Kousalya supraja rama movie Review ಗಂಡಿನ,ಗಂಡಸುತನದ ಗಾಂಚಾಲಿಗಳನ್ನ ನಾಶಗೊಳಿಸಿದ ಕೌಸಲ್ಯಳ ತ್ಯಾಗದ ತಾಯಿ ಪ್ರೇಮ
ಗಂಡಿನ ಗಂಡಸುತನಗಳ ಗಾಂಚಾಲಿಗಳನ್ನ ನಾಶಗೊಳಿಸಿದ ಕೌಸಲ್ಯಳ ತ್ಯಾಗದ ಮಮತೆಯ ಮುಂದೆ ಯಾವ ಅಂಶಗಳು ಇಲ್ಲಿ ಗೌಣವಾಗುತ್ತದೆ.
ಇಂದು ರಾಜ್ಯದಾದ್ಯಂತ ತೆರೆ ಕಂಡ “ಕೌಸಲ್ಯ ಸುಪ್ರಜಾ ರಾಮ” ಚಿತ್ರ ಕನ್ನಡ ಚಿತ್ರರಂಗದ ಪಾಲಿಗೆ ಸದ್ಯಕ್ಕೆ ಆಕ್ಸಿಜನ್ ಕೊಟ್ಟಂತಿದೆ.
ಸರಿಯಾಗಿ ಕನ್ನಡದಲ್ಲಿ ನಾಲ್ಕು ಅಕ್ಷರ ಬರೆಯಲು ಬರದ ಕೆಲವು ತಿರುಬೋಕಿಗಳು ನೀಡುವ ವಿಮರ್ಶೆಗಳಿಗೆ ಸಿಲುಕಿ ನಲುಗುವ ಕಳಪೆ ಚಿತ್ರಗಳ ನಡುವೆ ಒಂದು ಒಳ್ಳೆಯ ಅರ್ಥಗರ್ಭಿತ ವಾದ ಚಿತ್ರ ಈ ವಾರ ತೆರೆ ಕಂಡಿದೆ.
ಬದುಕಿನ ಮೌಲ್ಯಗಳನ್ನು ಸೆರೆ ಹಿಡಿದಿರುವಂತಹ, ಗಂಡು ಗಂಡಸು ಎಂದು ತನ್ನ ತಾನು ಬಿಂಬಿಸಿಕೊಳ್ಳುವ ಬರದಲ್ಲಿ ಹೆಣ್ಣನ್ನು ಕಾಲ ಕಸದಂತೇ ಕಾಣುವ ಹಾಗೂ ಸ್ವೇಚ್ಚೆಯ ಪರಕಾಷ್ಟೆಯ ತುತ್ತ ತುದಿಗೇರಿ ಅಮಲಿನಲ್ಲಿ ಬದುಕನ್ನು ಮೂರಾಬಟ್ಟೆ ಮಾಡಿಕೊಳ್ಳುವ ಕೆಲವು ತಿಳಿಗೇಡಿ ಹೆಣ್ಣುಗಳ ಜೀವನದ ಮಥನದ ಒಂದು ಸುಂದರ ಕೌಟುಂಬಿಕ ಹಾಗೂ ಮನರಂಜನೆಯ ಜೊತೆಗೆ ಪ್ರೀತಿ ಮತ್ತು ತ್ಯಾಗದ ಹೂರಣವೇ “ಕೌಸಲ್ಯ ಸುಪ್ರಜಾ ರಾಮ” ಚಿತ್ರ
ನಿರ್ದೇಶಕ ಶಶಾಂಕ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು ಅವರ ಮುಡಿಗೆ ಮತ್ತೊಂದು ಯಶಸ್ಸಿನ ಗರಿ ಏರಿದೆ ಎನ್ನಬಹುದು. ತಾನೊಬ್ಬ ಪ್ರೇಕ್ಷಕರ ಮನದ ಇಂಗಿತಕ್ಕೆ ತಕ್ಕಂತ ಚಿತ್ರಗಳನ್ನು ಮಾಡಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ

ಈ ಚಿತ್ರ ಅವರ ಮೊಗ್ಗಿನ ಮನಸ್ಸಿನ ಹಾಗೆ ಎಲ್ಲಾ ಕಾಲಕ್ಕೂ ಹೊಸದಂತೆ ಕಾಣುವ ಕಥೆಯಾದಾರಿತ ಚಿತ್ರ ಎನ್ನಬಹುದು.
ಬಿಸಿ. ಪಾಟಿಲ್ ರವರ ಕುಟುಂಬದಿಂದ ಕೌರವ ಬ್ಯಾನರ್ ಹಾಗೂ ಶಶಾಂಕ್ ಸಿನಿಮಾಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.
ಪಾಟೀಲರು ಈಗಾಗಲೇ ಅವರದೇ ನಿರ್ಮಾಣದಲ್ಲಿ ಅವರದೇ ಅಭಿನಯದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ ಈಗ ಈ ಚಿತ್ರ ಅವರ ಬ್ಯಾನರಿಗೆ ಬಂದಂತಃ ಮತ್ತೊಂದು ಯಶಸ್ಸು. ಈ ಚಿತ್ರದಲ್ಲಿ ಅವರ ಮಗಳು ಶ್ರೀಮತಿ ಸೃಷ್ಟಿ ಪಾಟೀಲ್ ಕೂಡ ನಿರ್ಮಾಪಕಿಯಾಗಿ ತಮ್ಮನ್ನ ತೊಡಗಿಸಿಕೊಂಡು ಒಳ್ಳೆಯ ಚಿತ್ರ ನಿರ್ಮಿಸಿದ ಖುಷಿಯಲ್ಲಿದ್ದಾರೆ.

ನಾಯಕ ನಟನಾಗಿ ಡಾರ್ಲಿಂಗ್ ಕೃಷ್ಣ ಅವರ ಅಭಿನಯ ಈ ಚಿತ್ರದಲ್ಲಿ ಮತ್ತಷ್ಟು ಗಂಭೀರತೆಯನ್ನು ಹೊಂದಿದೆ ಹಾಗೆ ನಿರ್ದೇಶಕ ಶಶಾಂಕ್ ಚನ್ನಾಗಿ ಅವರಿಂದ ಕೆಲಸ ತೆಗೆದಿದ್ದಾರೆ. ವಿಭಿನ್ನ ಶೇಡ್ ಗಳಲ್ಲಿ ಕೃಷ್ಣ ಅಭಿನಯಿಸಿದ್ದಾರೆ ಮೊದಲರ್ಧದಲ್ಲಿ ನೋಡಿದ ಪ್ರೇಕ್ಷಕ ದ್ವಿತಿಯಾರ್ಧದಲ್ಲಿ ಕೃಷ್ಣನ ಅಭಿನಯಕ್ಕೆ ಮಾರು ಹೋಗುತ್ತಾರೆ.
ಹೆಣ್ಣನ್ನು ಕೀಳಾಹಿ ಕಾಣುವ ಹಾಗೂ ಹೆಣ್ಣನ್ನು ಗೌರವಿಸಿ ಪೂಜಿಸುವ ಪಾತ್ರದಲ್ಲಿ ಕೃಷ್ಣನ ಅಭಿನಯ ಚನ್ನಾಗಿ ತೆರೆಯ ಮೇಲೆ ಮೂಡಿ ಬಂದಿದೆ.

ಇನ್ನು ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಮಿಲನ ನಾಗರಾಜ್ ಇಬ್ಬರು ಒಬ್ಬರಿಗಿಂತ ಒಬ್ಬರು ಚನ್ನಾಗಿ ಅಭಿನಯಿಸಿದ್ದಾರೆ
ಮಿಲನ ಹಾಗೂ ಕೃಷ್ಣ ಇಬ್ಬರ ಕಾಂಬಿನೇಷನ್ ನಲ್ಲಿ ಲವ್ ಮಾಕ್ಟೈಲ್ ಚಿತ್ರ ಹಿಟ್ ಆದ ನಂತರ ಅವರಿಬ್ಬರ ಜೋಡಿಯಲ್ಲಿ ಪ್ರೇಕ್ಷಕರಿಗೆ ಹಿಡಿಸುವಂತ ಚಿತ್ರ “ಕೌಸಲ್ಯ ಸುಪ್ರಜಾ ರಾಮ” ಈ ಚಿತ್ರದಲ್ಲಿ ಮಿಲನ ಬೇರೆಯದೇ ರೀತಿಯಲ್ಲಿ ಯಾರೂ ಊಹಿಸದ ಪಾತ್ರವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ ಅದನ್ನ ನೋಡಲು ಪ್ರೇಕ್ಷಕರು ಸಿನಿಮಾ ನೋಡಲೇ ಬೇಕು.

ಮತ್ತು ಬೃಂದಾ ಆಚಾರ್ ಸಿನಿಮಾದ ಮೊದಲರ್ಧದಲ್ಲಿ ಪ್ರೇಕ್ಷಕನ ಮನಸ್ಸಿನಲ್ಲಿ ನಿಲ್ಲುತ್ತಾರೆ. ಚಿತ್ರ ನೋಡಿದವರಿಗೆ ನಮಗೂ ಇಂತಹ ಒಬ್ಬ ಪ್ರೇಯಸಿ ಇರಬೇಕು ಅನ್ನುವಷ್ಟು ಇಷ್ಟವಾಗುತ್ತಾರೆ.
ಪಾತ್ರದಲ್ಲಿನ ಲವಲವಿಕೆ ಶುದ್ಧವಾದ ಪ್ರೀತಿಯ ಚಡಪಡಿಕೆ, ನಾಯಕನ ದುರಾಹಂಕಾರವನ್ನು ಸಹಿಸಿಕೊಂಡು ಬಹಳ ತಾಳ್ಮೆಯಿಂದ ನಿಭಾಯಿಸಯವ ಒಬ್ಬ ಒಳ್ಳೆಯ ಪ್ರೇಮಿಯಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿನ ಛಾಯಾಗ್ರಹಣ ಹಾಗೂ ಸಂಗೀತ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.
ಈ ಒಂದು ಅಚ್ಚುಕಟ್ಡಾದ ಮಾತೃಪ್ರೇಮದ ಚಿತ್ರವನ್ನು ಪ್ರೇಕ್ಷಕರು ನೋಡಲೇ ಬೇಕಾದಂತ ಚಿತ್ರ “ಕೌಸಲ್ಯ ಸುಪ್ರಜಾ ರಾಮ”
ಒಳ್ಳೆಯ ಚಿತ್ರ ಬಂದಾಗ ಕಣ್ಮುಚ್ಚಿ ಕೂರಬೇಡಿ ನೋಡಿ ಖುಷಿಪಡಿ.