KRG Studio’s Team celebrating Tagaru Palya movie success ಹೆಸರಾಂತ ವಿತರಣಾ ಹಾಗೂ ನಿರ್ಮಾಣ ಸಂಸ್ಥೆ ಕೆ.ಆರ್.ಜಿ ಸ್ಟುಡಿಯೋಸ್ ಗೆ ಯಶಸ್ಸಿನ ಸಂಭ್ರಮ ..

ಹೆಸರಾಂತ ವಿತರಣಾ ಹಾಗೂ ನಿರ್ಮಾಣ ಸಂಸ್ಥೆ ಕೆ.ಆರ್.ಜಿ ಸ್ಟುಡಿಯೋಸ್ ಗೆ ಯಶಸ್ಸಿನ ಸಂಭ್ರಮ ..

ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಒಂದೇ ದಿನ ಬಿಡುಗಡೆಯಾದ ಎರಡು ಚಿತ್ರಗಳು ಸೂಪರ್ ಹಿಟ್

ಖ್ಯಾತ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈವರೆಗೂ 100ಕ್ಕೂ ಅಧಿಕ ಚಿತ್ರಗಳ ವಿತರಣೆ ಮಾಡಿದೆ. “ರತ್ನನ ಪ್ರಪಂಚ” ದಂತಹ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದೆ‌. ಬಹು ನಿರೀಕ್ಷಿತ ಡಾಲಿ ಧನಂಜಯ ಹಾಗೂ ರಮ್ಯ ಅಭಿನಯದ “ಉತ್ತರಾಕಾಂಡ” ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಈ ಶುಕ್ರವಾರ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಗೆ ಸಂಭ್ರಮದ ಶುಕ್ರವಾರ. ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡಿರುವ ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಿಸಿ, ನಿರ್ದೇಶಿಸಿರುವ “12th ಫೇಲ್” ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಧನಂಜಯ ಅವರು ನಿರ್ಮಿಸಿರುವ “ಟಗರು ಪಲ್ಯ” ಎರಡು ಚಿತ್ರಗಳು ಈ ವಾರ ಬಿಡುಗಡೆಯಾಗಿದ್ದು, ಎರಡೂ ಚಿತ್ರಗಳಿಗೂ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎರಡು ಚಿತ್ರಗಳು ಹೌಸ್ ಫುಲ್ ಆಗುತ್ತಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಮುಂದೆ ಕೂಡ ನಮ್ಮ ಸಂಸ್ಥೆಯ ಮೂಲಕ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತೇವೆ ಹಾಗೂ ವಿತರಣೆ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor