Marakstra movie Review ಮಾರಕಾಸ್ತ್ರದಷ್ಟೇ ಹರಿತ ಮಾಲಾಶ್ರೀ ಆಕ್ಷನ್

ಚಿತ್ರ ವಿಮರ್ಶೆ – ಚಿತ್ರ – ಮಾರಕಾಸ್ತ್ರ

ನಿರ್ಮಾಪಕರು – ಕೋಮಲಾ ನಟರಾಜ್

ನಿರ್ದೇಶನ – ಗುರುಮೂರ್ತಿ ಸುನಾಮಿ

ಛಾಯಾಗ್ರಹಣ – ಅರುಣ್ ಸುರೇಶ್

ಸಂಗೀತ – ಸತೀಶ್ ಬಾಬು

ಕಲಾವಿದರು – ಮಾಲಾಶ್ರೀ, ಹರ್ಷಿಕಾ ಪೂಣಚ್ಚ, ಉಗ್ರಂ ಮಂಜು, ಆನಂದ್ ಆರ್ಯ, ನಟರಟಜ್, ಸ್ವಾತಿ, ಹಾಗೂ ಮುಂತಾದವರು.

Rating – 3.5/5

ತುಂಬಾ ದಿನಗಳ ನಂತರ ಕನಸಿನ ರಾಣಿ ಮಾಲಾಶ್ರೀ ತೆರೆಯ ಮೇಲೆ ಅಬ್ಬರಿಸಿದ್ದಾರೆ.
ದುಷ್ಟ ಶಕ್ತಿಗಳ ಅಟ್ಟಹಾಸವನ್ನು ಕುಟ್ಟಿ ಕೆಡವಿ ಹೊಸಕಿ ಹಾಕುವ ದೃಶ್ಯದಲ್ಲಿ ಮಾಲಾಶ್ರೀ ಯವರಿಗೆ ಮಾಲಾಶ್ರೀಯವರೇ ಸಾಟಿ ಎಂಬಂತೆ ಪಾತ್ರವನ್ನು ಆವರಿಸಿಕೊಂಡಿದ್ದಾರೆ.
ಈ ಚಿತ್ರ ಮಾಲಾಶ್ರೀ ಯವರಿಗೆ ರೀಎಂಟ್ರಿ ಎನ್ನಬಹುದು.

ಜ್ಹಾನವಿ ಪೋಲೀಸ್ ಅಧಿಕಾರಿಯಾಗಿ ಮಾಲಾಶ್ರೀ ಪಾತ್ರಕ್ಕೆ ಸರಿಯಾದ ನ್ಯಾಯವನ್ನು ಒದಗಿಸಿದ್ದಾರೆ. ಬಹಳ ವರ್ಷಗಳಿಂದ ಕಾದಿದ್ದ ಮಾಲಾಶ್ರೀ ಅಭಿಮಾನಿಗಳಿಗೆ ಭರಪೂರ ಮನರಂಜನೆ ಚಿತ್ರದಲ್ಲಿ ಕಾಣಬಹುದು.
ಆಕ್ಷನ್ ದೃಶ್ಯಗಳಲ್ಲಿ ಮಾಲಾಶ್ರೀ ಮಾಸ್ ರಾಣಿ ಎನ್ನಬಹುದು.

ಚಿತ್ರದ ಕಥೆ ಮೂರು ಬೇರೆ ಬೇರೆ ನೆಲೆಯಲ್ಲಿ  ನಡೆಯುತ್ತಿದ್ದಂತೆ ಅಲ್ಲಲ್ಲಿ  ಸಾಹಸ ದೃಶ್ಯಗಳು ಬಂದು ಹೋಗುವಾಗ ಪ್ರೇಕ್ಷಕನಿಗೆ ಏನಾಗುತ್ತಿದೆ ಎಂದು ಯೋಚನೆ ಮಾಡಲು ಆಗದಂತೆ ಅತ್ತಿತ್ತ ಅಲುಗಾಡದಂತೆ ಕಟ್ಟಿಹಾಕಿದ್ದಾರೆ ನಿರ್ದೇಶಕ ಗುರುಮೂರ್ತಿ ಸುನಾಮಿ.

ಸಾಹಸ ದೃಶ್ಯಗಳಂತು ಪ್ರೇಕ್ಷಕರಿಗೆ ಅದರಲ್ಲೂ ಸಾಹಸ ಚಿತ್ರಗಳನ್ನು ಇಷ್ಟ ಪಡುವ ಸಿನಿ ಪ್ರಿಯರಿಗೆ ತೀವ್ರ ಕುತೂಹಲ ಹುಟ್ಟುವಂತೆ ಕಥೆಯನ್ನು ನಿರೂಪಿಸಿದ್ದಾರೆ ನಿರ್ದೇಶಕರು.

ಇದು ಬಳ್ಳಾರಿಯ ಸುತ್ತಾಮುತ್ತಾ ಭೂಮಿ ಹಾಗೂ ನಿಧಿಗಾಗಿ
ಒಳಸಂಚು ನಡೆಸುವ ವ್ಯಕ್ತಿಗಳ ನಿಗೂಡ ಕೊಲೆಯ ಸುತ್ತಾ ನಡೆಯುವ ಕಥೆ.

ಟಿವಿ ವರದಿಗಾರ್ತಿ ನಂದಿನಿ ಪಾತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ಎಂದಿನಂತೆ ಲವ ಲವಿಕೆಯನ್ನು ಕಾಯ್ದುಕೊಂಡಿದ್ದಾರೆ.

ಹಾಗೂ ಬಡವರಿಗೆ ಆಶ್ರಮ ನಡೆಸುವ ಭರತ್ ಪಾತ್ರದಲ್ಲಿ ಆನಂದ್ ಆರ್ಯ ನಟಿಸಿದ್ದಾರೆ.
ಆನಂದ್ ಆರ್ಯ ಪುನೀತ್ ರಾಜ್‌ಕುಮಾರ್ ಅವರನ್ನು  ಅನುಕರಿಸುವ ಪ್ರಯತ್ನ ಮಾಡಿದ್ದಾರೆ.

ಹರ್ಷಿಕಾ ಹಾಗೂಆನಂದ್ ಆರ್ಯ ಜೋಡಿಯಾಗಿ
ಅಭಿನಯಿಸಿದ್ದಾರೆ. ಈ ಜೋಡಿಗೆ
ಹಲವು ದುಷ್ಟರಿಂದ ಒಂದಷ್ಟು ಅವಗಡಗಳು ನಡೆಯುತ್ತದೆ

ಇದರ ಜೊತೆ ಜೊತೆಗೆ ಮತ್ತೊಂದು ಆಯಾಮದಲ್ಲಿ ಅಣ್ಣ ತಂಗಿಯ ಕಥೆ ಸಾಗುತ್ತದೆ. ದುರುಳ ಅಣ್ಣ ಅಮಾಯಕ ತಂಗಿಯ ಆಸ್ತಿ ಕಬಳಿಸಲು ವಾಮಚಾರದ ಪ್ರಯತ್ನ ನಡೆಸುತ್ತಾನೆ.

ಚಿತ್ರದಲ್ಲಿ ಡ್ಯಾನಿಯಲ್ ಪಾತ್ರದಲ್ಲಿ ಉಗ್ರಂ ಮಂಜು
ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕಥೆಯ ಕೇಂದ್ರ ಬಿಂದುವಾಗಿ ಶಂಕರ್ ಪಾತ್ರದಲ್ಲಿ ನಟರಾಜ್ ಮತ್ತು ಪಾರ್ವತಿ ಪಾತ್ರಕ್ಕೆ ಸ್ವಾತಿ ಬಣ್ಣ ಹಚ್ಚಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅಯ್ಯಪ್ಪ, ಶಿವಮಣಿ, ಸ್ವಾತಿ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ.

ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಸತೀಶ್ ಬಾಬು ಹಿನ್ನೆಲೆ ಸಂಗೀತ ಚಿತ್ರಕ್ಕೆ ಸಾಥ್ ನೀಡಿದೆ.

ಹಣ ಹೂಡಿದ ನಿರ್ಮಾಪಕರು ಚಿತ್ರದಲ್ಲಿ ಬಣ್ಣ ಹಚ್ಚಿ ಅಭಿನಯಿಸಿದ್ದಾರೆ
ಜೊತೆಗೆ ಎರಡು ಹಾಡನ್ನು ಕೂಡ ತಮಗಾಗಿ ಚಿತ್ರಿಸಿಕೊಂಡಿದ್ದಾರೆ .

ಒಟ್ಟಿನಲ್ಲಿ ಪೈಸಾ ವಸೂಲ್ ಚಿತ್ರ ಇದಾಗಿದ್ದು ಮಾಸ್ ಹಾಗೂ ಕ್ಲಾಸ್ ಚಿತ್ರ ಪ್ರೇಮಿಗಳಿಗೆ ಹಾಗೂ ಮಾಲಾಶ್ರೀ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರ ಮಾರಕಾಸ್ತ್ರ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor