊಂಡ ಚಿತ್ರ
ಮೋಡ ಕವಿದ ಮಂಜು.

ಹೌದು. ನಟ ರಘುವೀರ್ ರವರು ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿರುವ ಚಿತ್ರವಿದು. ಎಂ. ಸಿ. ಪ್ರೊಡಕ್ಷನ್ಸ್ ಮತ್ತು ಹ್ಯಾಟ್ರಿಕ್ ಪ್ರೊಡಕ್ಷನ್ಸ್ ನಂ 1
ಅರ್ಪಿಸುವ ” ಮೋಡ ಕವಿದ ಮಂಜು ” ಚಿತ್ರದ ಹಾಡುಗಳನ್ನು ಸಿದ್ಧಪಡಿಸಿದ ರಘುವೀರ್ ರವರಿಗೆ ಚಿತ್ರ ಮುಂದುವರೆಸಲು ಭಗವಂತ ಆಯಸ್ಸು ನೀಡಲಿಲ್ಲ.
ಅವರ ನಂತರ ಈ ಚಿತ್ರದ ಬಗ್ಗೆ ಯಾರೂ ಕೂಡಾ ಗಮನ ನೀಡಿರಲಿಲ್ಲ
ಇತ್ತೀಚಿಗೆ ರಘುವೀರ್ ಅವರ ಶಿಷ್ಯ. ಹ್ಯಾಟ್ರಿಕ್ ಸೂರ್ಯ ಪಿ. ಎನ್, ರವರು ಹಾಡುಗಳನ್ನು ಹುಡುಕಿ ಲಹರಿ ಆಡಿಯೋ ಕಂಪನಿಯ ಮಾಲೀಕರಾದ ಶ್ರೀ ಲಹರಿ ವೇಲು ರವರಿಗೆ ಒಪ್ಪಿಸಿದ್ದರು ಯಾಕಂದರೆ, ರಘುವೀರ್ ರವರು ಹಾಡುಗಳನ್ನು ಧ್ವನಿ ಮುದ್ರಣ ಮಾಡುವಾಗಲೆ ಲಹರಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

ಸೂರ್ಯ ರವರ ಪ್ರಯತ್ನ ಮತ್ತು ಲಹರಿ ವೇಲು ರವರ ಪ್ರೋತ್ಸಾಹ ದಿಂದಾಗಿ ಇತ್ತೀಚಿಗೆ ನಯನ ಆಡಿಟೋರಿಯಂ (ರವೀಂದ್ರ ಕಲಾಕ್ಷೇತ್ರ ಆವರಣ) ನಲ್ಲಿ
ಮೋಡ ಕವಿದ ಮಂಜು ಚಿತ್ರದ ಹಾಡುಗಳು ಲಹರಿ ಆಡಿಯೋ ಕಂಪನಿ ಯ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿ.ಜಿ ಅವರು ಬರೆದಿರುವ ಹಾಡುಗಳನ್ನು ರಘುವೀರ್, ರಮೇಶ್ಚಂದ್ರ, ನಂದಿತಾ, ರಾಜೇಶ್ ಕೃಷ್ಣನ್ ಹಾಗೂ ಚೇತನ್ ಹಾಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ
ನಿವೃತ್ತ ನ್ಯಾಯಾಧೀಶರು ಸಾಮಾಜಿಕ ಚಿಂತಕರಾದ ಸನ್ಮಾನ್ಯ ಶ್ರೀ ಸಂತೋಷ್ ಹೆಗಡೆ ಅವರು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
ಲಹರಿ ಆಡಿಯೋ ಕಂಪನಿ ಮಾಲೀಕರು ಹಾಗೂ ಚಲನಚಿತ್ರ ನಿರ್ಮಾಪಕರಾದ
ಶ್ರೀ ಲಹರಿ ವೇಲು. ಚಲನಚಿತ್ರ ನಿರ್ದೇಶಕರಾದ
ಶ್ರೀ ರಾಘವ ಲೋಕಿ. ರಂಗಕರ್ಮಿ ಶ್ರೀ ನೀಲಕಂಠ ಅಡಿಗ,
ಗಾಯಕ ಶ್ರೀ ರಮೇಶ್ ಚಂದ್ರ, ಯೋಧರಾದ ಶ್ರೀ ಎ. ವಿಜಯ್ ಕುಮಾರ್ ರೆಡ್ಡಿ, (ಕಾರ್ಯಕ್ರಮಕ್ಕಾಗಿ ಕುಟುಂಬ ಸಮೇತ ಆಂಧ್ರ ಪ್ರದೇಶದಿಂದ ಬಂದಿದ್ದರು)

ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್ (ರಿ) ಬೆಂಗಳೂರು ಇದರ ಸ್ಥಾಪಕ ಟ್ರಸ್ಟೀ ಹಾಗೂ ಚಲನಚಿತ್ರ ಸಹ ನಿರ್ದೇಶಕ
ಶ್ರೀ ಹ್ಯಾಟ್ರಿಕ್ ಸೂರ್ಯ ಪಿ. ಎನ್ ಇವರ ಆಯೋಜನೆಯಲ್ಲಿ ನಡೆದ
ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಯುವ ಪ್ರತಿಭೆಗಳು ಅವರ ಗುರುಗಳು, ಮತ್ತವರ ಪೋಷಕರು, ಸಭಿಕರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.
ಹ್ಯಾಟ್ರಿಕ್ ಪ್ರೊಡಕ್ಷನ್ಸ್ ನಂ 1 ಮೂಲಕ ಸೂರ್ಯ ರವರು ನಿರ್ದೇಶನ ಮಾಡುವ ಕನಸು ಹೊತ್ತಿದ್ದಾರೆ
ಇದಕ್ಕೂ ಮುಂಚೆ ರಘುವೀರ್ ರವರ 58ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಅಥಿತಿಗಳ ಮತ್ತು ಸಭಿಕರ ಮನಸೂರೆ ಗೊಳಿಸಿತು.