KD movie song RELEASED. ಕೆಡಿ ಚಿತ್ರದ ಎರಡನೇ ಹಾಡುಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..

ಕೆಡಿ ಚಿತ್ರದ ಎರಡನೇ ಹಾಡು
ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..

ಈ ವರ್ಷದ ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ಕೆಡಿ ಕೂಡ ಒಂದು. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರಕ್ಕೆ ವಿಲನ್, ಏಕ್‌ ಲವ್‌ ಯಾ ಖ್ಯಾತಿಯ ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ. ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದೆ.

ಈಗಾಗಲೇ ಈ ಚಿತ್ರದ ಮೊದಲ ಹಾಡು, ಶಿವ ಶಿವ ಅತಿ ಹೆಚ್ಚು ವೀಕ್ಷಣೆಯಾಗುವ ಮೂಲಕ ಎಲ್ಲಾ ಕಡೆ ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿದೆ. ಇದೀಗ ಚಿತ್ರದ ಮತ್ತೊಂದು ಹಾಡು ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ ಬಿಡುಗಡೆಯಾಗಿದೆ. ಪ್ರೇಮ್ ಅವರೇ ರಚಿಸಿರುವ ಈ ಹಾಡಿಗೆ ಹೆಸರಾಂತ ಗಾಯಕ‌ ಮಿಖಾ ಸಿಂಗ್ ದನಿಯಾಗಿದ್ದಾರೆ. ಈ ಹಾಡಿಗೆ ಪ್ರೇಮ್ ಹಾಗೂ ಅರ್ಜುನ್ ಜನ್ಯ ಸೇರಿ ಹೊಸ ಐಡಿಯಾ ಹುಡುಕಿದ್ದಾರೆ.
ಸಧ್ಯ ಈ ಹಾಡಿನ ಪ್ರಿಪರೇಶನ್ ವೀಡಿಯೋ ಮಾತ್ರ ಬಿಡುಗಡೆಯಾಗಿದ್ದು ಶೂಟಿಂಗ್ ಇನ್ನೂ ಆಗಬೇಕಿದೆ. ಇಲ್ಲಿ ಹಾಡಿಗೆ ಕೇಳುಗರೇ ಕೊರಿಯಾಗ್ರಾಫರ್. ಹೌದು,‌ ಈ ಹಾಡನ್ನು ಕೇಳಿ, ಅದಕ್ಕೆ ಸೂಕ್ತವಾದ ಒಂದು ಹುಕ್ ಸ್ಟೆಪ್ ನ್ನು ಪ್ರೇಕ್ಷಕರೇ ತಾವೇ ಹಾಕಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕು, ಹಾಗೂ ಚಿತ್ರತಂಡಕ್ಕೆ ಕಳಿಸಬೇಕು. ಅದರಲ್ಲಿ ಬೆಸ್ಟ್ ಮೋಮೆಂಟ್ ಸೆಲೆಕ್ಟ್ ಮಾಡಿ ಹಾಡಲ್ಲಿ ಬಳಸಿಕೊಳ್ಳಲಾಗುತ್ತದೆ. ಅಭಿಮಾನಿಗಳು ಹಾಕಿದ ಸ್ಟೆಪ್ ಅನ್ನು ನಾಯಕ, ನಾಯಕಿ ಹಾಕ್ತಾರೆ. ಆ ಸ್ಟೆಪ್ ಕಳಿಸಿದವರನ್ನು ಸಾಂಗ್ ರಿಲೀಸ್ ಟೈಮಲ್ಲಿ ಕರೆಸಿ ಹಾನರ್ ಮಾಡುತ್ತೇವೆ ಎಂದ ನಿರ್ದೇಶಕ ಪ್ರೇಮ್, ಪ್ರೇಕ್ಷಕರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರಯತ್ನ. ತಮ್ಮ‌ಮೆಚ್ಚಿನ ಸ್ಟಾರ್ ಹೀಗೇ ಡಾನ್ಸ್ ಮಾಡಿದರೆ ಚೆನ್ನಾಗಿರತ್ತೆ ಅಂತ ಕಲ್ಪಿಸಿಕೊಂಡಿರುತ್ತಾರೆ. ಅದನ್ನು ನಾವು ಗೌರವಿಸುತ್ತಿದ್ದೇವೆ ಎಂದು ಹೇಳಿದರು.‌


ಸಂಗೀತ ನಿರ್ದೇಶಕ ಅರ್ಜುನ್ ಜನ್ಯ‌ ಮಾತನಾಡುತ್ತ ನಮ್ಮ ಸ್ಟುಡಿಯೋ ಮೇಲೆ ಮಾತಾಡಿಕೊಂಡಿರುವಾಗ ಹುಟ್ಟಿದ ಹಾಡಿದು.‌ ನಾವೆಲ್ಲ ಈ ಪ್ರಾಜೆಕ್ಟನ್ನು ಒಂದು ತಪಸ್ಸಿನ ಥರ ಮಾಡಿದ್ದೇವೆ. ಒಂದೊಂದು ಸಾಂಗ್ ಗೆ
ಲಕ್ಷಾಂತರ ಖರ್ಚು ಮಾಡಿದ್ದಾರೆ. ಮಿಖಾಸಿಂಗ್ ತುಂಬಾ ಪೇಯೆಬಲ್ ಸಿಂಗರ್. ಅವರು ಕನ್ನಡ ಹಿಂದಿ ಸಾಂಗ್ ಹಾಡಿದ್ದಾರೆ. ಇದೊಂದು ಡಿವೈನ್ ಪ್ರೊಸೆಸ್, ಎಂದರು. ಈ ಹಾಡಿಗೆ ಉಳಿದ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ.
ನಾಯಕ ಧ್ರುವ ಸರ್ಜಾ ಮಾತನಾಡಿ ಆ ಶಿವನ ಅನುಗ್ರಹದಿಂದ ಶಿವ ಶಿವ ಸಾಂಗ್ ಹಿಟ್ ಆಗಿದೆ.6 ಲಕ್ಷಕ್ಕಿಂತ ಹೆಚ್ಚಾಗಿ ರೀಲ್ಸ್ ಆಗಿದೆ. ವೆಂಕಟ್ ನಾರಾಯಣ್ ಅವರು ತುಂಬಾ ಫ್ಯಾಷನೇಟ್ ಪ್ರೊಡ್ಯೂಸರ್. ಈ ಸಿನಿಮಾದ ನಿಜವಾದ ಹೀರೋ ಅವರೇ. ನಾಯಕಿ ರೀಶ್ಮಾ ಅದ್ಭುತವಾದ ಡಾನ್ಸರ್, ಅವರಿಗೆ ಮ್ಯಾಚ್ ಮಾಡಲು ನಾನೂ ಟ್ರೈ ಮಾಡಿದ್ದೇನೆ. ಪ್ರೇಮ್ , ರಕ್ಷಿತಾ ಗುರ್ತಿಸಿದ ಟ್ಯಾಲೆಂಟ್ ರಾಹುಲ್, ಈ ಹಾಡಿಗೆ ತುಂಬಾ ಚೆನ್ನಾಗಿ ಕೊರಿಯಾಗ್ರಾಫ್ ಮಾಡುತ್ತಿದ್ದಾರೆ. ನಾನಂತೂ ಈ ಚಿತ್ರದ ಬಗ್ಗೆ ತುಂಬಾ ಎಕ್ಸೈಟೆಡ್ ಆಗಿದ್ದೇನೆ ಎಂದರು.
ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್ ಮಾತನಾಡುತ್ತ ನಮ್ಮ ಚಿತ್ರದಲ್ಲಿ ಹಾಡುಗಳು ಬಹು ಮುಖ್ಯಪಾತ್ರ ವಹಿಸುತ್ತದೆ. ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ, ಆಗಸ್ಟ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದು ಹೇಳಿದರು.


ನಾಯಕಿ ರೀಶ್ಮಾ ನಾಣಯ್ಯ , ಆನಂದ್ ಆಡಿಯೋದ ಶಾಮ್ ಛಾಯಾಗ್ರಾಹಕ ವಿಲಿಯಂ ಡೇವಿಡ್ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು.
ಪ್ರೇಮ್ ಅವರ ಚಿತ್ರಗಳಲ್ಲಿ ಹಾಡುಗಳೇ ಹೈಲೈಟಾಗಿರುತ್ತೆ. ಅದೇರೀತಿ ಈ ಚಿತ್ರದಲ್ಲೂ ಹಾಡು, ಸಂಗೀತಕ್ಕೆ ಕಥೆ, ಮೇಕಿಂಗ್ ನಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ.
ಕೆಡಿ ಅಂದ್ರೆ ಕಾಳಿದಾಸ, 70ರ ದಶಕದಲ್ಲಿ ನಡೆಯೋ ಕಾಳಿದಾಸನ ರಾ ಲವ್ ಸ್ಟೋರಿಯನ್ನು ನಿರ್ದೇಶಕ ಪ್ರೇಮ್ ಇಲ್ಲಿ ಹೇಳಹೊರಟಿದ್ದಾರೆ. ‌ಇದರ ಮೇಕಿಂಗ್ ಬೇರೆಯದೇ ಲೆವೆಲ್‌ನಲ್ಲಿದೆ. 1970ರ ಕಾಲಮಾನವನ್ನು ತೋರಿಸೋದು ಅಷ್ಟು ಸುಲಭವಲ್ಲ, ಆಗ ಬೆಂಗಳೂರು ಹೇಗಿತ್ತು ಅಂತ ಮೋಹನ್ ಬಿ.ಕೆರೆ ಅವರು ಅದ್ಭುತ ಸೆಟ್ ಹಾಕಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು. ಇನ್ನೂ 4 ಸಾಂಗ್ ರಿಲೀಸಾಗಬೇಕಿದೆ. ಈವರೆಗೆ ನೋಡಿರದ ರೀಶ್ಮಾ ಅವರನ್ನು ಈ ಚಿತ್ರದಲ್ಲಿ ಕಾಣಬಹುದು, ಕಾಳಿದಾಸ ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ, ಆ ಪಾತ್ರವನ್ನು ದ್ರುವ ರಿಯಲಿಸ್ಟಿಕ್ ಆಗಿ ಮಾಡಿದ್ದಾರೆ. ಅರ್ಜುನ್ ಜನ್ಯ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಕೆವಿಎನ್ ಸಂಸ್ಥೆ ನನಗೆ ಈವೆಗೂ ಯಾವುದಕ್ಕೂ ಕೊರತೆ ಮಾಡಿಲ್ಲ ಎನ್ನುತ್ತ ಚಿತ್ರದ ಮತ್ತಷ್ಟು ವಿವರಗಳನ್ನು ಪ್ರೇಮ್ ನೀಡಿದರು.


ಅಂದಹಾಗೆ, 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ, ಚಿತ್ರಕ್ಕಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ಹಾಕಲಾಗಿತ್ತು. ಆರು ಕಲರ್ ಫುಲ್ ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್‌ಗಳು ಕೆಲಸ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಕೆಡಿ ಚಿತ್ರ ಆಗಸ್ಟ ತಿಂಗಳಲ್ಲಿ ತೆರೆಕಾಣಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor