Karavali movie poster release. ಹೊಸ ವರ್ಷಕ್ಕೆ ಕೋಣ ಏರಿ ಬಂದ ಪ್ರಜ್ವಲ್: ಮೈ ಜುಮ್ಮ್ ಎನ್ನುವ ಕರಾವಳಿ ಪೋಸ್ಟರ್ ವೈರಲ್


• ಹೊಸ ವರ್ಷಕ್ಕೆ ಕೋಣ ಏರಿ ಬಂದ ಪ್ರಜ್ವಲ್: ಮೈ ಜುಮ್ಮ್ ಎನ್ನುವ ಕರಾವಳಿ ಪೋಸ್ಟರ್ ವೈರಲ್

ಕರಾವಳಿ, ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.
ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸಿನಿಮಾತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಹೌದು, ಹೊಸ ವರ್ಷಕ್ಕೆ ಕರಾವಳಿ ತಂಡ ರಿಲೀಸ್ ಮಾಡಿರುವ ಪೋಸ್ಟರ್ ಆಕರ್ಷಕವಾಗಿದೆ. ಪ್ರಜ್ವಲ್ ದೇವರಾಜ್ ಕೋಣವೇರಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಣಿ ಮತ್ತು ಮನುಷ್ಯನ ಸಂಘರ್ಷದ ಬಗ್ಗೆ ಇರುವ ಕರಾವಳಿ ಸಿನಿಮಾ ಈಗಾಗಲೇ ಬಾರಿ ನಿರೀಕ್ಷೆ ಮೂಡಿಸಿದೆ.
ಕರಾವಳಿ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಪರ ಭಾಷೆಯಲ್ಲೂ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿನಿಮಾದ ಮೇಲಿನ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಕೇವಲ ಕನ್ನಡದಲ್ಲಿ ಮಾತ್ರ ತಯಾರಾಗುತ್ತಿರುವ ಕರಾವಳಿ ಸಿನಿಮಾ ಪರಭಾಷೆಯಲ್ಲೂ ರಿಲೀಸ್ ಮಾಡುವಂತೆ ಅನೇಕರು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣವೇ ಪ್ರಾರಂಭವಾಗಿಲ್ಲ ಆದರೆ ಆಗಲೇ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯಲ್ಲೂ ಸಿನಿಮಾದ ಬೇಡಿಕೆ ಹೆಚ್ಚಾಗಿರುವುದು ಸಿನಿಮಾ ತಂಡಕ್ಕೆ ಖುಷಿಯ ಜೊತೆಗೆ, ಜವಾಬ್ದಾರಿ ಕೂಡ ಅಷ್ಟೇ ಹೆಚ್ಚಾಗಿದೆ.
ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಕರಾವಳಿ ಸಿನಿಮಾದ ಚಿತ್ರೀಕರಣ ಇದೇ ತಿಂಗಳಿಂದ ಪ್ರಾರಂಭವಾಗಲಿದೆ. ಟೀಸರ್ ಮತ್ತು ಪೋಸ್ಟರ್ ಈ ಪರಿಸದ್ದು ಮಾಡುತ್ತಿರುವುದನ್ನ ನೋಡಿದ್ರೆ, ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾದಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor