Koliyesru ಆಷ್ಟ್ರೇಲಿಯಾದ “ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವದಲ್ಲಿ ಕೋಳಿ ಎಸ್ರು” ಸಿನೆಮಾ ಆಯ್ಕೆ
Melbourne Indian film festival in selected movie
ಇದೇ ಆಗಸ್ಟ್ ನಲ್ಲಿ ಆಷ್ಟ್ರೇಲಿಯಾದ “ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ” ದಲ್ಲಿ ನಮ್ಮ “ಏಪ್ರಾನ್ ಪ್ರೊಡಕ್ಷನ್ಸ್” ಸಂಸ್ಥೆ ನಿರ್ಮಿಸಿರುವ, ಖ್ಯಾತ ಕತೆಗಾರ “ಕಾ.ತಾ ಚಿಕ್ಕಣ್ಣ”ನವರ ಕತೆಯಾಧಾರಿತ “ಚಂಪಾ ಪಿ ಶೆಟ್ಟಿ”ಯವರ ನಿರ್ದೇಶನದ ಕನ್ನಡದ “ಕೋಳಿ ಎಸ್ರು” ಸಿನೆಮಾ ಆಯ್ಕೆಗೊಂಡಿದೆ.. ಮತ್ತು, ಇದೇ ಚಿತ್ರದ ನಟಿ “ಅಕ್ಷತಾ ಪಾಂಡವಪುರ” ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೆಟ್ ಆಗಿದ್ದಾರೆ .. ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಬಾಲಿವುಡ್ ನ ಖ್ಯಾತ ನಟಿಯರ ಜೊತೆ ಅಕ್ಷತಾ ನಾಮಿನೇಟ್ ಆಗಿರುವುದು ಕನ್ನಡದ ಹೆಮ್ಮೆ.
ಜೊತೆಗೆ ಇತ್ತೀಚೆಗೆ ನಡೆದ ಕೆನಡಾದ “ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್” ನಲ್ಲಿ ಕೂಡ ” ಕೋಳಿ ಎಸ್ರು” ಸಿನೆಮಾ ಪ್ರದರ್ಶನಗೊಂಡು, ಚಿತ್ರದ ನಿರ್ದೇಶಕಿ ಚಂಪಾಶೆಟ್ಟಿ ಅವರಿಗೆ “ಅತ್ಯುತ್ತಮ ನಿರ್ದೇಶಕಿ” ಪ್ರಶಸ್ತಿ ಮತ್ತು “ಅಕ್ಷತಾ ಪಾಂಡವಪುರ” ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದ್ದೂ ಕೂಡಾ ಭಾರತೀಯ ಚಿತ್ರರಂಗ “ಕೋಳಿ ಎಸ್ರು” ಚಿತ್ರವನ್ನು ಗಮನಿಸುವಂತಾಗಿದೆ.
ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಷಯ. ಈಗಾಗಲೇ ಹಲವಾರು ಹೊರದೇಶಗಳ ಹಾಗೂ ಭಾರತೀಯ ಚಿತ್ರೋತ್ಸವ ಗಳಲ್ಲಿ ಆಯ್ಕೆಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ದಯಾಮಡಿ ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ, ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಕನ್ನಡದ ಸದಭಿರುಚಿಯ ಸಿನೆಮಾಗೆ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಳ್ಳುತ್ತೇವೆ..
ಇದುವರಗೂ “ಕೋಳಿ ಎಸ್ರು” ಸಿನೆಮಾ ಆಯ್ಕೆಯಾದ ಚಿತ್ರೋತ್ಸವಗಳು ಹಾಗೂ ಪ್ರಶಸ್ತಿಗಳ ವಿವರಣೆ ಕೆಳಗಿನಂತಿದೆ
- ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಯು.ಎಸ್ ಎ)
- ಇಂಡೋ ಜರ್ಮನ್ ಫಿಲ್ಮ್ ವೀಕ್ (ಜರ್ಮನಿ)
3.ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಕೆನಡಾ)
- ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಆಷ್ಟ್ರೇಲಿಯಾ
- ಅಜಂತಾ ಎಲ್ಲೋರ ಅಂತರರಾಷ್ಟ್ರೀಯ ಚಿತ್ರೋತ್ಸವ (ಔರಂಗಾಬಾದ್)
- ಅಂತರಾಷ್ಟ್ರೀಯ ಚಿತ್ರೋತ್ಸವ ತ್ರಿಶೂರ್ (ಕೇರಳ)
7.ಅಂತರಾಷ್ಟ್ರೀಯ ಚಿತ್ರೋತ್ಸವ ಇರಿಂಜ್ಯಾಲಗುಡ (ಕೇರಳ)
8.ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ (ಬೆಂಗಳೂರು)
- ನಿಟ್ಟೆ ಅಂತರಾಷ್ಟ್ರೀಯ ಚಿತ್ರೋತ್ಸವ (ಮಂಗಳೂರು)
ಪ್ರಶಸ್ತಿಗಳು
- ಅತ್ಯುತ್ತಮ ಭಾರತೀಯ ಚಿತ್ರ “ಕೋಳಿಎಸ್ರು “
(ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ) - ಅತ್ಯುತ್ತಮ ನಿರ್ದೇಶಕಿ, ಚಂಪಾ ಪಿ ಶೆಟ್ಟಿ
(ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
3 ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ
(ಒಟ್ಟವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
- ಅತ್ಯುತ್ತಮ ನಟಿ, ಅಕ್ಷತಾ ಪಾಂಡವಪುರ
(ಅಜಂತಾ ಎಲ್ಲೋರ ಅಂತರಾಷ್ಟ್ರೀಯ ಚಿತ್ರೋತ್ಸವ) - ಅತ್ಯುತ್ತಮ ಬಾಲನಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಅಪೇಕ್ಷಾ ಚೋರನಹಳ್ಳಿ
(ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ)