Koragajja movie last day shooting ಕೊರಗಜ್ಜ ಚಿತ್ರಕ್ಕೆ ಮೂರನೇ ಬಾರಿಗೆ ಕ್ಲೈಮ್ಯಾಕ್ಸ್

*”ಕೊರಗಜ್ಜ”* *ಚಿತ್ರಕ್ಕೆ 3ನೇ ಬಾರಿ ಕ್ಲೈಮ್ಯಾಕ್ಸ್ ರೀ ಶೂಟ್**

*ಹಾಲಿವುಡ್ ತಂತ್ರಜ್ಞರಿಂದ ಗ್ರಾಫಿಕ್ಸ್ ಟಚ್* .
———————————-
ಚಿತ್ರೀಕರಣ ಮುಗಿಸಿ, ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರಕ್ಕೆ ಮೂರನೆಯ ಬಾರಿಗೆ ಕ್ಲೈಮ್ಯಾಕ್ಸ್ ಚಿತ್ರಿಸಿಕೊಳ್ಳಲಾಗಿದೆ. ಗಗನ‌ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸನ್ನು ಮರು ಚಿತ್ರೀಕರಿಸಿ ಕೊಳ್ಳಲಾಯಿತು.
ಈ ಸಮಯದಲ್ಲಿ ಆಂಟ್ ಮ್ಯಾನ್, ಟ್ರೂ ಸ್ಪಿರಿಟ್, ಅಕ್ವ‌ ಮ್ಯಾನ್ ಮೊದಲಾದ ಹಾಲಿವುಡ್ ಚಿತ್ರಗಳ
VFX ಮತ್ತು ಗ್ರಾಫಿಕ್ಸ್ ತಂತ್ರಜ್ಞರು ಭಾಗಿಯಾಗಿದ್ದರು.
ನಂತರ ಯಲಹಂಕದ ಬಳಿ ಇರುವ ಸ್ಟುಡಿಯೋ 9 ರಲ್ಲಿ ಸತತ ಐದು ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಮೊದಲಾದವರು
ಗ್ರೀನ್ ಮ್ಯಾಟ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.ನಟಿ ಶ್ರುತಿಯವರು ನಿರ್ವಹಿಸುತ್ತಿರುವ
ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಡ್ತಿ ಯ ದೇವಸ್ಥಾನ ವು ಉಡುಪಿ ಬಳಿ ಇದ್ದು, ಕೊರಗಜ್ಜ ಮತ್ತು ಸಾಕುತಾಯಿ ಬೈಕಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ

ಬಹುಕೋಟಿ ರುಪಾಯಿಗಳನ್ನು ಹೂಡಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ರವರು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಕನ್ನಡ, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿರುವ ಈ ಚಿತ್ರದ ಸಂಕಲನ ಕಾರ್ಯವನ್ನು ಸುರೇಶ್ ಅರಸ್ ಮತ್ತು ವಿದ್ಯಾಧರ್ ಶೆಟ್ಟಿ ಮುಗಿಸಿದ್ದಾರೆ. ಸಂಗೀತ ಸುಧೀರ್ – ಕೃಷ್ಣ‌ ಅವರದು. ಡಿಓಪಿ ಯಾಗಿ ಪವನ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ.
ಕಬೀರ್ ಬೇಡಿ, ಭವ್ಯ, ಸಂದೀಪ್ ಸೊಪರ್ಕರ್, ನವೀನ್ ಪಡಿಲ್ ಹೀಗೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor