Krrish Roadrigras acted in share movie ಶೇರ್” ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ “ಕ್ರಿಸ್ ರೋಡ್ರಿಗಸ್” .

“ಶೇರ್” ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ “ಕ್ರಿಸ್ ರೋಡ್ರಿಗಸ್” .

ಇದು ಕಿರಣ್ ರಾಜ್ ಅಭಿನಯದ ಚಿತ್ರ .

ಕಿರುತೆರೆಯ ಜನಪ್ರಿಯ ನಾಯಕ ಕಿರಣ್ ರಾಜ್, ಈಗ ಹಿರಿತೆರೆಯಲ್ಲೂ ಬ್ಯುಸಿ ನಟ. ಪ್ರಸ್ತುತ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿರುವ “ಶೇರ್” ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “ಶೇರ್” ಚಿತ್ರ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕ್ರಿಸ್ ರೋಡ್ರಿಗಸ್ ಎಂಬ ಇಪ್ಪತ್ತು ವರ್ಷದ ಯುವನಟ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರು ತಿಂಗಳನಿಂದ ಈ ಚಿತ್ರಕ್ಕಾಗಿ ಕ್ರಿಸ್,‌ ಸಾಕಷ್ಟು ಅಭ್ಯಾಸ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಇವರ ಅಭಿನಯದ ಕೆಲವು ಸನ್ನಿವೇಶಗಳನ್ನು ಹೆಚ್ ಎಂ ಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರಿಸಿಕೊಳ್ಳಲಾಗಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.

ಬೀದರ್ ನ ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಗುಮ್ಮಿನೇನಿ‌ ವಿಜಯ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸುರೇಖ ಅಭಿನಯಿಸುತ್ತಿದ್ದಾರೆ‌. ಕ್ರಿಸ್ ರೋಡ್ರಿಗಸ್, ತನೀಶಾ, ವೀಣಾಸುಂದರ್ ಮುಂತಾದವರ ತಾರಾಬಳಗ “ಶೇರ್” ಚಿತ್ರದಲ್ಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor