24 ಘಂಟೆಗಳಲ್ಲಿ 1.3 ಮಿಲಿಯನ್ ಜನರಿಂದ ಲವ್ ಯು ರಚ್ಚು ಚಿತ್ರದ ಟ್ರೇಲರ್ ವೀಕ್ಷಣೆ
ನೆನ್ನೆ ಸಂಜೆ 7ಘಂಟೆಗೆ ಬಿಡುಗಡೆಯಾದ ಲವ್ ಯು ರಚ್ಚು ಟ್ರೇಲರ್ ಪ್ರೇಕ್ಷಕರನ್ನು ಆಕರ್ಷಿಸಿದೆ ಹಾಗೂ ಮೆಚ್ಚುಗೆಯನ್ನು ಪಡೆದಿದೆ. ಇದೊಂದು ವಿಭಿನ್ನವಾದ ಕಥೆಯ ಚಿತ್ರ ಎನ್ನುವುದು ಟ್ರೇಲರ್ ಸಾಬೀತು ಪಡಿಸಿದೆ.
ಇಬ್ಬರು ಮದುವೆಯಾದ ಪ್ರೇಮಿಗಳ ನಡುವೆ ನಡೆಯುವ ಒಂದು ಕೊಲೆಯ ಸುತ್ತ ಸತ್ತುವ ಮರ್ಡರ್ ಮಿಸ್ಟ್ರಿಯ ಕಥೆ ಇದಾಗಿದ್ದು ಒಂದಷ್ಟು ಕುತೂಹಲವನ್ನು ಕಾಯ್ದುಕೊಂಡಿದೆ.
ಶಂಕರ್ ಎಸ್ ರಾಜು ರವರ ಮೊದಲ ನಿರ್ದೇಶನದಲ್ಲಿ ಚಿತ್ರ ಚನ್ನಾಗಿ ಮೂಡಿ ಬಂದಿದ್ದು ಪ್ರೇಕ್ಷಕರನ್ನು ಚಿತ್ರಮಂದಿರಗಳಲ್ಲಿ ಹಿಡಿದು ಕೂರಿಸುವಂತ ಚಿತ್ರವಾಗುವುದರಲ್ಲಿ ಎರಡು ಮಾತಿಲ್ಲ.

ಗುರು ದೇಶಪಾಂಡೆ ನಿರ್ಮಾಣದಲ್ಲಿ ಅಜಯ್ ರಾವ್ ಹಾಗೂ ರಚಿತರಾಮ್ ಹಸಿ ಬಿಸಿಯ ಗ್ಲಾಮಾರ್ ದೃಶ್ಯಗಳಲ್ಲಿ ಕಾಣಿಸಜಕೊಂಡು ಹುಡುಗರ ಹಾರ್ಟ್ ಬೀಟ್ ಹೆಚ್ಚಿದ್ದಾರೆ.
ಈಗಾಗಲೇ ಮಣಿಕಾಂತ್ ಕದ್ರಿಯವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಹಿಟ್ ಆಗಿವೆ.
ಒಟ್ಟಿನಲ್ಲಿ ಟ್ರೇಲರ್ ಪ್ರಕಾರ ಇದೊಂದು ಫುಲ್ ಪ್ಯಾಕೇಜ್ ಇರುವಂತ ಎಂಟರ್ಟೈನ್ಮೆಂಟ್ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
Movie Trailer – Love you Rachuchu
Rating – 3.5/5
ಚಿತ್ರ ಇದೇ ಡಿಸಂಬರ್ 31 ರಂದು ಚಿತ್ರ ತೆರೆಕಾಣಲಿದೆ.