ಮಡ್ಡಿ ಈ ವಾರ ಬಿಡುಗಡೆಯಾದ ರೇಸ್ ಪ್ರಿಯರ ಮೆಚ್ಚಿನ ಚಿತ್ರ. ಮಲಯಾಳಂನಿಂದ ಕನ್ನಡಕ್ಕೆ ಡಬ್ಬಿಂಗ್ ಆದ ಸಿನಿಮಾ
ಈ ವಾರ ತೆರೆ ಕಂಡ ಮಲಯಾಳಂನ ಮಡ್ಡಿ ಕನ್ನಡದಲ್ಲಿ ಡಬ್ಬ್ ಆಗಿದೆ. ಚಿತ್ರ ಇದೊಂದು ಕಮರ್ಷಿಯಲ್ ಚಿತ್ರವಲ್ಲದಿದ್ದರು ಹೊಸ ರೀತಿಯ Experimental ಸಿನಿಮಾ ಎನ್ನ ಬಹುದು.
ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇ ಬೇಕು.
ಏಕೆಂದರೆ ಇದು ಕಮರ್ಷಿಯಲ್ ಚಿತ್ರಗಳಂತೆ ಬರೀ ಸಾಂಗು ಫೈಟು ಬಿಲ್ಡಪ್ಪುಗಳ ಚಿತ್ರವಲ್ಲ.
ಇದೊಂದು ದೇಸಿ ಶೈಲಿಯ ಜೀಪ್ ರೇಸಿಂಗ್ ಚಿತ್ರ.
ಗುಡ್ಡ, ಬೆಟ್ಟ, ಕಾಡು ನೀರು ಎನ್ನದೇ ಜೀಪ್ ಓಡುತ್ತಿದ್ದರೆ ಪ್ರೇಕ್ಷಕನ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಗುತ್ತದೆ ಅಷ್ಟು ಚನ್ನಾಗಿ ಕ್ಯಾಮರಾ ಹಾಗೂ ಹಿನ್ನಲೆ ಸಂಗೀತ ಕೆಲಸ ಮಾಡಿದೆ.
ರೇಸ್ ಜೊತೆಗೆ ಅಣ್ಣ ತಮ್ಮಂದಿರ ಭಾಂದವ್ಯ ಹಾಗೂ ಸ್ನೇಹದ ಮಹತ್ವ ವನ್ನು ನಿರ್ದೇಶಕರು ಚನ್ನಾಗಿ ಬಿಂಬಿಸಿದ್ದಾರೆ.
ಕೆ.ಜಿ.ಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ “ಮಡ್ಡಿ” ಚಿತ್ರಕ್ಕೆ ಸಂಗೀತ ನೀಡಿದ್ದು , ಚಿತ್ರದ ಪ್ರತೀ ದೃಶ್ಯಕ್ಕೂ ರೀ ರೆಕಾರ್ಡಿಂಗ್ ಮೂಲಕ ಜೀವ ತುಂಬಿದ್ದಾರೆ. ಕಾಡು ಮತ್ತು ಜೀಪ್ ರೇಸನ್ನು ಸಂಗೀತದ ಮೂಲಕ ಬೇರೆಯದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇನ್ನು ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ರತೀಶ್ ಛಾಯಾಗ್ರಹಣ.
ಚಿತ್ರದ ಪ್ರತಿಯೊಂದು ದೃಶ್ಯವೂ ಅದ್ಭುತ ಅನ್ನಿಸುವಂತೆ ಅದರಲ್ಲೂ ಕಾಡಿನ ಸುಂದರವಾದ ದೃಶ್ಯಗಳು ಕಣ್ಣಿಗೆ ಹಬ್ಬ ವೆನ್ನುವಂತೆ ಕೆಲಸ ಮಾಡಿದ್ದಾರೆ.
ಜೀಪ್ ಮಡ್ ರೇಸ್ ನ ದೃಶ್ಯವಂತು ಮೈ ರೋಮಾಂಚನ ಗೊಳಿಸುವ ಜೊತೆಗೆ ಎದೆ ಝಲ್ಲೆನಿಸುತ್ತದೆ. ಗೋಪ್ರೊ ಕ್ಯಾಮೆರಾಗಳಂತು ಜೀಪ್ ಜೊತೆಗೆ ಆಟವಾಡಿವೆ ಎನ್ನಬಹುದು.
ಇನ್ನೂ ಕಲಾವಿದರಾದ ರಿಧಾನ್ ಕೃಷ್ಣ, ಯವನ್ ಕೃಷ್ಣ , ಅಮಿತ್ ಶಿವದಾಸ್ , ಅನುಷಾ ಸುರೇಶ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಸಿನಿಮಾ ಅಂದ ಮೇಲೆ ಮನರಂಜನೆ, ಆಕರ್ಷಣೆ ಒಂದಷ್ಟು ಗ್ಲಾಮರ್ ಬೇಕಾಗುತ್ತದೆ. ಆದರೆ ಅವುಗಳ ನೀರಿಕ್ಷಣೆಯಲ್ಲಿ ಚಿತ್ರ ನೋಡಲಾಗುವುದಿಲ್ಲ. ಏಕೆಂದರೆ ಇದೊಂದು ಸಾದಾ ಸೀದಾ ನಮ್ಮ ನಡುವೆಯೇ ನಡೆಯುವಂತ ಚಿತ್ರ.
ದಷ್ಟ ಪುಷ್ಟವಾದ ಕಡಿದಾದ ಕಾಡು ಅದರಷ್ಟೇ
ಕಟ್ಟುಮಸ್ಸಾದ ನಾಯಕ ಅವನಿಗೊಬ್ಬ ಐಶಾರಾಮಿ ಜೀವನಕ್ಕೆ ದಾಸನಾದ ತಮ್ಮ ಅವರಿಬ್ಬರ ನಡುವೆ ಕೌಟುಂಬಿಕ ದ್ವೇಷ, ಆ ದ್ವೇಷವನ್ನು ಮರೆಸಿ ಇಬ್ಬರನ್ನು ಒಂದಾಗಿಸುವ ತಮ್ಮನ ಶತ್ರು ಇವು ಕಥೆಯ ಒಂದು ಭಾಗವಾದರೆ ಮತ್ತೊಂದು ಜೇಪ್ ಮಡ್ ರೇಸ್, ಇದೆಲ್ಲದರ ನಡುವೆ ಒಂದು ಹೆಣ್ಣಿನ ಪ್ರೇಮ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಚಿತ್ರ ಸಾಗಿದರು ಧ್ವಿತಿಯಾರ್ಧ ಬಹಳ ಥ್ರಿಲ್ಲಿಂಗ್ ಆಗಿದೆ.
ಕ್ಲೈಮಾಕ್ಸ್ ಇನ್ನೊಂದಷ್ಟು ಥ್ರಿಲ್ಲಿಂಗ್ ಇದ್ದಿದ್ದರೆ ಇನ್ನೂ ಚನ್ನಾಗಿರುತ್ತಿತ್ತು. ಎನ್ನಬಹುದು.
ಒಟ್ಟನಲ್ಲಿ ಮನೆ ಮಂದಿ ಕೂತು ನೋಡ ಬಹುದಾಂತ ಚಿತ್ರ ಇದಾಗಿದೆ.
ಚಿತ್ರ : ಮಡ್ಡಿ
ನಿರ್ದೇಶನ : ಡಾ. ಪ್ರಗ್ಬಲ್
ನಿರ್ಮಾಪಕ : ಪ್ರೇಮಕೃಷ್ಣ ದಾಸ್
ಸಂಗೀತ : ರವಿ ಬಸ್ರೂರು
ಛಾಯಾಗ್ರಹಣ : ರತೀಶ್
ತಾರಾಗಣ : ಯವನ್ ಕೃಷ್ಣ , ರಿಧಾನ್ ಕೃಷ್ಣ , ಅಮಿತ್ ಶಿವದಾಸ್ , ಅನುಷಾ ಸುರೇಶ್ , ರೆಂಜಿ ಪಣಿಕರ್ ಹಾಗೂ ಇತ್ಯಾದಿ ಇತ್ಯಾದಿ.
Rating – 3/5 ( * Star’s )