Khelo macha Party song released by Kiccha Sudeep. ಕೇಳೋ ಮಚ್ಚಾ” ಎಂಬ ಪಾರ್ಟಿ ಹಾಡನ್ನು ಬಿಡುಗಡೆ ಮಾಡಿದ “ಜಸ್ಟ್ ಮ್ಯಾರೀಡ್” ತಂಡ
“ಕೇಳೋ ಮಚ್ಚಾ” ಎಂಬ ಪಾರ್ಟಿ ಹಾಡನ್ನು ಬಿಡುಗಡೆ ಮಾಡಿದ “ಜಸ್ಟ್ ಮ್ಯಾರೀಡ್” ತಂಡ
ಸಂಕ್ರಾಂತಿಯ ದಿನದಂದು “ಜಸ್ಟ್ ಮ್ಯಾರೀಡ್” ತಂಡ “ಕೇಳೋ ಮಚ್ಚಾ” ಎಂಬ ಎರಡನೇ ಗೀತೆಯನ್ನು ಬಿಡುಗಡೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಹಾಡನ್ನು ಡಿಜಿಟಲ್ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

“ಕೇಳೋ ಮಚ್ಚಾ” ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ರಚನೆ ಮಾಡಿದ್ದು, ಬಿ
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಖ್ಯಾತ ಗಾಯಕ ನಕಾಶ್ ಅಜೀಜ್ ಧ್ವನಿ ಆಗಿದ್ದಾರೆ.

ಸಿ. ಆರ್ ಬಾಬಿ ನಿರ್ದೇಶನದ “ಜಸ್ಟ್ ಮ್ಯಾರೀಡ್” ಕೌಟುಂಬಿಕ ಬಾಂಧವ್ಯಗಳ ಮೌಲ್ಯವನ್ನು ತಿಳಿಸುವ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಶೃತಿ ಹರಿಹರನ್, ದೇವರಾಜ್, ಶ್ರುತಿ, ಅನೂಪ್ ಭಂಡಾರಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕ್ ನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ, ಹಾಗು ಸಿ. ಆರ್ ಬಾಬಿ ಮತ್ತು ಬಿ. ಅಜನೀಶ್ ಲೋಕ್ ನಾಥ್ ಆಬ್ಸ್ ಸ್ಟೂಡಿಯೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುತ್ತಾರೆ.