Mateni Matinee movie release on April 5th. ಮ್ಯಾಟ್ನಿ” ನೋಡಲು ಸತೀಶ್ ನಿನಾಸಂ ಜೊತೆಯಾದ ಸ್ನೇಹಿತರು

“ಮ್ಯಾಟ್ನಿ” ನೋಡಲು ಸತೀಶ್ ನಿನಾಸಂ ಜೊತೆಯಾದ ಸ್ನೇಹಿತರು

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಮ್ಯಾಟ್ನಿ ಸಿನಿಮಾ ಇವಾಗಲೇ ಟೈಲರ್ ಮತ್ತೆ ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆಯಲ್ಲಿದೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಕೊಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದರು. 

 ಮ್ಯಾಟ್ನಲ್ಲಿ ಸತೀಶ್ ನಿನಾಸಂ, ರಚಿತಾ ರಾಮ್ ಅದಿಥಿ ಪ್ರಭುದೇವ ಮಾತ್ರವಲ್ಲದೆ ಇನ್ನೂ ಸಾಕಷ್ಟು ಕಲಾವಿದರ ದಂಡ ಇದೆ. ಸಿನಿಮಾ ಹಾರರ್ ಕಾಮಿಡಿ ಜೊತೆಗೆ ಸ್ನೇಹಿತರ ಸಮಾಗಮ ಕೂಡ ಆಗಿದೆ. ಸತೀಶ್ ಅವರ ಸ್ನೇಹಿತರಾಗಿ ನಟ ನಾಗಭೂಷಣ್ ಶಿವರಾಜ ಕೆ ಆರ್ ಪೇಟೆ ಪೂರ್ಣ ಮತ್ತು ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ.

ರಿಯಲ್ ಲೈಫ್ ನಲ್ಲಿ ಇವರೆಲ್ಲ  ಹೇಗೆ ಬೆಸ್ಟ್ ಫ್ರೆಂಡ್ಸೋ ಹಾಗೆ ರೀಲ್ ಮೇಲು ಕೂಡ ಸ್ನೇಹಿತರಾಗಿ ಮಿಂಚುತ್ತಾರೆ.

ಚಿತ್ರದಲ್ಲಿ ನಟ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಭೂಷಣ್,  ನೀನಾಸಮ್ ಸತೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ’ ಎಂದರು.

ಕಾಮಿಡಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಶಿವರಾಜ್ ಕೆ ಆರ್ ಪೇಟೆ ಮ್ಯಾಟ್ನಿಯಲ್ಲಿ ನವೀನ್ ಎನ್ನುವ ರಿಯಲ್ ಎಸ್ಟೇಟರ್ ಆಗಿ ಕಾಣಿಕೊಂಡಿದ್ದಾರೆ. ವಿಶೇಷ ಎಂದರೆ ಶಿವರಾಜ್ ಕೆಆರ್ ಪೇಟೆ ಮತ್ತು ನೀನಾಸಮ್ ಅವರ ಕಾಂಬಿನೇಷನ್ ನ ನಾಲ್ಕನೇ ಸಿನಿಮಾ ಇದಾಗಿದೆ‌. ಕಾಮಿಡಿ ಶಿವರಾಜ್ ಕೆಆರ್ ಪೇಟೆ ಅವರಿಗೆ ಹೊಸದೇನಲ್ಲ, ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಹಾರರ್ ಕೂಡ ಇರುವುದು ಅಭಿಮಾನಿಗಳಿಗೆ ಡಬಲ್ ಧಮಾಕವಾಗಿದೆ. ಈ ಬಗ್ಗೆ ಮಾತನಾಡಿದ ಶಿರಾಜ್ ಕೆ.ಆರ್ ಪೇಟೆ, ‘ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದೊಳಗೆ ಹೋದರೆ ಈ ಬೇಸಿಗೆಯಲ್ಲೂ ಐಪಿಎಲ್ ಮರೆತು ತಂಪಾಗಿ ಸಿನಿಮಾ ನೋಡಿ, ಹೊರಬಂದ ಅನುಭವವಾಗುತ್ತೆ’ ಎಂದು ಹೇಳಿದರು. 

ಇನ್ನೂ ನಟ ಪೂರ್ಣ ಮಾತನಾಡಿ, ‘ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ನಾನು ಈ ಸಿನಿಮಾದಲ್ಲಿ ಆನಂದ ಎನ್ನುವ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಾವೆಲ್ಲರೂ ಈ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಫ್ರೆಂಡ್ಸ್ ಆಗಿದ್ದರಿಂದ ಈ ಸಿನಿಮಾದಲ್ಲಿ ನಟಿಸಲು ಮತ್ತಷ್ಟು ಸುಲಭವಾಯಿತು’ ಎಂದರು.

ಮತ್ತೋರ್ವ ಸ್ನೇಹಿತನ‌ ಪಾತ್ರದಲ್ಲಿ ನಟ ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ.

ಅನೇಕ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ದಿಗಂತ್ ಇದೇ ಮೊದಲ ಬಾರಿಗೆ ಫುಲ್ ಫ್ಲೆಡ್ಜ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಜಯದೇವ್ ಅಲಿಯಾಸ್ ಜೆಡಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ದಿಗಂತ್ ‘ಇದು ನನ್ನ ಮೊದಲ ಸಿನಿಮಾ. ಎಲ್ಲೂ ಕೂಡ ಫಸ್ಟ್ ಟೈಮ್ ಆಕ್ಟ್ ಮಾಡ್ತಾ ಇದಿನಿ ಅಂತ ಅನಿಸಿಲ್ಲ. ಎಲ್ಲರೂ ಫ್ರೆಂಡ್ಸ್ ಆಗಿರುವುದರಿಂದ ಶೂಟಿಂಗ್ ಸೆಟ್ ನಲ್ಲಿ ಕಷ್ಟ ಎನಿಸಿಲ್ಲ’ ಎಂದರು.

ಈಗಾಗಲೇ ಭಾರಿ ನಿರೀಕ್ಷೆ ನೋಡಿತ್ತಿರುವ ಮ್ಯಾಟನಿ ಏಪ್ರಿಲ್ 5ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತದೆ. ಹಾಡು ಮತ್ತು ಟ್ರೈಲರ್ ಮೂಲಕ ಕ್ಯೂರಿಯಾಸಿಟಿ ಹೆಚ್ಚಿಸಿರುವ ಸಿನಿಮಾ ಹೇಗಿದೆ, ಕಾಂಬಿನೇಷನ್ ಹೇಗೆ ವರ್ಕೌಟ್ ಆಗಿದೆ ಎಂದು ಗೊತ್ತಾಗಬೇಕಾದರೆ ಈ ಸಿನಿಮಾ ನೀವು ನೋಡಲೇ ಬೇಕು..

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor