KD movie Shiva Shiva song release on 24th December ಡಿಸೆಂಬರ್ 24 ರಂದು “ಕೆಡಿ” ಚಿತ್ರದ ಶಿವ ಶಿವ ಹಾಡು ಬಿಡುಗಡೆ.
KD
KD ಚಿತ್ರದ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಗೆ ದಿನಗಣನೆಯ ಜೊತೆಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹಾಗೂ ಕುತೂಹಲ ಮೂಡಿದೆ.
ಆನಂದ್ ಆಡಿಯೋ ಸಂಸ್ಥೆ ಕೆಡಿ ಚಿತ್ರದ ಹಾಡುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿರುವುದು ಗಮನಾರ್ಹ ವಾದ ವಿಷಯ. ಪ್ರೇಮ್ ಚಿತ್ರಗಳೆಂದರೆ ಹಾಡುಗಳು ಸೂಪರ್ ಹಿಟ್ ಆಗಿರುತಗತವೆ ಅವರ ಮೊದಲ ಚಿತ್ರದಿಂದ ಹಿಡಿದು ಇಂದಿನವರೆಗೂ ಎಲ್ಲಾ ಚಿತ್ರದ ಹಾಡುಗಳು ಬಹುತೇಕ ಹಿಟ್ ಆಗಿವೆ. ಅದು ಪ್ರೇಮ್ ಸಂಗೀತಕ್ಕೆ ಒತ್ತು ಕೊಡುವದಕ್ಕೆ ಸಾಕ್ಷಿ ಎನ್ನಬಹುದು. ಭೂಗತಲೋಕದಲ್ಲಿ ಕೊತ್ವಾಲ್ , ಜೈರಾಜ್, ಇವರೆಲ್ಲರಿಗೂ ಮುಂಚೆ ರೌಡಿಗಳ ಲೋಕದಲ್ಲಿ ಮೆರೆದಿದ್ದು ಕಾಳಿದಾಸ ಎಂಬ ವ್ಯಕ್ತಿ. ಈತನ ವಿಚಿತ್ರ ಮ್ಯಾನರಿಜಂನ ಕಥೆಯೇ KD (ಕಾಳಿದಾಸ) ಚಿತ್ರವಾಗಿ ಮೂಡಿ ಬರುತ್ತಿದೆ ಎಂದು ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್, ನಾಯಕ ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ (ಕೆವಿಎನ್ ಸಂಸ್ಥೆಯ) ಸುಪ್ರೀತ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕಾಳಿದಾಸ ಪಾತ್ರದ ಹೆಸರು. ಆದರೆ ನಿಜವಾಗಿ ಅದು ಯಾರು ಎಂಬುದನ್ನು ಹೇಳಲಾಗುವುದಿಲ್ಲ. ಏಕೆಂದರೆ ‘ಕರಿಯ’ ಚಿತ್ರ ಮಾಡಿದಾಗ ಅವರ ಮಗಳುನಮ್ಮ ಮೇಲೆ ಕೇಸ್ ಹಾಕಿದ್ದರು. ಅದಕ್ಕಾಗಿ ಇದು ಯಾರ ಪಾತ್ರ, ಯಾರ ಹೆಸರು ಅನ್ನುವುದನ್ನು ಬಹಿರಂಗ ಪಡಿಸುವುದಿಲ್ಲ ಎಂದರು ನಿರ್ದೇಶಕ ಪ್ರೇಮ್.
‘ಕೆಡಿ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಹಾಗೆಯೇ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಎಂದು ಮಾಹಿತಿ ನೀಡಿದರು.
70ರ ದಶಕದಲ್ಲಿ ನಡೆಯುವ ಈ ಕಥೆಗೆ ಅದೇ ಮಾದರಿಯ ವಸ್ತ್ರ ವಿನ್ಯಾಸವನ್ನು ಚಿತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಬದಲಾದ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡಿದರು ನಿರ್ದೇಶಕ ಜೋಗಿ ಪ್ರೇಮ್.
ಡಿಸೆಂಬರ್ 24 ರಂದು ‘ಶಿವ ಶಿವ’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ; ಈ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿದ್ದಾರೆ.
ಚಿತ್ರದಲ್ಲಿ ಆರು ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರ ಹೊಮ್ಮಲಿದೆ ಎಂದರು.
ಜಾನಪದ ಶೈಲಿ ಹಾಡು ಕೂಡ ಚಿತ್ರದಲ್ಲಿದೆ. ಮೊದಲ ಹಾಡು ಇಲ್ಲಿ ಬಿಡುಗಡೆ ಮಾಡಲಾಗುವುದು. ಮತ್ತೊಂದು ಹಾಡು ಮುಂಬೈನಲ್ಲಿ ಬಿಡುಗಡೆ ಕಾಣುತ್ತಿದೆ.
ಹಾಡುಗಳಿಗಾಗಿ ಅರ್ಜುನ್ ಜನ್ಯ 200 ಜನ ವಿಶೇಷ ಸಂಗೀತಗಾರರನ್ನು ಒಟ್ಹಿಗೆ ಸೇರಿಸಿ ಹಾಡುಗಳಿಗೆ ಮ್ಯೂಸಿಕ್ ಮಾಡಿದ್ದಾರೆ. ಹಾಗೂ ಆರು ನೃತ್ಯ ನಿರ್ದೇಶಕರು ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಚಿತ್ರ ಕ್ಯಾಮರಾ ಮೂಲಕ ಚಿತ್ರದ ಕಣ್ಣಾಗಿದ್ದಾರೆ.
ಧ್ರುವ ಸರ್ಜಾ ಕೇವಲ 21 ದಿನದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡು ಈ ಚಿತ್ರದ ಸಲುವಾಗಿ ಬಹಳವೇ ಶ್ರಮ ಹಾಕಿದ್ದಾರೆ. ಅವರ ತ್ಯಾಗ ಮನೋಭಾವ ಬಹಳ ದೊಡ್ಡದು ಎಂದರು. ಇದೇ ಸಂಧರ್ಭದಲ್ಲಿ ನಾನು ನನ್ನ ಅಭಿಮಾನಿಗಳನ್ನು ರಂಜಿಸಲು ಎಂತಹ ತೊಂದರೆಯನ್ನು ಕೂಡ ಎದುರಿಸಲು ಸಿದ್ಧ ಎಂದು .ಧ್ರುವಸರ್ಜಾ ಮಾಧ್ಯಮಗಳಿಗೆ ಹೇಳಿದರು.
ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯಾಗಿ ಧೃವ ಸರ್ಜಾ ಜೋಡಿಯಾಗಿದ್ದಾರೆ. ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಇವರ ಜೊತೆಗೆ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರವು ಮುಂದಿನ ವರ್ಷದ ಯುಗಾದಿ ಹೊತ್ತಿಗೆ ತೆರೆಕಾಣಲಿದೆ ಎಂದು ಕೆ.ವಿ.ಎನ್. ಸಂಸ್ಥೆಯ ಸುಪ್ರೀತ್ ಮಾಹಿತಿ ನೀಡಿದರು.