Kshetrapati movie Review ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಗೆ ಕ್ಷೇತ್ರಪತಿಯ ಹೊಸ ತಿರುವು. ಕ್ಷೇತ್ರಪತಿ ಚಿತ್ರ ವಿಮರ್ಶೆ

ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಯ ಹೊಸ ತಿರುವು.

ಈ ವರೆಗೂ ನೂರಾರು ಸಿನಿಮಾಗಳಲ್ಲಿ ರೈತರ ಬಗ್ಗೆ , ಹಳ್ಳಿಯ ಜನ ಜೀವನದ ಬಗ್ಗೆ ಕಥೆ ಎಣೆಯಲಾಗಿದೆ, ಸಂಭಾಷಣೆಯ ಮೂಲಕ ಖಡಕ್ ಡೈಲಾಗ್ ಗಳನ್ನು ಹೊಡೆಸಲಾಗಿದೆ. ಆದರೆ ಕ್ಷೇತ್ರಪತಿ ಚಿತ್ರದಲ್ಲಿ ರೈತರ ಬಗ್ಗೆಯಷ್ಟೇ ಅಲ್ಲದೇ ರೈತರ ಸಮಸ್ಯೆಗಳ ಬಗ್ಗೆ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ತಾತ ಮುತ್ತಾತನ ಕಾಲದಿಂದಲೂ  ಹೊಲ ಗದ್ದೆಗಳಲ್ಲಿ ಮೈ ಬೆವರ ಹರಿಸಿ ಒಕ್ಕಲತನ ಮಾಡೋ ರೈತನಿಗೆ ಯಾವುದೋ ಕಂಪನಿಗಳು ಇದೇ ಗೊಬ್ಬರ ಹಾಕಿ, ಇದೇ ಬೀಜ ಬಿತ್ತಿ ಅಂತ ಹೇಳಿಕೊಡಬೇಕಾ..?
ಸರ್ಕಾರದ ಹತ್ತಿರ ಸಾಲ ಮನ್ನಾ ಮಾಡಿ ಅಂತ ಬೇಡ್ಕೊಂತೀವಿ ಮುಂದಿನ ವರ್ಷದಿಂದ ರೈತನ ಎಲ್ಲಾ ಸಮಸ್ಯೆಗಳು ಸರಿ ಹೋಗಿ ಬಿಡುತ್ತದೆಯಾ ಈ ರೀತಿಯ ಹಲವಾರು ನೈಜ ಸಮಸ್ಯೆಗಳಿಗೆ ಚಿತ್ರದಲ್ಲಿ ಬಹಳ ಅರ್ಥಪೂರ್ಣವಾಗಿ ಹೇಳಲಾಗಿದೆ.
ರೈತನ ಬಗ್ಗೆ ರೈತರಿಗಿಂತ ಬೇರೆ ಯಾರೋ ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಆದರೆ ರೈತರು ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುತ್ತಾನೆ ಎಂಬ ಸತ್ಯವನ್ನು ನಿರ್ದೇಶಕರು ಬಹಳ ಚನ್ನಾಗಿ ನಾಯಕನಿಂದ ಹೇಳಿಸಿದ್ದಾರೆ.
ನವೀನ್ ಶಂಕರ್ “ಗುಲ್ಟು” ಸಿನಿಮಾದಿಂದ ಹಿಡಿದು ಇಂದಿನ ಕ್ಷೇತ್ರಪತಿಯ ಬಸವನ ಪಾತ್ರದ ವರೆಗೂ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಾ ಪಾತ್ರಗಳಲ್ಲಿ ನೈಜತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.
ಕ್ಷೇತ್ರಪತಿ ಚಿತ್ರದಲ್ಲೂ ಕೂಡ ಇಂಜಿನಿಯರಿಂಗ್ ಓದಿ ಒಕ್ಕಲುತನಕ್ಕೆ ಹಳ್ಳಿಗೆ ಹಿಂದಿರುಗುವ ರೈತನ ಮಗನಾಗಿ ಪ್ರತೀ ಸೀನಿನಲ್ಲೂ ಜೀವ ತುಂಬಿ ಅಭಿನಯಿಸಿ ಪ್ರೇಕ್ಷಕರ ಮನ ಸೆಳೆಯುತ್ತಾರೆ.
ನವೀನ್ ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ನೈಪುಣ್ಯತೆಯನ್ನು ಮೈ ಗೂಡಿಸಿಕೊಂಡಿದ್ದಾರೆ.

ಇನ್ನು ನಾಯಕಿಯಾಗಿ ಅರ್ಚನಾ ಜೋಯಿಸ್ ಮೊದಲ ಬಾರಿಗೆ ವಿಭಿನ್ನ ಗೆಟಪ್ ನಲ್ಲಿ ಪ್ರೇಕ್ಷಕರು ಹುಬ್ಬೇರಿಸುವಂತೆ ಕಾಣಿಸಿಕೊಂಡಿದ್ದಾರೆ. ಟಿವಿ ಚಾನಲ್ ನಿರೂಪಕಿಯಾಗಿ ನಂತರ ಯೂ ಟ್ಯೂಬರ್ ಆಗಿ ಕೆಲಸ ಮಾಡಿದ್ದಾರೆ.

ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳುವುದಾದರೆ ಕ್ಷೇತ್ರಪತಿ ಯಾವುದೇ ಗೊಂದಲವಿಲ್ಲದೇ ನಿರಾಳವಾಗಿ ನೋಡುವಂತ ಚಿತ್ರ.
ಚಿತ್ರ ನೋಡುವ ಪ್ರತೀಯೊಬ್ಬರಿಗೂ ರೈತನಿಗಾಗುತ್ತಿರುವ ಮೋಸದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ
ನಿರ್ದೇಶಕ ಶ್ರೀಕಾಂತ್ ಕಟಗಿ.

ಇದು ಕೇವಲ ಯಾವುದೋ ಹಳ್ಳಿಯಲ್ಲಿ, ಯಾವುದೋ ಮೂಲೆಯಲ್ಲಿ ನಡೆಯುವಂತ ಕಥೆ ಅಲ್ಲ. ಇದು ಭಾರತದ ಪ್ರತಿಯೊಬ್ಬ ರೈತನ ಯಶೋಗಾಥೆ

ಹಳ್ಳಿಯ ಚಿತ್ರ ಅಂದ ಕೂಡಲೇ ಬರೀ ಮಂಡ್ಯ ಹಾಸನದ ಶೈಲಿಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತದೆ ಆದರೆ ಮೊದಲ ಬಾರಿಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ಸಂಪೂರ್ಣ ಚಿತ್ರ ಮೂಡಿ ಬಂದಿದೆ

.ರವಿ ಬಸೂರು ಸಂಗೀತ ಚಿತ್ರ ಯಶಸ್ಸಿಗೆ ಸಾಥ್ ನೀಡಿದೆ ಹಾಗೆಯೇ ಶಿವಸಾಗರ್ ಛಾಯಾಗ್ರಹಣ ಗಮನ ಸೆಳೆಯುತ್ತದೆ.

ರೇಟಿಂಗ್ : 3.5/5
ಚಿತ್ರ : ಕ್ಷೇತ್ರಪತಿ
ನಿರ್ಮಾಣ : ಆಶ್ರಗ ಕ್ರಿಯೇಷನ್ಸ್ , ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್. ನಿರ್ದೇಶಕ : ಶ್ರೀಕಾಂತ್ ಕಟಗಿ


ಸಂಗೀತ : ರವಿ ಬಸ್ರೂರ್
ಛಾಯಾಗ್ರಹಕ : ಶಿವಸಾಗರ್
ತಾರಾಗಣ : ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಹಾಗೂ ಮುಂತಾದವರು…


Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor