launch of the movie MONSTER. ಮಾನ್ಸ್ಟಾರ್ ಚಿತ್ರದ ಚಿತ್ರೀಕರಣ ಶುರು.
ಅರೋನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಸೆಟ್ಟೇರಿದೆ ಚಿತ್ರದ ಹೆಸರು “ಮಾನ್ ಸ್ಟಾರ್”
ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಪವನ್ ಎಸ್. ನಾರಾಯಣ್, ಪ್ರಥಮ್ ಅಭಿನಯದ ಈ ಚಿತ್ರಕ್ಕೆ ಈಗಾಗಲೇ ಮುಹೂರ್ತ ಮುಗಿದಿದ್ದು ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದೆ.

ನಿರ್ದೇಶಕ ವೆಂಕಟೇಶ್ ಈಗಾಗಲೇ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ, ಸಂಕಲನ, ಛಾಯಾಗ್ರಹಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈಗ ನಿರಾತಂಕವಾಗಿ ಭರದಿಂದ ಮಾನ್ ಸ್ಟಾರ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಈ ಚಿತ್ರದಲ್ಲಿ ಟೈಗರ್ ವಿನ್ನೋದ್ ಪ್ರಭಾಕರ್ ಕೂಡ ಒಂದು ವಿಶೇಷವಾದ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ನಮ್ಮ ಕಡೆಯಿಂದ ಚಿತ್ರ ತಂಡಕ್ಕೆ ಶುಭ ಕಾಮನೆಗಳು.