Karnataka film directors association flag Hastings. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದವರಿಂದ ಸ್ವತಂತ್ರ ದಿನಾಚರಣೆಯ ಸಂಭ್ರಮ.
ಶ್ರೀಯುತ ಪುಟ್ಟಣ್ಣ ಕಣಗಾಲರು ಮತ್ತು ಹಿರಿಯ ನಿರ್ದೇಶಕರು ಕಟ್ಟಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ 41 ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ. ಈ ಸಂದರ್ಭದಲ್ಲಿ (ಆಗಸ್ಟ್ 15 2024) ರಂದು ಬೆಳಿಗ್ಗೆ ಗಾಂಧಿನಗರದಲ್ಲಿರುವ ಸಂಘದ ಕಛೇರಿಯ ಎದುರುಗಡೆ 78ನೇ ಸ್ವಾತಂತ್ರ್ಯೂತ್ಸವನ್ನು ಆಚರಿಸಲಾಯಿತು. ಸಂಘದ ಅದ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸ್ವಾತಂತ್ರ್ಯೋತ್ಸವದಲ್ಲಿ ಟಾಪ್ ಸ್ಟಾರ್ ರೇಣು ಅವರು ಧ್ವಜಾರೋಹಣ ಮಾಡಿದರು. ಆನಂತರ ಅವರು ಚಿತ್ರರಂಗಕ್ಕೆ ಶುಭಾಶಯಗಳನ್ನು ಕೋರಿದರು. ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರು ಮಾತಾನಾಡಿ ಚಲನಚಿತ್ರರಂಗದ ಎಲ್ಲಾ ವಿಭಾಗದ ಮಹನೀಯರಿಗೂ ಮತ್ತು ಸಂಘದ ಸದಸ್ಯರಿಗೂ ಶುಭಾಶಯವನ್ನು ಕೋರುತ್ತಾ ಕಲಾಭಿಮಾನಿಗಳು ಚಿತ್ರಗಳನ್ನು ನೋಡಿ ಹರಸಲಿ ಆಗ ನಮ್ಮ ಚಿತ್ರರಂಗದ ಭವಿಷ್ಯ ಉಜ್ವಲವಾಗುವುದು ಎಂದರು. ಆನಂತರ ಹಿರಿಯ ನಿರ್ದೇಶಕರಾದ ಆದಿತ್ಯ ಚಿಕ್ಕಣ್ಣ, ಖಜಾಂಚಿಗಳಾದ ರಾಮ್ ಪ್ರಸಾದ್ ಎಂ ಡಿ, ಉಪಾಧ್ಯಕ್ಷರಾದ ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಸೆಬಾಸ್ಟಿನ್ ಡೇವಿಡ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ ಮುಂತಾದವರು ಮಾತಾನಾಡಿ ಚಿತ್ರರಂಗಕ್ಕೆ ಶುಭಾಶಯವನ್ನು ಕೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರು ಮತ್ತು ಇತರ ಗಣ್ಯರು ಹಾಜರಿದ್ದರು.