MMB Legacy 1st. Year celebration event. ಒಂದೇ ವೇದಿಕೆಯಲ್ಲಿ ನೂರಾರು ಕನಸ್ಸುಗಳಿಗೆ ಸಹಕಾರವಾದ MMB ಲೆಗೆಸ್ಸಿ ಸಂಸ್ಥೆಗೆ ಮೊದಲ ವರ್ಷದ ಸಡಗರ
ಒಂದೇ ವೇದಿಕೆಯಲ್ಲಿ ನೂರಾರು ಕನಸ್ಸುಗಳಿಗೆ ಸಹಕಾರವಾದ ಲೆಗೆಸ್ಸಿ ಸಂಸ್ಥೆಗೆ ಮೊದಲ ವರ್ಷದ ಸಡಗರ

ಕಳೆದ ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸದೊಂದು ವೇದಿಕೆ ಶುರುವಾಗಿದ್ದು ಸೋಜಿಗದ ಸಂಗತಿ. ನಟ, ನಿರ್ದೇಶಕ, ನಿರ್ಮಾಪಕ, ವಿತರಕ ಹಾಗೂ ಮೈ ಮೂವಿ ಬಜ್ಹಾರ್ ಸಂಸ್ಥೆಯ ನಿರ್ಮಾತೃ ನವರಸನ್ ಒಂದೊಂದೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಕನ್ನಡ ಚಿತ್ರರಂಗದ ಒಂದು ಭಾಗವಾಗಿದ್ದಾರೆ.

ಈ ಒಂದು ಕಾರ್ಯಕ್ರಮಕ್ಕೆ ಚಿತ್ರರಂಗದ ವಿವಿಧ ವಲಯದವರು ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನವರಸನ್ ಇನ್ನೂ ಒಂದು ಹೆಜ್ಜೆಯನ್ನು ಮುಂದಿಡುತ್ತಾ ಚಿತ್ರರಂಗದಲ್ಲಿ ದುಡಿದ ತಂತ್ರಜ್ಞಾನದವರನ್ನು ಕಲಾವಿದರನ್ನು ಗುರುತಿಸಿ ಗೌರವಿಸುವ ಸಲುವಾಗಿ ಮೈ ಮೂವಿ ಬಜ್ಹಾರ್ ಚಿತ್ರ ಪ್ರಶಸ್ತಿ ನೀಡಲು ಸನ್ನದ್ದರಾಗಿದ್ದಾರೆ

ಇದೇ ಸಂದರ್ಭದಲ್ಲಿ ನಟರಾದ ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್ ಚಂದನ್ ಶೆಟ್ಟಿ ಹಾಗೂ ಮುಂತಾದ ಕಲಾವಿದರು ಆಗಮಿಸಿ ಪ್ರಶಸ್ತಿಯ ಲೋಗೋವನ್ನು ಬಿಡುಗಡೆಗೊಳಿಸಿ ಶುಭಕೋರಿದರು.

ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M. ಸುರೇಶ್ ನಿರ್ಮಾಪಕರಾದ ರಮೇಶ್ ರೆಡ್ಡಿ, ಹಾಗೂ ಸಮಾಜ ಸೇವಕ, ನಿರ್ಮಾಪಕ ಸಂಜಯ್ ಗೌಡರವರು ಕಾರ್ಯಕ್ರಮದ ಸಡಗರದಲ್ಲಿ ಪಾಲ್ಗೊಂಡು ನವರಸನ್ ಹಾಗೂ MMB ಲೆಗೆಸ್ಸಿ ಸಂಸ್ಥೆಗೆ ಶುಭಕೋರಿ ಬೆನ್ತಟ್ಟಿದರು.

ನಾವು ಕೂಡ ನವರಸನ್ ಹಾಗೂ ಅವರ ಈ ಸಂಸ್ಥಗೆ ಶುಭವಾಗಲಿ ಎಂದು ಹಾರೈಸುತ್ತೇವೆ.