“Khadima movie review” ಖದೀಮ ಚಿತ್ರ ವಿಮರ್ಶ. ಮಾರ್ಕೇಟ್ ನಲ್ಲಿ ಖದೀಮನಲವ್ ಕಹಾನಿ
ಮಾರ್ಕೇಟ್ ನಲ್ಲಿ ಖದೀಮನ
ಲವ್ ಕಹಾನಿ
ಚಿತ್ರ: ಖದೀಮ
ನಿರ್ಮಾಣ: ಟಿ. ಶಿವಕುಮಾರನ್, ಯಶಸ್ವಿನಿ ಆರ್.
ನಿರ್ದೇಶನ: ಸಾಯಿ ಪ್ರದೀಪಗ
ಸಂಗೀತ : ಶಶಾಂಕ್ ಶೇಷಗಿರಿ
ಛಾಯಾಗ್ರಹಣ : ನಾಗಾರ್ಜುನ ಆರ್.ಡಿ.
ಸಂಕಲನ : ಉಮೇಶ್ ಆರ್.ಬಿ.
ನಾಯಕ ನಟ ಸೂರ್ಯನಿಗೆ
ಮನೆ ಇಲ್ಲ, ಮಠ ಇಲ್ಲ, ಅಪ್ಪ ಅಮ್ಮ ಯಾರು ಅಂತ ಗೊತ್ತಿಲ್ಲ. ಮಾಡೋ ಕೆಲಸ ಇಲ್ಲ, ಇವನೊಬ್ಬ ಬೀದಿ ಕಳ್ಳ.
ಸಿಕ್ಕವರನೆಲ್ಲಾ ದೋಚೋದೆ ಇವನ ಕಾಯಕ, ಇವನ ತೋಳಿನ ಮೇಲೆ ಚಿಕ್ಕಂದಿನಿಂದ ಇರೋದು ನಾನೊಬ್ಬ ಕಳ್ಳ ಅನ್ನೋ ಅಚ್ಚೆ. ಈ ಹಚ್ಚೆಯೇ ಇವನ ಪ್ರೀತಿಗೆ ಮುಳ್ಳಾಗುತ್ತದೆ.
ಈ ಅನಾಥನನ್ನು ತಂದು ಸಾಕುವುದು ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೆಶ್ ಜೋಡಿ. ಇವರು ಸಣ್ಣ ಹೋಟೆಲ್ ನಡೆಸುವ ಜೊತೆಗೆ ಇವನನ್ನು ಸಾಕುತ್ತಾರೆ.

ಈ ಪೋಲಿ ಅಲೆಯುವ ಖದೀಮನಿಗೆ ಬ್ಯಾಂಕ್ ಲೋನ್ ಕೊಡುತ್ತೇವೆ ಬೇಕಾ ಎನ್ನುವ ಅನಾಮಧೇಯ ದೂರವಾಣಿ ಕರೆ ಇವನ ಬದುಕಿಗೆ ಮುಂದೆ ಬರೆ ಎಳೆದಂತಾಗುತ್ತದೆ.
ಹಣ, ಹೆಣ್ಣಿನ ಆಸೆಗೆ ಬಿದ್ದು ಚಿತ್ದ ನಾಯಕಿಯ ಹಿಂದೆ ಬೀಳುತ್ತಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ನಂತರ ಈತನೊಬ್ಬ ಕಳ್ಳ ಖದೀಮ ಅಂತ ಗೊತ್ತಾಗುತ್ತಲೆ ಅವಳಿಗೆ ಆಕಾಶ ತಲೆ ಬಿದ್ದಂಗಾಗುತ್ತದೆ. ಆಕೆ ಅವನನ್ನು ಸಾರಾ ಸಗಟಾಗಿ ದೂರ ತಳ್ಳಿ ಅವನಿಂದ ದೂರ ಹೊರಟು ಹೋಗುತ್ತಾಳೆ.
ಇದರ ಮದ್ಯೆ ಶೋಭರಾಜ್ ಒಬ್ಬ ಊಸರುವಳ್ಳಿ ರಾಜಕರಣಿ.
ಅವನ ಜೊತೆ ಸೇರಿಯೇ ಈ ಕಥಾನಾಯಕ ಮಾಡಬಾರದ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾನೆ. ತನ್ನ ಹುಡುಗಿಗಾಗಿ ಅವನ್ನೆಲ್ಲಾ ಬಿಟ್ಟು ಸರಿಯಾಗಿ ಬದುಕಲು ತೀರ್ಮಾನಿಸುತ್ತಾನೆ. ಅಲ್ಲಿಂದ ಹಿಸ ಹೊಸ ಸಮಸ್ಯೆಗಳನ್ನು ಹೆದರಿಸಬೇಕಾಗುತ್ತದೆ. ಅವನು ಸನ್ಮಾರ್ಗದಲ್ಲಿ ನಡೆಯುತ್ತಾನಾ, ಅವನಿಗೆ ಅವನ ಹುಡುಗಿ ಸಿಗುತ್ತಾಳಾ, ಅವನನ್ನು ನಂಬಿರುವ ಮಾರ್ಕೇಟ್ ಜನರಿಗೆ ನ್ಯಾಯ ಸಿಗುತ್ತದೆಯಾ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕಾಗುತ್ತದೆ.

ಚಿತ್ರದ ನಾಯಕ, ನಾಯಕಿ ಹೊಸಬರಾದರೂ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಅನುಶಾ ಕೃಷ್ಣ ಚನ್ನಾಗಿ ನಟಿಸಿದ್ದಾರೆ ಅವರ ನಗು ಆಕೆಗೆ ಪ್ಲಸ್ ಪಾಯಿಂಟ್ ಎನ್ನಬಹುದು. ನಾಯಕ ಚಂದನ್ ಯಾವುದೇ ಅನುಭವ ಇಲ್ಲದೇ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದಿರುವುದು, ಆಕ್ಷನ್ ದೃಶ್ಯಗಳಲ್ಲಿ ಪರವಾಗಿಲ್ಲ ಎನ್ನಬಹುದು, ಅಭಿನಯದ ಕೊರತೆ ಎದ್ದು ಕಾಣುತ್ತದೆ. ನಿರ್ಮಾಣ ಸಂಸ್ಥೆ ಹೊಸದಾದರು ಕೊರತೆ ಇಲ್ಲದಂತೆ ಹಣ ವ್ಯಯಿಸಿರುವುದು ಕಾಣುತ್ತದೆ.
ಶಿವೇಶು ಪ್ರೊಡಕ್ಷನ್ಸ್ ಅಡಿಯಲ್ಲಿ ಅಮೇರಿಕಾದ ನಿವಾಸಿ ಅನಿವಾಸಿ ಭಾರತೀಯ ಟಿ.ಶಿವಕುಮಾರನ್ ಬಂಡವಾಳ ಹೂಡಿದ್ದಾರೆ. ಹಾಗೆಯೇ ಯಶಸ್ವಿನಿ.ಆರ್ ಸಹ ನಿರ್ಮಾಪಕಿಯಾಗಿ ತೊಡಗಿಕೊಂಡಿದ್ದಾರೆ.
ನಿರ್ದೇಶಕ ಸಾಯಿ ಪ್ರದೀಪ್ ಕೂಡ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ಪೋಷಕ ಕಲಾವಿದರು ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಇಲ್ಲಿಯವರೆಗೂ ಮಚ್ಚು, ಲಾಂಗ್‌ಗಳ ಸದ್ದು ಪರದೆ ಮೇಲೆ ಆರ್ಭಟಿಸಿತ್ತು. ಆದರೆ ಇಲ್ಲಿ ಪ್ರೀತಿ ಪ್ರೇಮದ ಗೀತೆಯನ್ನು ಜನಸಂದಣಿ ನಡುವೆ ಶೇಕಡ ಚಿತ್ರೀಕರಣ ಮಾಡಿದ್ದು ಒಂದು ಸವಾಲಿನ ಕೆಲಸ ಎನ್ನಬಹುದು.