“Kuladalli kelyavudo” Movie updates “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಯಶಸ್ಸಿ ಗಾಗಿ ಮಡೆನೂರು ಗ್ರಾಮಸ್ಥರಿಂದ ಪಾದಯಾತ್ರೆ.
ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರ ಯಶಸ್ವಿಯಾಗಲೆಂದು ಗ್ರಾಮಸ್ಥರಿಂದ ಪಾದಯಾತ್ರೆ. * .
ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ & ವಿದ್ಯಾ ಅವರು ನಿರ್ಮಿಸುತ್ತಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರ ಈಗಾಗಲೇ ಫಸ್ಟ್ ಲುಕ್ ಟೀಸರ್ ಹಾಗೂ ಹಾಡಿನ ಮೂಲಕ ಜನರ ಮನ ತಲುಪಿದೆ.

ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಅನೇಕ ಕಡೆಗಳಿಂದ ಪಾದಯಾತ್ರೆ ಮೂಲಕ ತಲುಪಿ ದೇವರ ದರ್ಶನ ಮಾಡುವ ವಾಡಿಕೆ ಇದೆ. ಅದೇ ರೀತಿ ಹಾಸನ ಜಿಲ್ಲೆಯ ಮಡೆನೂರಿನಿಂದಲೂ ಅನೇಕ ಜನರು ಧರ್ಮಸ್ಥಳಕ್ಕೆ ಪಾದಾಯಾತ್ರೆ ಹೊರಟಿದ್ದಾರೆ.

ಪಾದಯಾತ್ರೆ ಹೊರಟಿರುವ ಪಾದಾಯಾತ್ರಿಗಳು ತಮ್ಮೂರಿನ ಹುಡುಗ ನಾಯಕನಾಗಿ ಅಭಿನಯಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೊ” ಚಿತ್ರ ಯಶಸ್ವಿಯಾಗಲೆಂದು ಚಿತ್ರದ ಪೋಸ್ಟರ್ ಹಿಡಿದು ಹಾರೈಸಿದ್ದಾರೆ. ಪಾದಯಾತ್ರಿಗಳಿಗೆ ಮಡೆನೂರ್ ಮನು ಮತ್ತು ಸ್ನೇಹಿತರು ನೀರು ಮಜ್ಜಿಗೆ, ಪಾನಕ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ.