Kuladalli kelyavudo movie first look released by action Prince Dhruva Sarja. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಹೊಸ ವರ್ಷದ ದಿನ ಅನಾವರಣವಾಯಿತು “ಕುಲದಲ್ಲಿ ಕೀಳ್ಯಾವುದೊ” ಚಿತ್ರದ ಫಸ್ಟ್ ಲುಕ್. .
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಹೊಸವರ್ಷದ ದಿನ ಅನಾವರಣವಾಯಿತು “ಕುಲದಲ್ಲಿ ಕೀಳ್ಯಾವುದೊ” ಚಿತ್ರದ ಫಸ್ಟ್ ಲುಕ್. .
ಫಸ್ಟ್ ಲುಕ್ ನಲ್ಲೇ ಮೋಡಿ ಮಾಡಿದೆ ಮಡೆನೂರ್ ಮನು ಅಭಿನಯದ ಈ ಚಿತ್ರ .

ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಫಸ್ಟ್ ಲುಕ್ ಹೊಸವರ್ಷದ ಮೊದಲ ದಿನ ಬಿಡುಗಡೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಫಸ್ಟ್ ಲುಕ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರತ್ತಿದೆ.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಇತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿಸಿರುವ ಈ ಚಿತ್ರದ ಆಡಿಯೋ ರೈಟ್ಸ್ ಕೂಡ ಮನೋಮೂರ್ತಿ ಮ್ಯೂಸಿಕಲ್ ಕಂಪನಿಗೆ ಬಾರಿ ಮೊತ್ತಕ್ಕೆ ಮಾರಾಟವಾಗಿದೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ , ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ. ಉತ್ತಮ ಕಂಟೆಂಟ್ ವುಳ್ಳ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.