Maha kavya ಋಷಿ ಮುನಿಗಳ ಅನಾದಿಕಾಲದ ಆಯುರ್ವೇದದ ಮಹಾಕಾವ್ಯ
ಪುರಾತನ ವೈದ್ಯಕೀಯ ಪದ್ದತಿಯಾದ ಆಯುರ್ವೇದ ಚಿಕಿತ್ಸೆ ಅನಾದಿಕಾಲದಿಂದಲೂ ಋಷಿ ಮುನಿಗಳ ಕಾಲದಿಂದಲೂ ರೂಡಿಯಲ್ಲಿದೆ.ಇದರ ಬಗ್ಗೆ ಅರಿವು ಮೂಡಿಸಲು ವೈದ್ಯರೊಬ್ಬರು ಮಹಾಕಾವ್ಯ ಎಂಬ ಚಿತ್ರವನ್ನು ಮಾಡಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಆಯುರ್ವೇದ ವೈದ್ಯರಾಗಿರುವ ಮಧುಸೂದನ್ ಚಿತ್ರವನ್ನು ನಿರ್ದೇಶನ ಮಾಡಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.
ಬಹಳಷ್ಟು ರೋಗಗಳಿಗೆ ಮನೆಯ ಹಿತ್ತಲಿನಲ್ಲೇ ಔಷಧಗಳು ದೊರೆಯುತ್ತವೆ. ಪಾರಂಪರಿಕವಾಗಿ ನಾಟಿ ವೈದ್ಯ ಮಾಡಿಕೊಂಡು ಬಂದವರನ್ನು ಅಳಿಯುವಂತೆ ಮಾಡಲಾಗುತ್ತಿದೆ.
ಅನಾದಿಕಾಲದಿಂದ ಜನರ ಆರೋಗ್ಯವನ್ನು ಸಂರಕ್ಷಿಸುತ್ತ ಬಂದಿರುವ ಆಯುರ್ವೇದವನ್ನು ಉಳಿಸಬೇಕು ಎನ್ನುವುದೇ ನಿರ್ದೇಶಕರ ಮೂಲ ಉದ್ದೇಶವಾಗಿದ್ದು.
ಮಧುಸೂದನ್ ಚಿತ್ರದಲ್ಲಿ ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಒಬ್ಬ ನಾಟಿ ವೈದ್ಯನಾಗಿ ನಟಿಸಿ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯದ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರಂತೆ.
ಹಿಂದೆ ಕಿರು ಚಿತ್ರಗಳನ್ನು ಮಾಡಿದ್ದ ಅನುಭವದಲ್ಲಿ ಮಧುಸೂದನ್ ಇದರಲ್ಲಿ ಆಯುರ್ವೇದ ಮತ್ತು ಅಲೋಪಥಿ ಪದ್ದತಿಯ ನಡುವೆ ಇರುವ ಗೊಂದಲ ಮತ್ತು ಪೈಪೋಟಿಗಳ ಬಗ್ಗೆ ಚಿತ್ರ ನಿರ್ಮಾಣವಾಗಿದೆ.
ಇತ್ತೀಚೆಗೆ ಚಿತ್ರದ ನಾಲ್ಕು ಹಾಡುಗಳು ಬಿಡುಗಡೆಗೊಂಡಿದ್ದು. ಸತೀಶ್ ಮೌರ್ಯ ಸಂಗೀತ ನೀಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೊರಿದ್ದಾರೆ.
ಮಧುರಕಾವ್ಯ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ತಾಯಿಯ ಪಾತ್ರದಲ್ಲಿ ರಂಗಭೂಮಿ ನಟಿ ಯಶೋಧ ಹಾಗೂ ರಾಜಕುಮಾರ್ ನಾಯಕ್ ಖಳನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಲುವಾಗಿ ಈ ಸಿನಿಮಾ ಮಾಡಿದ್ದಾಗಿ ಮಧುಸೂದನ್ ಹೇಳಿದರು.
ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಬಿಟ್ ಸಾಂಗ್ ಇದ್ದು, ದೇಸೀ ಶೈಲಿಯ ವಾದ್ಯಗಳನ್ನೇ ಬಳಸಿ ಹಾಡುಗಳನ್ನು ಮಾಡಲಾಗಿದೆ. ರಾಜೇಶ್ ಕೃಷ್ಣನ್, ಮಧು ಬಾಲಕೃಷ್ಣನ್, ಚಿತ್ರಾ ಮೊದಲಾದವರು ಚಿತ್ರದಲ್ಲಿ ಹಾಡಿದ್ದಾರೆ
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣವಾಗಿದೆ.
ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದ್ದು ಚಿತ್ರ ತಂಡ ಬಹಳ ಉತ್ಸುಕತೆ ಯಲ್ಲಿದೆ ಎನ್ನಬಹುದು.