Mate & company release soon ಮಾಯೆ ಅಂಡ್ ಕಂಪನಿ” ಅತಿ ಶೀಘ್ರದಲ್ಲೇ ಬೆಳ್ಳಿಯ ತಲೆಯ ಮೇಲೆ ಬರಲಿದೆ.
ಮಾತೃಶ್ರೀ ವಿಷನ್ ಲಾಂಛನದ ಅಡಿಯಲ್ಲಿ, ದೂರದರ್ಶನ ಚಲನಚಿತ್ರ/ ಚಿತ್ರ ಸಂಕಲನರಾಗಿದ್ದ, ಎಂ ಎನ್ ರವೀಂದ್ರರಾವ್ ನಿರ್ಮಾಣ ಮಾಡಿರುವ, ಯಾವುದೇ ಕತ್ತರಿ ಪ್ರಯೋಗವಿಲ್ಲದೆ, ಸೆನ್ಸಾರ್ ಮಂಡಳಿಯಿಂದ ಎ ಯು ಮನ್ನಣೆ ಪಡೆದಿರುವ, ಸೋಶಿಯಲ್ ಕ್ರೈಂ ಕಥೆ ಹೊಂದಿರುವ, ಬಿ ಸಂದೀಪ್ ಕುಮಾರ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕನ್ನಡ ಚಲನಚಿತ್ರ “ಮಾಯೆ ಅಂಡ್ ಕಂಪನಿ” ಅತಿ ಶೀಘ್ರದಲ್ಲೇ ಬೆಳ್ಳಿಯ ತಲೆಯ ಮೇಲೆ ಬರಲಿದೆ.

ಸದ್ಯದಲ್ಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಅರ್ಜುನ್ ಕಿಶೋರ್ ಚಂದ್ರ, ನವೀನ್, ಯಶ್ವಿನಿ ಮತ್ತಿತರು ನಟಿಸಿದ್ದು, ಸಹ ನಿರ್ಮಾಪಕರಾಗಿ ಜಿ ಮೋಹನ್ ಕುಮಾರ್, ಎಸ್ ನರಸಿಂಹರಾಜು ರವರು ಕೈಜೋಡಿಸಿದ್ದಾರೆ. ಸಂಗೀತ ಸಾಹಿತ್ಯ ಡಾಕ್ಟರ್ ಹೆಚ್ಎಸ್ ವೆಂಕಟೇಶಮೂರ್ತಿ ಗಾಯನ ವಿದ್ವಾನ್. ಶಂಕರ್ ಶಾನ್ಬೋಗ್ ಹಾಗೂ ಇಂಚರ ಪ್ರವೀಣ್ ಕುಮಾರ್ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ…