Kere Bete Movie Review. ಮಲೆನಾಡ ಮಣ್ಣಿನ ವಿಭಿನ್ನ ಟ್ರಾಜಿಡಿ ಪ್ರೇಮ ಕಥೆ.

ಚಿತ್ರ – ಕೆರೆಬೇಟೆ, Rating – 3.5/5

ನಿರ್ದೇಶನ: ರಾಜ್‌ಗುರು

ನಿರ್ಮಾಣ – ಜನಮನ ಸಿನಿಮಾಸ್

ನಿರ್ಮಾಪಕರು – ಗೌರಿಶಂಕರ್, ಜೈ ಶಂಕರ್ ಪಟೇಲ್

ಸಂಗೀತ ನಿರ್ದೇಶನ – ಗಗನ್ ಬಡೇರಿಯಾ

ಛಾಯಾಗ್ರಹಣ – ಕೀರ್ತನ್ ಪೂಜಾರಿ

ತಾರಾಗಣ – ಗೌರಿಶಂಕರ್,  ಬಿಂದು ಶಿವರಾಂ, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ಸಂಪತ್ ಮೈತ್ರೇಯ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಇತರರು

ಕೆರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಕೆರೆ ಬೇಟೆ ಎಂಬ ಹೆಸರಿನಲ್ಲಿ ಮೀನುಗಳ ಬೇಟೆಯಾಡುವುದು ಒಂದು ಸಂಸ್ಕೃತಿ, ಇದು ಮಲೆನಾಡಿಗರ ಸಾಂಪ್ರದಾಯಿಕ ಮನರಂಜನೆಯಲ್ಲಿ ಇದೂ ಕೂಡ ಒಂದು.

ಮಲೆನಾಡಿನ ಸೊಗಡಿನ ಹಿನ್ನೆಲೆಯಲ್ಲಿ ನಡೆಯುವ  ಒಂದು ದುರಂತ ಪ್ರೇಮಕಥೆಯನ್ನು  ನಿರ್ದೇಶಕ ರಾಜ್‌ಗುರು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರೇಮ ಕಥೆಗಳು ಹಲವಾರು ಬಂದಿವೆ ಆದರೆ ಇದು ನಿಜಕ್ಕೂ ಊಹಿಸದ ರೀತಿಯಲ್ಲಿ ಮೂಡಿ ಬಂದಿದೆ ಎನ್ನ ಬಹುದು.

 ಚಿತ್ರದ ನಾಯಕನಾಗಿ ಗೌರಿ ಶಂಕರ್ ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಗೌರಿಶಂಕರ್ ಈ ಚಿತ್ರದಲ್ಲಿ ಅವರ  ಹಿಂದಿನ ಚಿತ್ರಗಳಿಗಿಂತ ಒಳ್ಳೆಯ ಅಭಿನಯ ನೀಡಿದ್ದಾರೆ. ಅವರೂ ಮಲೆನಾಡ ಭಾಗದವರೇ ಆಗಿರುವುದರಿಂದ ಸಂಭಾಷಣೆ ಸಹಜವಾಗಿ ಮೂಡಿಬಂದಿದೆ.

ಇನ್ನು ಕೆರೆಬೇಟೆ ಚಿತ್ರದಲ್ಲಿ ನಾಗನ ಪಾತ್ರದಲ್ಲಿ ಯಾರಿಗೂ ಹೆದರದ ತುಂಬಾ ಒರಟು, ಉಂಬನ ಪಾತ್ರದಲ್ಲಿ ಅಭಿನಯಿಸಿ ಎಲ್ಲರಿಗೂ ಇಷ್ಟವಾಗುತ್ತಾರೆ.

ಇನ್ನು ಮೊದಲ ಚಿತ್ರದಲ್ಲೇ ನಾಯಕಿ ಬಿಂದು ಶಿವರಾಂ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

ನಾಯಕಿ ತಂದೆ ಪಾತ್ರ ಮಾಡಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸಂಪತ್ ಮೈರ್ತೇಯಾ, ತಾಯಿ ಪಾತ್ರದಲ್ಲಿ ಹರಿಣಿ ಇವರೆಲ್ಲ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಅಅದರಲ್ಲೂ ತಾಯಿಯಾಗಿ ಅಭಿನಯಿಸಿರುವ ಹರಿಣಿ ತಮ್ಮ ಪಾತ್ರಕ್ಕೆ 100% ನ್ಯಾಯ ಒದಗಿಸಿದ್ದಾರೆ.

ಆದರೆ ಕೋಪ, ಆವೇಶ ತುಂಬಿಕೊಂಡಿದ್ದ  ನಾಗನ ಬದುಕಿನಲ್ಲಿ ನಾಯಕಿ ಬಿಂದು ಶಿವರಾಮ್ ಮೀನಾ ಪಾತ್ರದ ಪ್ರವೇಶವಾಗಿ   ಇಬ್ಬರ ನಡುವೆ ಪ್ರೀತಿ ಅರಳುತ್ತದೆ. ಇದೊಂದು ಜಾತಿಯತೇ, ಮೇಲು ಕೀಳುಗಳ ನಡುವೆ ಅರಳುವ ಪ್ರೀತಿಗೆ ಏನೆಲ್ಲಾ ಕಂಟಕಗಳು ಎದುರಾಗುತ್ತವೆ ನಂತರ ನಾಯಕ, ನಾಯಕಿ ಎಲ್ಲರಿಂದ ಕಣ್ಮರೆಯಾಗಿ ಊರುಬಿಟ್ಟು ಎಲ್ಲಿಗೆ ಹೋಗುತ್ತಾರೆ, ಅವರ ಪ್ರೀತಿ ಸಪಲವಾಗುತ್ತಾ, ಬಡತನ ಸಿರಿತನದ ನೆಪದಲ್ಲಿ  ಹಿರಿಯರು ಮಾಡುವ ತಪ್ಪೇನು ಇದನ್ನೆಲ್ಲ ಬಹಳ ಪ್ರೇಕ್ಷಕರ ಮನ ಮುಟ್ಟುವಂತೆ ಚಿತ್ರ ನಿರ್ಮಿಸಿದ್ದಾರೆ.

 ಚಿತ್ರದಲ್ಲಿ ಹಲವಾರು ಟ್ವಿಷ್ಟ್ ಗಳೊಂದಿ ಯಾರೂ ಊಹಿಸದ ರೀತಿಯಲ್ಲಿ ಅಚ್ಚರಿಯ ಕ್ಲೈಮ್ಯಾಕ್ಸ್‌  ಈ ಚಿತ್ರದ ಹೈಲೈಟ್ ಎನ್ನಬಹುದು.

ಗಗನ್ ಬಡೇರಿಯಾ ಅವರ ಹಿನ್ನೆಲೆ ಸಂಗೀತ ಚನ್ನಾಗಿ ಮೂಡಿ ಬಂದಿದೆ. ಮಲೆನಾಡ ಪರಿಸರವನ್ನು ಕಟ್ಟಿಕೊಡುವ ಹಾಡುಗಳು ಕೇಳುಗರ ಗಮನ ಸೆಳೆಯುತ್ತದೆ.

ಮತ್ತು ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಚಿತ್ರಕ್ಕೆ ಸಾಥ್ ನೀಡಿವೆ. ಮಲೆನಾಡಿನ ಸೊಗಡನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲಾಗಿದೆ.

ಒಟ್ಟಿನಲ್ಲಿ ಮಲೆನಾಡ ಸಿರಿಯೊಂದಿಗೆ ವಿಭಿನ್ನ ಪ್ರೇಮಕಥೆಯನ್ನು ಮನರಂಜನಾತ್ಮಕವಾಗಿ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಿನಿಮಾ ನೋಡಬಹುದು ಕೊಟ್ಟ ಕಾಸಿಗೆ ಮೋಸ ಆಗುವುದಿಲ್ಲ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor