Marigold movie releasing on April 5th. ಈ ವಾರ ತೆರೆಗೆ ಮಾರಿಗೋಲ್ಡ್ , ಚಿತ್ರ ಮಂದಿರಗಳಲ್ಲಿ ಚಿನ್ನದ ಬಿಸ್ಕತ್ ಗಳ ವಹಿವಾಟು ಶುರುವಾಗಲಿದೆ….?
ಈವಾರ ಮಾರಿಗೋಲ್ಡ್ ಬಿಡುಗಡೆ
ಆರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ ರಘುವರ್ದನ್ ನಿರ್ಮಿಸಿ, ರಾಘವೇಂದ್ರ ಎಂ. ನಾಯ್ಕ ನಿರ್ದೇಶಿಸಿರುವ, ಆಕ್ಷನ್ ಡ್ರಾಮಾ,ಥ್ರಿಲ್ಲರ್ ಕಥಾಹಂದರ ಹೊಂದಿರೋ ” ಮಾರಿ ಗೋಲ್ಡ್ ” ಚಿತ್ರ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಿಗಂತ್, ಸಂಗೀತ ಶೃಂಗೇರಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ
ಗೋಲ್ಡ್ ಬಿಸ್ಕಟ್ ಮಾರಲು ಹೊರಟ ನಾಲ್ವರು ಹುಡುಗರ ಕಥೆಯಿದೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರೆಡೆ ಚಿತ್ರಿಕರಣ ನಡೆಸಲಾಗಿದೆ.

ಶುದ್ದ ಮನರಂಜನೆಗೆ ಒತ್ತು ನೀಡಿ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ದಿಗಂತ ಅವರನ್ನು ಬೇರೆಯದೇ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ವರ್ಕ್, ವೀರ್ ಸಮರ್ಥ್ ಅವರ ಸಂಗೀತ, ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಅವರ ಸಂಭಾಷಣೆ, ರಘು ನಿಡವಳ್ಳಿ ಅವರ ಸಂಭಾಷಣೆ,
ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲೆ, ನೃತ್ಯ ಕಲೈ, ಸಾಹಸ ಅರ್ಜುನ್ ರಾಜ್ ಹಾಗು ನಿರ್ಮಾಣ ನಿರ್ವಹಣೆ: ಜೇವಿಯರ್ ಫರ್ನಾಂಡಿಸ್
ಈ ಚಿತ್ರಕ್ಕಿದೆ.

ದಿಗಂತ್ ಮಂಚಾಲೆ, ಸಂಗೀತ ಶೃಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.