Majestic to movie shooting running successfully ಮೆಜೆಸ್ಟಿಕ್’ ನಲ್ಲಿ ಕಿಡ್ನಾಪ್ ಆದ ಶೃತಿ,
‘ಮೆಜೆಸ್ಟಿಕ್’ ನಲ್ಲಿ ಕಿಡ್ನಾಪ್ ಆದ ಶೃತಿ,
ರಾಮೋಹಳ್ಳಿಯಲ್ಲಿ ನಾಯಕ ಭರತ್,
ಪೆಟ್ರೋಲ್ ಪ್ರಸನ್ನ ಹುಡುಕಾಟ
ಬೆಂಗಳೂರಿನ ಕೇಂದ್ರಬಿಂದು ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಅಲ್ಲಿನ ರೌಡಿಸಂ ಹೇಗಿರುತ್ತದೆ ಎಂಬುದನ್ನು "ಮೆಜೆಸ್ಟಿಕ್ 2" ಚಿತ್ರದ ಮೂಲಕ ನಿರ್ದೇಶಕ ರಾಮು ಅವರು ಹೇಳಹೊರಟಿದ್ದಾರೆ ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ನಟಿಸಿದ್ದಾರೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ಅವರ ನಿರ್ಮಾಣದ ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ರಾಮೋಹಳ್ಳಿಯಲ್ಲಿ ನಡೆಯಿತು. ಪೆಟ್ರೋಲ್ ಪ್ರಸನ್ನ ಅವರ ತಾಯಿಯಾದ ಶೃತಿ ಅವರನ್ನು ವಿಲನ್ ಗಳು ಕಿಡ್ನಾಪ್ ಮಾಡಿರುತ್ತಾರೆ. ನಾಯಕ ಭರತ್ ಹಾಗೂ ಪೆಟ್ರೋಲ್ ಪ್ರಸನ್ನ ಇಬ್ಬರೂ ಶೃತಿ ಅವರನ್ನು ಹುಡುಕಿಕೊಂಡು ಬರುವ ದೃಶ್ಯವನ್ನು ಅಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದು ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಕೂಡ ಆಗಿದೆ.
ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ “ಮೆಜೆಸ್ಟಿಕ್ 2” ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ.