Lineman movie review ಲೈನ್ ಮ್ಯಾನ್” ಎಲ್ಲರ ಹೃದಯದಲ್ಲಿ ಮಾನವೀಯತೆಯ ಬೆಳಕು ಹರಿಸಬಲ್ಲ.
ಚಿತ್ರ – ಲೈನ್ ಮ್ಯಾನ್ ನಿರ್ಮಾಣ ಸಂಸ್ಥೆ – ಪರ್ಪಲ್ ರಾಕ್ ನಿರ್ಮಾಪಕರು – ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್, ಮಣಿಕಾಂತ್ ಕದ್ರಿ ನಿರ್ದೇಶನ – ರಘುಶಾಸ್ತ್ರಿ ಛಾಯಾಗ್ರಹಣ – ಶಾಂತಿಸಾಗರ್ ಸಂಗೀತ – ಮಣಿಕಾಂತ್ ಕದ್ರಿ
ಕಲಾವಿದರು – ತ್ರಿಗುಣ್, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ, ಅಂಜಲಿ ಹಾಗೂ ಮುಂತಾದವರು.

ಲೈನ್ ಮ್ಯಾನ್” ಈ ವಾರ ತೆರೆ ಕಂಡ ಚಿತ್ರ
ಪರ್ಪಲ್ ರಾಕ್ ಸಂಸ್ಥೆ ನಿರ್ಮಾಣದ ಈ ಚಿತ್ರಕ್ಕೆ ರಘು ಶಾಸ್ತ್ರಿ ನಿರ್ದೇಶನ
ಒಂದು ಹಳ್ಳಿಯಲ್ಲಿ ಯಾರಿಂದಲೂ ಮಾಡಲಾಗದಂಥ ಬದಲಾವಣೆ ತಂದ ಲೈನ್ ಮ್ಯಾನ್ ಒಬ್ಬನ ಕಥಾಹಂದರ ಹೊಂದಿರುವ "ಲೈನ್ ಮ್ಯಾನ್" ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಲೈನ್ ಮ್ಯಾನ್” ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿದ್ದು, ಎರಡು ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್, ವಾಟ್ಸಾಪ್ ಅಂತ ಅದರಲ್ಲೇ ಮುಳುಗಿರುವ ಜನ ಒಟ್ಟಾಗಿ ಕೂತು ಮಾತಾಡುವುದು, ಖುಷಿಯಾಗಿರುವುದನ್ನೇ ಮರೆತುಬಿಟ್ಟಿದ್ದಾರೆ. ಭಾವನೆಗಳಿಗೆ ಸ್ಪಂದಿಸುವುದು ಇತ್ತೀಚಿಗೆ ಬಹಳ ಕಡಿಮೆಯಾಗಿದೆ. ಇಂಥ ಸುಂದರ ಕ್ಷಣಗಳನ್ನು “ಲೈನ್ ಮ್ಯಾನ್” ಚಿತ್ರ ನೆನಪಿಸುತ್ತದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ.

ಚಿತ್ರದಲ್ಲಿ ಒಂದಷ್ಟು ಮಾನವೀಯತೆಯ ಗುಣಗಳನ್ನು ಅಡವಳಿಸಲಾಗಿದ್ದು, ಜಗತ್ತು ಬರೀ ಮಾನವನ ಸ್ವತ್ತಲ್ಲ ನಮ್ಮಂತೆ ಅಸಂಖ್ಯಾತ ಜೀವಿಗಳು ಇವೆ ಅವುಗಳ ಬಗ್ಗೆ ಮಾನವ ಹೇಗೆ ಕಾಳಜಿ, ದಯೆ ತೋರಿಸಬೇಕು ಎನ್ನುವದನ್ನು ಚಿತ್ರದಲ್ಲಿ ಬಹಳ ಅರ್ಥ ಪೂರ್ಣವಾಗಿ ತೋರಿಸಿದ್ದಾರೆ. ಒಬ್ಬ ಲೈನ್ ಮ್ಯಾನ್ ಸಾರ್ವಜನಿಕರ ಬದುಕಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಾನೆ ಎನ್ನುವುದು ಚಿತ್ರದ ತಿರುಳು.
ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರವಿದು. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ಈ ಚಿತ್ರದ ನಿರ್ಮಾಪಕರು.

ತೆಲುಗಿನ ಜನಪ್ರಿಯ ನಟ ತ್ರಿಗುಣ್ ಈ ಚಿತ್ರದ ನಾಯಕನಾಗಿದ್ದು, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ, ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.
ಶಾಂತಿ ಸಾಗರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಪ್ರಚುರ ಪಿ ಪಿ , ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಈ ಚಿತ್ರ ಯಾವುದೇ ಬಿಲ್ಡಪ್ ಗಳಿಲ್ಲದ ಅರ್ಥಪೂರ್ಣ ಚಿತ್ರ ಎನ್ನಬಹುದು. ಪ್ರೇಕ್ಷಕರು ಕೊಟ್ಟ ಹಣಕ್ಕೆ ಯಾವುದೇ ಮೋಸವಿಲ್ಲದ ಚಿತ್ರ ಎನ್ನಬಹುದು. ಇಂತಹ ಸದಭಿರುಚಿಯ ಚಿತ್ರಗಳನ್ನು ಗೆಲ್ಲಿಸುವುದು, ಬೆನ್ತಟ್ಟುವುದು ಪ್ರೇಕ್ಷಕ ಪ್ರಭುಗಳ ಜವಾಬ್ದಾರಿ.