Karavali movie shooting updates. ಉಡುಪಿಯಲ್ಲಿ ಕರಾವಳಿ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಶುರು
ಉಡುಪಿಯಲ್ಲಿ ಕರಾವಳಿ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಶುರು
ಕಂಬಳ ನೋಡಿ ಸಂಭ್ರಮ ಪಟ್ಟ ಪ್ರಜ್ವಲ್ ದೇವರಾಜ್ ಹಾಗೂ ಕರಾವಳಿ ಸಿನಿಮಾ ತಂಡ
ಕಂಬಳ ತಂಡದ ಜೊತೆ ಕರಾವಳಿ ಸಿನಿಮಾ ಟೀಂ
ಕರಾವಳಿ ಪ್ರಜ್ವಲ್ ದೇವರಾಜ್ ಅಭಿನಯದ ಮುಂದಿನ ಸಿನಿಮಾ ಫಸ್ಟ್ ಲುಕ್ ನಿಂದಲೇ ಬಾರಿ ಸದ್ದು ಮಾಡಿದ್ದ ಕರಾವಳಿ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಕೊನೆಯಹಂತದ ಚಿತ್ರೀಕರಣಕ್ಕಾಗಿ ಸಿನಿಮಾತಂಡ ಉಡುಪಿಯಲ್ಲಿ ಬೀಡು ಬಿಟ್ಟಿದೆ. ಸತತ ಒಂದು ತಿಂಗಳುಗಳ ಕಾಲ ಉಡುಪಿಯಲ್ಲಿಯೇ ಚಿತ್ರೀಕರಣ ಮಾಡಲಿದ್ದು ಸಿನಿಮಾಗೆ ಬೇಕಿರೋ ಕಂಬಳದ ಚಿತ್ರೀಕರಣವನ್ನ ಶೂಟ್ ಮಾಡೋದರಲ್ಲಿ ತೊಡಗಿಸಿಕೊಂಡಿದೆ.

ಸದ್ಯ ಮಂಗಳೂರು, ಉಡುಪಿ ಭಾಗದಲ್ಲಿ ಕಂಬಳ ಶುರುವಾಗಿದ್ದು ಸಿನಿಮಾತಂಡ ಕೂಡ ಕಂಬಳದಲ್ಲಿ ಭಾಗಿಯಾಗಿ ಇಡೀ ಕಂಬಳ ಸ್ಪರ್ಧೆ ನೋಡಿ ಖುಷಿ ಪಟ್ಟಿದೆ . ಇದೇ ಮೊದಲಬಾರಿಗೆ ಪ್ರಜ್ವಲ್ ಕಂಬಳ ಲೈವ್ ಆಗಿ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನು ನಾಯಕಿ ಸಂಪದ ಕೂಡ ಮೊದಲಬಾರಿಗೆ ಕಂಬಳ ನೋಡಿದ ಖುಷಿಯಲ್ಲಿದ್ದಾರೆ..

ಕರಾವಳಿ ಈಗಾಗಲೇ 80 ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.