Kere Bete movie watched sandalwood celebrities. ಮಲೆನಾಡಿನ ‘ಕೆರೆಬೇಟೆ’ಗೆ ಡಾಲಿ, ಧ್ರುವ, ನೆನಪಿರಲಿ ಪ್ರೇಮ್ ಮೆಚ್ಚುಗೆ

  • ಗೌರಿಶಂಕರ್ ‘ಕೆರೆಬೇಟೆ’ ಚಿತ್ರಕ್ಕೆ ಸಿನಿ ಗಣ್ಯರು ಫಿದಾ
  • ಮಲೆನಾಡಿನ ‘ಕೆರೆಬೇಟೆ’ಗೆ ಡಾಲಿ, ಧ್ರುವ, ನೆನಪಿರಲಿ ಪ್ರೇಮ್ ಮೆಚ್ಚುಗೆ
  • ಅಪ್ಪಟ ಗ್ರಾಮೀಣ ಸೊಗಡಿನ ‘ಕೆರೆಬೇಟೆ’ಯನ್ನು ಮೆಚ್ಚಿಕೊಂಡ ಡಾಲಿ, ಧ್ರುವ, ನೆನಪಿರಲಿ ಪ್ರೇಮ್

‘ಕೆರೆಬೇಟೆ’, ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಇತ್ತೀಚಿಗಷ್ಟೇ ರಿಲೀಸ್ ಆಗಿರುವ ‘ಕೆರೆಬೇಟೆ’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ, ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ ‘ಕೆರೆಬೇಟೆ’ ಸಿನಿಮಾ.

ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದಷ್ಟೇ ಅಲ್ಲ ಸಿನಿಮಾ ಗಣ್ಯರು ಕೂಡ ಕೆರೆಬೇಟೆ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಉತ್ತಮ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈ ಬಿಡಲ್ಲ ಎನ್ನುವುದಕ್ಕೆ ಕೆರೆಬೇಟೆ ಚಿತ್ರವೇ ಸಾಕ್ಷಿ. ಸಿನಿಮಾ ಗಣ್ಯರು ಕೂಡ ಉತ್ತಮ ಕಂಟೆಕ್ಟ್ ಇರುವ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವುದಕ್ಕೆ ಕೆರೆಬೇಟೆ ಸಿನಿಮಾನೇ ಉದಾಹರಣೆ.

ಸಿನಿಮಾ ಗಣ್ಯರು ಸಹ ಗೌರಿಶಂಕರ್ ಮತ್ತು ರಾಜಗುರು ಅವರ ಪರಿಶ್ರಮವನ್ನು ಕೊಂಡಾಡುತ್ತಿದ್ದಾರೆ. ಡಾಲಿ ಧನಂಜಯ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಕವಿರಾಜ ಸೇರಿದಂತೆ ಅನೇಕ ಗಣ್ಯರು ಹಾಡಿ ಹೊಗಳುತ್ತಿದ್ದಾರೆ. ಉತ್ತಮ ಸಿನಿಮಾಗಳಿಗೆ ಯಾವತ್ತೂ ಅನ್ಯಾಯವಾಗಬಾರದು ದಯವಿಟ್ಟು ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

‘ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ನಾನು ಕೂಡ ಸದ್ಯದಲ್ಲೇ ಸಿನಿಮಾವನ್ನು ನೋಡುತ್ತೇನೆ, ನೀವೆಲ್ಲರೂ ಸಿನಿಮಾ ನೋಡಿ’  ಎಂದು ಡಾಲಿ ಕೂಡ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ನಟ ಧ್ರುವ ಸರ್ಜಾ ಕೂಡ ಕೆರೆಬೇಟಿ ಚಿತ್ರಕ್ಕೆ ಫಿದಾ ಆಗಿದ್ದಾರೆ. ‘ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ತಾ ಇದೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ಎಲ್ಲರೂ ಸಿನಿಮಾ ನೋಡಿ’ ಎಂದು ಅಭಿಮಾನಿಗಳಲ್ಲಿ ಕೇಳಿಡಿದ್ದಾರೆ. ನಿರ್ದೇಶಕ ಶಶಾಂಕ್ ಅವರಿಗೆ ಸಿನಿಮಾ ತುಂಬಾ ಇಷ್ಟವಾಗಿದೆ. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಶಶಾಂಕ್ ಪ್ರೇಕ್ಷಕರಿಗೆ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ. 

ಸಿನಿಮಾದ ಕಥೆ, ನಿರ್ದೇಶನ, ಊಹಿಸಲಾಗದ ಟ್ವಿಸ್ಟ್, ಮಲೆನಾಡಿನ ಚಿತ್ರಣ, ಅಲ್ಲಿನ ಭಾಷೆ, ಆಚಾರ ವಿಚಾರ, ಕೆರೆಬೇಟೆ ಸಂಸ್ಕ್ರತಿ ಎಲ್ಲವನ್ನು ಈ ಚಿತ್ರದ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜಗುರು. ಚಿತ್ರದಲ್ಲಿ ನಾಯಕಿ ಬಿಂದು ಶಿವರಾಮ್ ಪಾತ್ರ, ಗೋಪಾಲ ದೇಶಪಾಂಡೆ, ಸಂಪತ್ ಕುಮಾರ್ ಮತ್ತು ನಟಿ ಹರಣಿಯವರ ಪಾತ್ರಗಳು ಸಹ ಅದ್ಭುತವಾಗಿ ಮೂಡಿ ಬಂದಿದೆ. 

ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ ಇದಾಗಿದ್ದು ಮಣ್ಣಿನ ಕಥೆಯ ಸಿನಿಮಾಗಳಿಗೆ ಯಾವತ್ತೂ ಸೋಲಿಲ್ಲ ಎನ್ನುವುದಕ್ಕೆ ಈ ಸಿನಿಮಾ ಮತ್ತೊಂದು ಉದಾಹರಣೆಯಾಗಿದೆ.

ಕೆರೆಬೇಟೆ ಜನಮನ ಸಿನಿಮಾಸ್ ಬ್ಯಾಮರ್ ನಲ್ಲಿ ನಾಯಕ ಗೌರಿ ಶಂಕರ್ ಹಾಗೂ ಸಹೋದರ ಜೈ ಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯ ಅವರ ಸಂಗೀತವಿದೆ. ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor