Langoti Man movie trailer release on August 19th. ಆಗಸ್ಟ್ 19 ರಂದು ವಿಭಿನ್ನ ಕಥೆಯ “ಲಂಗೋಟಿ ಮ್ಯಾನ್” ಚಿತ್ರದ ಟ್ರೇಲರ್ ಬಿಡುಗಡೆ .
ಆಗಸ್ಟ್ 19 ರಂದು ವಿಭಿನ್ನ ಕಥೆಯ “ಲಂಗೋಟಿ ಮ್ಯಾನ್” ಚಿತ್ರದ ಟ್ರೇಲರ್ ಬಿಡುಗಡೆ .
ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ನಟ ಶರಣ್ ಅವರಿಗೆ ಚಿತ್ರತಂಡದಿಂದ ಆಹ್ವಾನ .
ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ “ಲಂಗೋಟಿ ಮ್ಯಾನ್” ಚಿತ್ರದ ಟ್ರೇಲರ್ ಬಿಡುಗಡೆ ಆಗಸ್ಟ್ 19 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಬೆಂಗಳೂರು ಹಾಗೂ ನಟ ಶರಣ್ ಅವರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿದೆ.

ಹೊಸತಂಡದ ಪ್ರೀತಿಯ ಆಹ್ವಾನವನ್ನು ಒಪ್ಪಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಹಾಗೂ ನಟ ಶರಣ್ ಅವರು ಸಮಾರಂಭಕ್ಕೆ ಬರುವುದಾಗಿ ಹೇಳಿದ್ದಾರೆ.
ಕರ್ನಾಟಕದ ಉಪ ಮುಖ್ಯಮಂತ್ರಿಗಳು ತಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳಿರುವುದು. ನಟ ಶರಣ್ ಕೂಡ ನಮ್ಮ ಆತ್ಮೀಯ ಆಹ್ವಾನಕ್ಕೆ ಸ್ಪಂದಿಸಿ ಸಮಾರಂಭಕ್ಕೆ ತಪ್ಪದೇ ಬರುವುದಾಗಿ ಹೇಳಿರುವುದು ನಮ್ಮ ತಂಡಕ್ಕೆ ಸಂತೋಷ ತಂದಿದೆ. ಇಂತಹ ದಿಗ್ಗಜರು ನಮ್ಮ ಆಹ್ವಾನಕ್ಕೆ ತೋರಿದ ಪ್ರೀತಿಗೆ ಮನತುಂಬಿ ಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಆಕಾಶ್ ರಾಂಬೋ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಂಹಿತ ವಿನ್ಯ, ಸ್ನೇಹ ಖುಷಿ, ಪವನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.