Marigold movie review. ಮಾರಿಗೋಲ್ಡ್ ನಲ್ಲಿ ಚಿನ್ನದ ಬೇಟೆ.
ಚಿತ್ರ: ಮಾರಿಗೋಲ್ಡ್. ನಿರ್ಮಾಣ: ರಘುವರ್ಧನ್ ಶರವಣ. ನಿರ್ದೇಶನ: ರಾಘವೇಂದ್ರ ನಾಯಕ್.
ಪಾತ್ರವರ್ಗ: ದಿಗಂತ್, ಸಂಗೀತಾ ಶೃಂಗೇರಿ, ಸಂಪತ್ ಮೈತ್ರಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಂಗ ಶೆಟ್ಟಿ ಮುಂತಾದವರು. ಸ್ಟಾರ್: 3/5
ಮಾರಿಗೋಲ್ಡ್ ಚಿತ್ರ ವಿಮರ್ಶೆ
ಈ ವಾರ ಬಿಡುಗಡೆಯಾದಂತ ಮಾರಿಗೋಲ್ಡ್ ಚಿತ್ರ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು ನಿಜ. ಈ ವಾರ ಚಿತ್ರ ತೆರೆಕಂಡಿದೆ. ಇದು ಚಿನ್ನದ ಹಿಂದೆ ಬಿದ್ದಂತ ಯುವಕರ ಕಥೆ ದಿಗಂತ್ ಚಿತ್ರದ ನಾಯಕ, ನಾಯಕಿಯಾಗಿ ಸಂಗೀತ ಶೃಂಗೇರಿ ಅಭಿನಯಿಸಿದ್ದಾರೆ

ಈವರೆಗೂ ಚಾಕ್ಲೇಟ್ ಬಾಯ್ ಆಗಿ, ಲವರ್ ಬಾಯ್ ಆಗಿ ನೋಡಿದಂತ ದಿಗಂತನನ್ನು ಈ ಸಿನಿಮಾ ಮುಖಾಂತರ ಒಬ್ಬ ಮಾಸ್ ಹೀರೋ ಆಗಿ ಕೂಡ ನಾವು ನೋಡಬಹುದು.
ದಿಗಂತ್ ಅಭಿನಯ ತುಂಬಾ ಚೆನ್ನಾಗಿದೆ. ದಿಗಂತ್ ಪಂಚ್ ಡೈಲಾಗ್ಗಳೊಂದಿಗೆ ಎಲ್ಲರಿಗೂ ಇಷ್ಟ ಆಗ್ತಾರೆ ದಿಗಂತ್ ಇದನ್ನೇ ಕಂಟಿನ್ಯೂ ಮಾಡಿದರೆ ಮತ್ತೊಬ್ಬ ಮಾಸ್ ಹೀರೋ ಕನ್ನಡಕ್ಕೆ ಸಿಕ್ಕಂತಾಗುತ್ತದೆ. ಹಾಗೆ ಸಂಗೀತ ಶೃಂಗೇರಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಕ್ಯಾಬ್ರೆ ಡ್ಯಾನ್ಸರ್ ಆಗಿ ಸಂಗೀತ ಎಲ್ಲರಿಗೂ ಇಷ್ಟ ಆಗ್ತಾರೆ ಸಂಗೀತಾಗೆ ಅಭಿನಯಿಸೋದಕ್ಕೆ ನಿರ್ದೇಶಕರು ಅವಕಾಶ ಮಾಡಿಕೊಡಬಹುದಾಗಿತ್ತು ಯಾಕೋ ಗೊತ್ತಿಲ್ಲ ಅವರ ಪಾತ್ರನ ಒಂದು ಸೀಮಿತ ಅವಧಿಗೆ ಮುಗಿಸಿದ್ದಾರೆ.

ಸಂಪತ್ ಮೈತ್ರಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಂಗ ಶೆಟ್ಟಿ ಚಿತ್ರದ ಮುಖ್ಯ ಪಾತ್ರಗಳಾಗಿ ಅಭಿನಯಿಸಿ ಕಥೆಗೆ ಪೂರಕವಾಗಿ ತಮ್ಮನ್ನ ತೊಡಗಿಸುಕೊಂಡಿದ್ದಾರೆ
ಈ ಕಥೆಯನ್ನು ಚಿನ್ನದ ಬೇಟೆ ಅಂತ ಹೇಳಬಹುದು.
ಒಂದಷ್ಟು ಜನ ಪೋಲಿಸ್ ಅಧಿಕಾರಿಗಳು ಬೇನಾಮಿಯಾಗಿ ಸಂಪಾದಿಸಿದ ಹಣವನ್ನು ಚಿನ್ನದ ಬಿಸ್ಕೆಟ್ ಆಗಿ ಪರಿವರ್ತನೆ ಮಾಡಿ ಪುರಾತನವಾದ ದೇವಾಲಯದಲ್ಲಿ ಬಚ್ಚಿಟ್ಟಿರುತ್ತಾರೆ, ಆ ನಿಧಿಯನ್ನು ಲೂಟಿ ಮಾಡಲು ಒಂದು ಗ್ಯಾಂಗ್ ಹೊಂಚಾಕುತ್ತದೆ.
ಆ ಗ್ಯಾಂಗ್ ನಿಂದ ಚಿನ್ನವನ್ನು ಕಬಳಿಸಲು ನಾಯಕನ ಗ್ಯಾಂಗ್ ಸ್ಕೆಚ್ ಹಾಕುತ್ತದೆ.
ನಾಯಕಿ ಸೇರಿ ಒಟ್ಟು ನಾಲ್ಕು ಜನರ ನಾಯಕನ ಗ್ಯಾಂಗ್ ಚಿನ್ನವನ್ನು ಲೂಟಿ ಮಾಡ್ತಾರ, ಅಥವಾ ಬೇರೆ ಗ್ಯಾಂಗ್ ಲಪಾಟಾಯಿಸುತ್ತ, ಚಿನ್ನದ ಹಿಂದೆ ಬಿದ್ದವರಷ್ಟೇ ಅಲ್ಲದೆ ಹೆಣ್ಣು, ಹೊನ್ನು , ಮಣ್ಣಿನ್ನು ಬಲವಂತವಾಗಿ ಪಡೆಯಲು ಹೋದವರ ಕಥೆ ಏನಾಗುತ್ತದೆ ಅನ್ನೋದಿಕ್ಕೆ ಸಿನಿಮಾ ಕೊನೆಯಲ್ಲಿ ಮೆಸೇಜ್ ಇಟ್ಟಿದ್ದಾರೆ.

ಕಥೆಯಲ್ಲಿ ಒಂದಷ್ಟು ಟ್ವಿಷ್ಟ್ ಗಳಿದ್ದು, ನೋಡುಗರಿಗೆ ಕುತೂಹಲ ಮೂಡಿಸುತ್ತದೆ.
ಸಿನಿಮಾದ ಮುಖ್ಯ ಜೀವಾಳ ಪಂಚಿಂಗ್ ಡೈಲಾಗ್ ಗಳು. ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ತಂತ್ರ ಒಂದಷ್ಟು ವರ್ಕೌಟ್ ಆಗಿದೆ. ಮಧ್ಯರಾತ್ರಿಯಲ್ಲಿ ಕೊತಂಬರಿ ಸೊಪ್ಪು ಕೀಳಲು ಹೋದ ಚಿತ್ರದ ನಾಯಕನ ಪಾಡೇನಾಗುತ್ತದೆ ಎನ್ನುವುದನ್ನು ಚಿತ್ರ ನೋಡಿದರೆ ಗೊತ್ತಾಗುತ್ತದೆ.